ಸದೃಢ ಸರ್ಕಾರ ರಚಿಸಲು ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ಚಲಾಯಿಸಬೇಕು; ಡಾ.ಸಾದಿಯ,

0
299

ಸಂಡೂರು:ಏ:15: ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಮೇ 10 ರ ವಿಧಾನ ಸಭಾ ಚುನಾವಣೆಯ ಮತದಾನ ಕುರಿತು ಜಾಗೃತಿ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಜಾಗೃತಿ ಕಾರ್ಯಕ್ರಮಕ್ಕೆ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಾದಿಯ ಅವರು ಚಾಲನೆ ನೀಡಿ ಮಾತನಾಡಿದರು, ಮತದಾನದ ಪ್ರಮಾಣ ಶೇಕಡ‌ ನೂರಕ್ಕೆ ನೂರರಷ್ಟು ಆಗಲೇಬೇಕು, ಮತ ಚಲಾಯಿಸುವುದು ಪ್ರತಿಯೊಬ್ಬರ ಮೂಲ ಹಕ್ಕು, ಮತ ಚಲಾಯಿಸದೇ ಸರ್ಕಾರದ ವಿರುದ್ಧ ತೆಗಳುವುದು ಸರಿಯಲ್ಲ,ಆಯ್ಕೆ ನಿಮ್ಮದಾಗಬೇಕು, ಮತಚಲಾಯಿಸಿದಾಗ ಕೇಳುವ ಹಕ್ಕು ದೊರೆಯಲಿದೆ, ಸದೃಢ ಸರ್ಕಾರ ರಚನೆಗೆ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡ ಮಾಡಬೇಕು, ಅಸಮರ್ಥರು ನಿಂತಾಗ ನೋಟ ಬಟನ್ ಒತ್ತಿ ಮತಚಲಾವಣೆ ಹಕ್ಕನ್ನು ದೃಢಪಡಿಸಬೇಕು ಎಂದು ನುಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಮತಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ, ಯಾವುದೋ ಸಣ್ಣ ಕಾರಣ ಒಡ್ಡಿ ಮತದಾನ ಮಾಡದಿರುವುದು ಸರಿಯಲ್ಲ, ಎಲ್ಲರೂ ಮತದಾನ ಮಾಡೋಣ ಹಾಗೂ ಜನರಿಗೆ ಮಾತದಾನ ಮಾಡುವಂತೆ ಜಾಗೃತಿ ಮೂಡಿಸೋಣ, ಹೊಸದಾಗಿ ಸೇರ್ಪಡೆಯಾದ ಯುವ ಮತದಾರರ ಮತದಾನ ಹಕ್ಕನ್ನು ಚಲಾಸುವಂತೆ ಮಾಡೋಣ ಎಂದು ತಿಳಿಸುತ್ತಾ ಮುಕ್ತ,ನ್ಯಾಯ ಸಮ್ಮತ,ಮತ್ತು ಶಾಂತಿಯುತ ಚುನಾವಣೆಯ ಘನತೆಯನ್ನು ಎತ್ತಿ ಹಿಡಿದು, ನಿರ್ಭೀತರಾಗಿ, ಧರ್ಮ, ಜನಾಂಗ,ಜಾತಿ,ಮತ,ಭಾಷೆ, ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುವ ಕುರಿತು ಪ್ರತಿಜ್ಞೆ ಭೋದಿಸಿದರು, ಎಲ್ಲರೂ ಪ್ರತಿಜ್ಞೆ ಸ್ವೀಕರಿಸಿದರು,
ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥ ಸಂಚರಿಸಿ ಜಾಗೃತಿ ಮೂಡಿಸಲಾಯಿತು,

ಈ ಸಂದರ್ಭದಲ್ಲಿ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ಗೋಪಾಲ್ ರಾವ್, ಆಪ್ತ ಸಮಾಲೋಚಕರಾದ ಪ್ರಶಾಂತ್, ಶ್ರೀ ರಾಮುಲು, ಯಂಕಪ್ಪ, ಶುಶ್ರೂಷಕರಾದ ಮಾರೇಶ್, ವೆಂಕಟೇಶ್, ಶಶಿಧರ, ಶಿವಕುಮಾರ್, ಇಮ್ರಾನ್,ಗೀತಾ, ಮಾಲಾಶ್ರೀ, ಹುಲಿಗೆಮ್ಮ,ನಾಗರತ್ನ, ಭಾಗ್ಯಲಕ್ಷ್ಮಿ, ತಿಪ್ಪೇಸ್ವಾಮಿ,ರಾಜೇಶ, ರತ್ನಮ್ಮ,ರೋಜಾ, ಮಾಬುಸಾಬು,ಆಶಾ ಕಾರ್ಯಕರ್ತೆಯರಾದ ಬಸಮ್ಮ, ಎರ್ರೆಮ್ಮ, ರಾಜೇಶ್ವರಿ, ತೇಜಮ್ಮ, ಸಾವಿತ್ರಿ, ಸುಶೀಲಮ್ಮ,ನೀಲಮ್ಮ, ಲಕ್ಷ್ಮಿ, ಭಾಗ್ಯ, ವಿಜಯಲಕ್ಷ್ಮಿ, ಶ್ರೀದೇವಿ, ಆಶಾ, ಹನುಮಂತಮ್ಮ, ದೇವಮ್ಮ, ಅನಸೂಯಾ, ತಿಮ್ಮಕ್ಕ,ರೇಖಾ, ಮಂಜುಳಾ, ಹುಲಿಗೆಮ್ಮ,ಪದ್ಮಾ, ಮಂಗಳಾ,ವೆಂಕಟಲಕ್ಷ್ಮಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here