ಇದ್ದೂ ಇಲ್ಲದಂತಾದ ಶುದ್ಧ ಕುಡಿಯುವ ನೀರಿನ ಘಟಕ: ಅಧಿಕಾರಿಗಳ ನಿರ್ಲಕ್ಷ..!!

0
337

ಕೊಟ್ಟೂರು: ಪಟ್ಟಣದ ಅಂಬೇಡ್ಕರ್ ನಗರದ ಜನರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದು ಕಳೆದ ಮೂರು ವರ್ಷಗಳಿಂದ ಹನಿ ನೀರು ಸಿಗದೇ ಯಂತ್ರೋಪಕರಣ ತುಕ್ಕು ಹಿಡಿದು ನಿರುಪಯುಕ್ತ ಗೊಂಡಿರುವುದಕ್ಕೆ ಸ್ಥಳೀಯ ನಿವಾಸಿಗಳು ನಿರ್ಲಕ್ಷ ತೋರಿದ ಅಧಿಕಾರಿಗಳ ಹಿಡಿ ಶಾಪ ಹಾಕುತ್ತಿದ್ದಾರೆ.

ಕಾಲೋನಿಯ ಜನರಿಗಾಗಿ ಮನೆಯಲ್ಲಿ ದಿನ ಬಳಸಲು ಬಟ್ಟೆ, ಪಾತ್ರೆ , ಸ್ನಾನಕ್ಕಾಗಿ ಉಪಯೋಗವಾಗಲಿ ಎಂದು ಶುದ್ಧ ನೀರಿನ ಘಟಕ ನಂತರ ಪಟ್ಟಣ ಪಂಚಾಯಿತಿ ವತಿಯಿಂದ ಕಿರು ನೀರು ಸರಬರಾಜು ಯೋಜನೆಡಿಯಲ್ಲಿ ಮಿನಿ ಟ್ಯಾಂಕ್ ನಿರ್ಮಿಸಿದ್ದು ಇದಕ್ಕೂ ಸಹ ಕಳೆದ ಎರಡು ವರ್ಷದಿಂದ ನೀರು ಸರಬರಾಜು ಮಾಡದೆ ಅತಿಯಾದ ನಿರ್ಲಕ್ಷ ತೋರಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಸ್ಥಳೀಯ ನಿವಾಸಿಗಳಾದ ಎ. ಸತೀಶ್, ಜಿ. ತಿಪ್ಪೇಸ್ವಾಮಿ , ಕೆ. ಮರಿಸ್ವಾಮಿ, ನಾಗವೇಣಿ, ಬಿ.ವೀರೇಶ್ ಇವರು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ.

ಈ ಶುದ್ಧ ಕುಡಿಯುವ ನೀರಿನ ಘಟಕವು ಹಗರಿಬೊಮ್ಮನಹಳ್ಳಿ ರಸ್ತೆಯಲ್ಲಿರುವ ಈ ಘಟಕದ ನೀರನ್ನು ಆವಲಂಬಿಸಿ 300 ( ಮುನ್ನೂರು) ಮನೆ ವಾಸಿಸುತ್ತಿದ್ದಾರೆ. ಈ ಅವ್ಯವಸ್ಥೆಯ ಕುರಿತು ಸಾಕಷ್ಟು ಬಾರಿ ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿಗಳಿಗೆ ದೂರು ನೀಡಿ, ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಕಾಲೋನಿಯ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಕುಡಿಯುವ ನೀರನ್ನು ಖಾಸಗಿ ಘಟಕಗಳಿಂದ ಹಣ ಕೊಟ್ಟು ತಂದು ಕುಡಿಯುತ್ತಿದ್ದೇವೆ ಆದರೆ ಮನೆಯಲ್ಲಿ ದಿನ ಬಳಕೆ ನೀರಿಗಾಗಿ ಅಲ್ಲಿ ಇಲ್ಲಿ ನೀರು ತಂದು ಮನೆಯ ಜವಾಬ್ದಾರಿ ನಿವಾರಿಸುತ್ತೇವೆ ಎಂದು ಮಹಿಳೆಯರು ತಮ್ಮ ಅಳಲನ್ನು ಪತ್ರಿಕೆಯೊಂದಿಗೆ ಹೇಳಿಕೊಂಡರು.

ಸರ್ಕಾರದ ಲಕ್ಷಾಂತರ ರೂ.ಗಳು ಈ ರೀತಿಯಲ್ಲಿ ಯಾವುದಕ್ಕೂ ಪ್ರಯೋಜನಕ್ಕೆ ಬಾರದೆ ವ್ಯರ್ಥ ವ್ಯರ್ಥವಾಗುತ್ತಿರುವುದು ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಾರ್ಯ ವೈಖರಿ ಎತ್ತಿ ತೋರಿಸುತ್ತಿದೆ ಕೂಡಲೇ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಘಟಕದ ಪಕ್ಕದಲ್ಲಿ ಗಿಡ ಗಂಟೆಗಳ ಬೆಳೆದಿದ್ದು ಅದನ್ನು ಸ್ವಚ್ಛ ಮಾಡಿಸಿ ಕಾಲೋನಿ ಜನರ ನೀರಿನ ದಾಹ ತೀರಿಸಲು ಮುಂದಾಗಬೇಕು.

ಹನುಮಂತಪ್ಪ.ಟಿ
ವಕೀಲರ ಹಾಗೂ ಸ್ಥಳೀಯ ನಿವಾಸಿ ಕೊಟ್ಟೂರು.

ಮೂಲಭೂತ ಸೌಕರ್ಯಗಳಲ್ಲಿ ಬಹು ಮುಖ್ಯವಾದದ್ದು ನೀರು ಈ ಕುಡಿಯುವ ನೀರಿಗಾಗಿ ನಾವು ಪ್ರತಿದಿನ ಪರದಾಡುತ್ತಿದ್ದೇವೆ. ವಾರಕ್ಕೊಮ್ಮೆ ಶುದ್ಧೀಕರಿಸದೆ ನೀರಿನಲ್ಲಿ ಬರುವ ಕುಡಿದು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿಸಬೇಕು.

ವೀರಭದ್ರಪ್ಪ .ಬಿ
ಕಾಲೋನಿಯ ನಿವಾಸಿ ಕೊಟ್ಟೂರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here