ಪೂಜಾ ಪಾಟೀಲಗೆ ಪಿಹೆಚ್‍ಡಿ ಪ್ರದಾನ

0
150

ಧಾರವಾಡ:ಜೂ.10: ಇಲ್ಲಿನ ಕೃಷಿ ವಿಶ್ವವಿದ್ಯಾಲಯವು ಪೂಜಾ ಬಸನಗೌಡ ಪಾಟೀಲ ಅವರಿಗೆ ಪಿಹೆಚ್‍ಡಿ ಪದವಿ ಪ್ರದಾನ ಮಾಡಿದೆ.ಇತ್ತೀಚೆಗೆ ನಡೆದ 35 ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿದರು.

ಮಾನವ ವಿಕಾಸ ಮತ್ತು ಕುಟುಂಬ ಅಧ್ಯಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಸುನಂದಾ ಇಟಗಿ ಅವರ ಮಾರ್ಗದರ್ಶನದಲ್ಲಿ “ಸಿದ್ದಿ ಬುಡಕಟ್ಟು ಜನರ ಜೀವನ ಕೌಶಲ್ಯಗಳು ಹಾಗೂ ಗ್ರಾಮೀಣ ಪ್ರೌಢಶಾಲಾ ವಿದ್ಯಾರ್ಥಿಗಳ ವ್ಯಕ್ತಿತ್ವ, ಶೈಕ್ಷಣಿಕ ಸಾಮಥ್ರ್ಯ ಹಾಗೂ ಅಡಚಣೆಗಳು”(Life Skills Profile of Siddi Tribal and Rural High School Students: Personality Traits, Academic Competence and Intervention) ಎಂಬ ಮಹಾಪ್ರಬಂಧ ಮಂಡಿಸಿದ್ದರು.

ಕೃಷಿ ಸಚಿವರು ಹಾಗೂ ಸಹ ಕುಲಾಧಿಪತಿಗಳಾದ ಬಿ.ಸಿ.ಪಾಟೀಲ, ಕುಲಪತಿ ಡಾ.ಎಂ.ಬಿ.ಚೆಟ್ಟಿ ಮತ್ತಿತರ ಗಣ್ಯರು ಇದ್ದರು.

LEAVE A REPLY

Please enter your comment!
Please enter your name here