ಗಣಿ ಕಾರ್ಮಿಕರ ಪಾದಯಾತ್ರೆಗೆ ಮೇಧಾ ಪಾಟ್ಕರ್ ಸಾಥ್, ಭೂ ಮತ್ತು ಗಣಿ ಮಾಫಿಯಾ ದೇಶವನ್ನು ಹಾಳು ಮಾಡುತ್ತಿವೆ.

0
176

ಸಂಡೂರು:ಆ:೧೩:-ಗಣಿಕಾರ್ಮಿಕರ ಸಮಗ್ರ ಅಭಿವೃದ್ಧಿ, ಪುನರ್ವಸತಿ ಮೊದಲ ಅಧ್ಯತೆಯಾಗಬೇಕಿದೆ. ಇದಕ್ಕೆ ಕರ್ನಾಟಕ ಗಣಿ ಪರಿಸರ ಪುನರುಜ್ಜೀವನ ನಿಗಮ (ಕೆಎಂಆರ್ ಸಿ) ನಿಗದಿತ ಅನುದಾನ ಮೀಸಲಿಡಬೇಕು ಈ ಹಣ ಪಡೆಯುವುದು ಕಾರ್ಮಿಕರ ಹಕ್ಕಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಿಲ್ಲಾ ಗಣಿ ಕಾರ್ಮಿಕರ ಸಂಘ (ಎಐಸಿಟಿಯು) ನೇತೃತ್ವದಲ್ಲಿ ಆರ್ ಅಂಡ್ ಆರ್ ನಲ್ಲಿ ಗಣಿ ಕಾರ್ಮಿಕರಿಗೆ ಸಮಗ್ರ ಮನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಬಳ್ಳಾರಿಯ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮಂಗಳವಾರ ಆರಂಭವಾದ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಭೂ ಮತ್ತು ಗಣಿ ಮಾಫಿಯಾ ದೇಶವನ್ನು ಹಾಳು ಮಾಡುತ್ತಿವೆ. ಮತ್ತೊಂದೆಡೆ ಅಂಬಾನಿ, ಅದಾನಿ, ಮಿತ್ತಲ್, ಸೇರಿ ಕೇಳವರಷ್ಟೇ ಭಾರಿ ಶ್ರೀಮಂತರಾಗುತ್ತಿದ್ದಾರೆ. ಅಕ್ರಮ ಗಣಿಗಾರಿಕೆಯ ಆಳ, ಅಗಲವನ್ನು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ತಮ್ಮ ವರದಿಯಲ್ಲಿ ಬಯಲಿಗೆ ಎಳೆದಿದ್ದಾರೆ,” ಎಂದು ಸ್ಮರಿಸಿದರು.

ನ್ಯಾಯಯುತ ಪಾಲು ದೊರೆಯಲಿ:-

“ಹಲವು ರಾಜಕೀಯ ಪಕ್ಷಗಳ ಮುಖಂಡರು, ಕಂದಾಯ, ಅರಣ್ಯ, ಕಾರ್ಮಿಕ ಇಲಾಖೆ ಸೇರಿ ಹಲವು ಇಲಾಖೆ ಅಧಿಕಾರಿಗಳು ಹೇಗೆ ಅಕ್ರಮ ನಡೆಸಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಮತ್ತೊಂದೆಡೆ ಗಣಿಗಳಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡದೆ ಇದ್ದಕ್ಕಿದ್ದಂತೆ ಕೆಲಸದಿಂದ ತೆಗೆದು ಹಾಕಿದ್ದು ಅನ್ಯಾಯ. ಅದಕ್ಕಾಗಿ ಆರ್ ಆ್ಯಂಡ್ ಆರ್‌ ನಲ್ಲಿ ಬಂದ 20 ಸಾವಿರ ಕೋಟಿ ರೂ. ಗಳಲ್ಲಿ ಗಣಿಗಾರಿಕೆ ಬಂದ್ ಆದ 10 ವರ್ಷಗಳಲ್ಲಿ ಅನ್ಯಾಯಕ್ಕೊಳಗಾದ ಕಾರ್ಮಿಕರಿಗೆ, ವೃದ್ಧರಿಗೆ, ಮಹಿಳೆಯರಿಗೆ ನ್ಯಾಯಯುತವಾದ ಒಂದು ಪಾಲನ್ನು ನೀಡಬೇಕು,” ಎಂದು ಒತ್ತಾಯಿಸಿದರು.

ಸಮ ಸಮಾಜ ಸಾಕಾರವಾಗಲಿ:-

ಚಿತ್ರನಟ ಚೇತನ್ ಮಾತನಾಡಿ, ‘ಗಣಿ ಕಾರ್ಮಿಕರು ಗಣಿಗಾರಿಕೆಯಲ್ಲಿ ತೊಡಗಿದಾಗಲೂ ಮತ್ತು ಅಕ್ರಮ ಗಣಿಗಾರಿಕೆಗೆ ಕಡಿವಾಣ ಬಿದ್ದಾಗಲೂ ಶೋಷಣೆಗೊಳಗಾಗಿದ್ದಾರೆ. ಪ್ರಬಲರು ಹಣ ಮಾಡಲು ಪರಿಸರ ನಾಶ ಮಾಡಿ, ನಿರುದ್ಯೋಗದ ಸ್ಥಿತಿ ನಿರ್ಮಿಸಿದ್ದಾರೆ, ಅಕ್ರಮ ಗಣಿಗಾರಿಕೆ ನಡೆಸಿದ ರಾಜಕೀಯ ನಾಯಕರು ಜೈಲಿಗೆ ಹೋಗಿ ಬಂದರೂ ಮೆರೆಯುತ್ತಿದ್ದಾರೆ. ವ್ಯವಸ್ಥೆ ಹದಗೆಟ್ಟಿದೆ. ಗಣಿ ಕಾರ್ಮಿಕರಿಗಾಗಿ ವಸತಿ, ಶಿಕ್ಷಣ, ಆರೋಗ್ಯ, ನಿರುದ್ಯೋಗ ನಿವಾರಣೆ ಸೇರಿ ಒಟ್ಟಾರೆ ಮನರ್ವಸತಿ ಕಲ್ಪಿಸಬೇಕು. ಬುದ್ಧ ಬಸವ, ಅಂಬೇಡ್ಕರ್, ಪೆರಿಯಾರ್, ಕುವೆಂಪು ಬಯಸಿದ ಸಮ ಸಮಾಜ ನಿರ್ಮಾಣ ಮಾಡಬೇಕು,” ಎಂದು ಆಶಿಸಿದರು.

ಸಂಘಟನೆಯ ಜಿಲ್ಲಾ ಅಧ್ಯಕ್ಷ ಗೋಪಿ ಅವರು, 2013 ರಿಂದ ಗಣಿ ಕಾರ್ಮಿಕರು ಅನುಭವಿಸುತ್ತಿರುವ
ಸಂಕಷ್ಟಗಳ ಸರಣಿಯನ್ನೇ ಬಿಚ್ಚಿಟ್ಟರು. ರಾಜ್ಯ ಘಟಕದ ಅಧ್ಯಕ್ಷ ಕ್ರಿಪ್ಪನ್‌ ರಿಜೂರ್, ಪ್ರದಾನ ಕಾರ್ಯದರ್ಶಿ ಮೈತ್ರಿ ಕೃಷ್ಣನ್, ತಾಲೂಕು ಘಟಕದ ಅಧ್ಯಕ್ಷ ಯರಿಸ್ವಾಮಿ, ಮುಖಂಡ ಭಾರದ್ವಾಜ್ ಮಾತನಾಡಿದರು. ಕೀರ್ತನಾ ರಜಾರಿಯಾ, ಶಾಂತಮ್ಮ, ಪೀರಾ, ಸ್ಥಳೀಯ ಜೆಡಿಎಸ್‌ ಅಧ್ಯಕ್ಷ ಕುರೇಕುಪ್ಪದ ಎನ್.ಸೋಮಪ್ಪ ಸೇರಿ ಹಲವು ತಾಲೂಕುಗಳಿಂದ ಆಗಮಿಸಿದ್ದ ಗಣಿ ಕಾರ್ಮಿಕರು, ಅವರ ಕುಟುಂಬದವರು ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here