ತೋರಣಗಲ್ಲು ಜೆ.ಎನ್. ಆರ್ ಕ್ಯಾಂಪಿನಲ್ಲಿ ವಿಶ್ವ ದೃಷ್ಟಿ ದಿನಾಚರಣೆ ಕುರಿತು ಜಾಗೃತಿ

0
605

ಸಂಡೂರು:ಆ:19:-ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಜೆ.ಎನ್.ಆರ್ ಕ್ಯಾಂಪಿನಲ್ಲಿ ವಿಶ್ವ ದೃಷ್ಟಿ ದಿನ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,

ಕಾರ್ಯಕ್ರಮ ಉದ್ದೇಶಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ದೃಷ್ಟಿ ಚೆನ್ನಾಗಿರಲು ಕಣ್ಣಿನ ಕಾಳಜಿ ಮಾಡುವುದು ಅತ್ಯವಶ್ಯಕ, ದೃಷ್ಟಿ ಹೋದರೆ ಇಡೀ ಪ್ರಪಂಚವೇ ಕುರುಡಾದಂತೆ, ವಿಶಾಲವಾದ ಜಗತ್ತನ್ನು ನೋಡಲು ನಮ್ಮ ಕಣ್ಣಿನ ದೃಷ್ಟಿ ಉತ್ತಮವಾಗಿರಬೇಕು ಅದಕ್ಕಾಗಿ ನಾವು ನಮ್ಮ ಕಣ್ಣುಗಳ ಬಗ್ಗೆ ಕಾಳಜಿ ವಹಿಸಬೇಕು, ಕಣ್ಣಿಗೆ ತೊಂದೆರೆ ಕೊಡುವ ಯಾವ ಕೆಲಸವನ್ನು ನಿರ್ಲಕ್ಷ್ಯ ಮಾಡಬಾರದು, ಕಣ್ಣಿಗೂ ಹಚ್ಚ ಹಸಿರಿನ ಪರಿಸರ ನೋಡುವುದು, ಹೆಚ್ಚು ಹೆಚ್ಚು ಹಸಿರು ಸೊಪ್ಪುಗಳು, ಕ್ಯಾರೆಟ್ ನಂತಹ ತರಕಾರಿಗಳನ್ನು ಹೆಚ್ಚಾಗಿ ಬಳಸುವುದು ಮತ್ತು ಹಳದಿ ಬಣ್ಣದ ಆರೇಂಜ್, ಪಪ್ಪಾಯಿ ಹಾಗೂ ಸೀತಾ ಫಲ ದಂತ ಸ್ಥಳೀಯ ಹಣ್ಣುಗಳನ್ನು ಸೇವನೆ ಮಾಡಬೇಕು, ಟಿ.ವಿ, ಕಂಪೂಟರ್ ನೋಡುವವರು ಕಣ್ಣಿಗೆ ವಿರಾಮ ನೀಡಬೇಕು, ಸರಳವಾಗಿ ಮಾಡುವ ಎಕ್ಸ್ರೈಜ್ ನಿಯಮಿತವಾಗಿ ಮಾಡಬೇಕು, ಮಕ್ಕಳಿಗೆ ವಿಟಮಿನ್ ಎ ದ್ರಾವಣ ತಪ್ಪದೇ ಒಂಬತ್ತು ಬಾರಿ ಕುಡಿಸ ಬೇಕು, ಮಕ್ಕಳಿಗೆ ದೃಷ್ಟಿ ದೋಷ ವಿದ್ದರೆ ಮತ್ತು 30 ಮೇಲ್ಪಟ್ಟ ಎಲ್ಲರೂ ಕಣ್ಣಿನ ನಿಗದಿತವಾಗಿ ತಪಾಸಣೆ ಮಾಡಿಸಬೇಕು, ದೋಷ ಕಂಡುಬಂದರೆ ಕನ್ನಡಕಗಳನ್ನು ಬಳಸಬೇಕು, ಅಂದತ್ವ ನಿವಾರಣ ಕಾರ್ಯಕ್ರಮದಲ್ಲಿ ಕನ್ನಡಕಗಳನ್ನು ಉಚಿತವಾಗಿ ನೀಡಲಾಗುತ್ತದೆ, ಹಬ್ಬಗಳ ಸಮಯದಲ್ಲಿ ಪಟಾಕಿ ಸಿಡಿಸುವಾಗ ಎಚ್ಚರಿಕೆ ವಹಿಸಬೇಕು, ಇಲ್ಲದಿದ್ದರೆ ಎಷ್ಟೋ ಮಕ್ಕಳಿಗೆ ಕಣ್ಣಿಗೆ ಅಪಾಯವಾಗುತ್ತದೆ, ಕಾರ್ಖಾನೆಯ ಕೆಲಸದಲ್ಲಿರುವವರು ಕಣ್ಣಿನ ಸುರಕ್ಷತೆಗಾಗಿ ಕನ್ನಡಕ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು, ಮಸಕು ಮಸುಕು ಕಾಣಿಸುವಾಗ ಹೆಚ್ಚು ಒತ್ತಡವನ್ನು ಹಾಕಿ ಓದಬಾರದು, ಮಧುಮೇಹ ಇರುವವರಿಗೆ ದೃಷ್ಟಿ ಸಾಮರ್ಥ್ಯ ಕಡಿಮೆಯಾಗುವ ಸಂಭವ ಹೆಚ್ಚು, ಇಂತಹ ಸಮಯದಲ್ಲಿ ಕಣ್ಣಿನ ಪರೀಕ್ಷೆ ಅವಶ್ಯಕವಾಗಿರುತ್ತದೆ ಹತ್ತಿರದ ಕಣ್ಣಿನ ಆಸ್ಪತ್ರೆಗಳಿಗೆ ಬೇಟಿ ಕೊಟ್ಟು ತಪಾಸಣೆ ಮಾಡಿಸಿ ಕಣ್ಣಿನ ದೃಷ್ಟಿಯ ರಕ್ಷಣೆ ಮಾಡಬೇಕು ಮತ್ತು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು,

ದಿವಂಗತ ಪುನೀತ್ ರಾಜ್ ಕುಮಾರ್ ಅವರ ಆಸೆಯಂತೆ ಕಣ್ಣಿನ ತೊಂದರೆಗೆ ಒಳಗಾದವರ ಬಾಳಿನಲ್ಲಿ ಬೆಳಕಾಗಲು ಮತ್ತು ಸಾವಿನ ನಂತರದ ಸಾರ್ಥಕತೆಗಾಗಿ ನೇತ್ರದಾನ ಮಾಡಲು ನೊಂದಣಿ ಮಾಡಿಕೊಳ್ಳಬೇಕು ಎಂದು ಅಪ್ಪುವನ್ನು ನೆನೆದು ಮನವಿ ಮಾಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಗ್ರಾಮದ ನಾಗರೀಕರಾದ ಶ್ರೀರಾಮುಲು, ಕೆ.ರಾಮಾಂಜನಿ, ಲಕ್ಷ್ಮಿ ದೇವಿ, ಕಾಮಾಕ್ಷಿ, ಕವಿತ, ನೀಲಾವತಿ, ಪುಷ್ಪಾವತಿ, ಈರಮ್ಮ, ಸುಲೋಚನಾ, ಜಯಮ್ಮ, ಪೂಜಾ, ಅಶಾ ಕಾರ್ಯಕರ್ತೆ ಹುಲಿಗೆಮ್ಮ, ಪದ್ಮಾ, ಶ್ರೀ ದೇವಿ, ರೇಖಾ, ವೆಂಕಟಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ಉಮಾದೇವಿ, ಪಾರ್ವತಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here