ಆರೋಗ್ಯದ ಜಾಗೃತಿಗಾಗಿ 21 ಕಿ ಮೀ ಮ್ಯಾರಥಾನ್ ಮಾಡಿದ ವಕೀಲ ಮೋಹನ್ ಕುಮಾರ್ ದಾನಪ್ಪ!

0
274

ಬೆಂಗಳೂರು: ಡಿ18, ನ್ಯಾಯಾಂಗ ಬಡಾವಣೆಯಲ್ಲಿ ಉತ್ತಮ ಆರೋಗ್ಯದ ಜಾಗೃತಿಗಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಸಿಜಿಸಿ ಮೋಹನ್ ಕುಮಾರ್ ದಾನಪ್ಪನವರು 21 ಕಿಲೋ ಮೀಟರ್ ಓಡುವ ಮೂಲಕ ನ್ಯಾಯಾಂಗ ಬಡಾವಣೆಯ ಜನರ ಗಮನ ಸೆಳೆದರು!

ಇತ್ತಿಚ್ಚಿನ ದಿನಗಳಲ್ಲಿ ಮಧ್ಯ ವಯಸ್ಸಿನ ಜನರು ಹೃದಯಾಘಾತದಿಂದ ಅಕಾಲಿಕ ಮರಣ ಹೊಂದುತ್ತಿರುವುದು ದೇಶದ ಜನರನ್ನ ಆತಂಕಕ್ಕೀಡು ಮಾಡಿದೆ, ಸಮಯವಿಲ್ಲದ ಒತ್ತಡದ ಜೀವನವು ಮತ್ತು ಮೊಬೈಲ್ ಗೀಳಿನಲ್ಲಿ ಮುಳಿಗಿದ ಜನರು ದೇಹಕ್ಕೆ ಸರಿಯಾದ ಚಟುವಟಿಕೆಯಿಲ್ಲದೆ ಇರುವುದರಿಂದ ಸಹ ಮರಣ ಹೊಂದಲು ಮುಖ್ಯ ಕಾರಣವಾಗಿರುತ್ತದೆ,
ಚಳಿಗಾಲದಲ್ಲಿ ತಾಪಮಾನ ಏರಿಳಿತದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು ಆರೋಗ್ಯದ ಬಗ್ಗೆ ಜಾಗೃತಿವಹಿಸುವಂತೆ ಹಾಗೂ ಯುವಕರು,ಎಲ್ಲಾ ವಯಸ್ಸಿನ ಜನರು ದಿನದ ಒಂದು ಗಂಟೆ ಅವಧಿಯನ್ನ ಸಧೃಡ ದೇಹ, ಉತ್ತಮ ಆರೋಗ್ಯ ಹೊಂದಲು ವ್ಯಾಯಾಮಕ್ಕಾಗಿ ಸಮಯವನ್ನ ಮೀಸಲಿಡಬೇಕೆಂದು ಕರೆ ನೀಡಿದರು!

ನಾನೊಬ್ಬ ಹವ್ಯಾಸಿ ಮ್ಯಾರಥಾನರ್ ಆಗಿದ್ದು ಸಮಾಜದ ಹಲವಾರು ವಿಷಯಗಳ ಬಗ್ಗೆ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡಿರುತ್ತೇನೆ, ನ್ಯಾಯಾಂಗ ಬಡಾವಣೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ನ ನ್ಯಾಯಾಧೀಶರು, ನಿವೃತ್ತ ನ್ಯಾಯಾಧೀಶರು, ಅಡ್ವೋಕೇಟ್ ಜನರಲ್ ಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ವಕೀಲರು ಹಾಗೂ ವಕೀಲ ಸಮೂಹ ಹೆಚ್ಚಿಗೆ ವಾಸಿಸುತ್ತಿದ್ದು ಸದಾ ಒತ್ತಡದ ಜೀವನ ನಡೆಸುತ್ತಿರುವ ಇವರುಗಳಿಗೆ ನ್ಯಾಯಾಲಯಗಳು ಚಳಿಗಾಲದ ರಜೆಯನ್ನ ನೀಡಿದ್ದು ಈ ಸಮಯವನ್ನ ಆರೋಗ್ಯದ ಕಡೆ ಗಮನ ನೀಡುವಂತೆ ಜಾಗೃತಿಗಾಗಿ ಈ ಪ್ರದೇಶವನ್ನ ಆಯ್ಕೆ ಮಾಡಿಕೊಂಡಿದ್ದಾಗಿ ಮತ್ತು 21.1 ಕಿಲೋ ಮೀಟರ್ ಓಟವನ್ನ 2 ಗಂಟೆ 20 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ತಿಳಿಸಿದರು!

LEAVE A REPLY

Please enter your comment!
Please enter your name here