ರೈತರು ಮೀನುಗಾರಿಕೆ ಉಪಕಸುಬು ರೂಡಿಸಿಕೊಂಡರೆ ವರ್ಷದಲ್ಲಿ ಉತ್ತಮ ಆದಾಯ ಗಳಿಸಬಹುದು :ಡಾ.ಹೆಚ್.ಎನ್. ಗೋಪಾಲಕೃಷ್ಣ

0
99

ಜಿಲ್ಲೆಯಲ್ಲಿ ರೈತರು ಮೀನುಗಾರಿಕೆ ಉಪಕಸುಬಿನಲ್ಲಿ ತೊಡಗಿಸಿಕೊಂಡರೆ ಉತ್ತಮ ಆದಾಯವನ್ನ ಗಳಿಸಬಹುದು. ರೈತರು ಮೀನುಗಾರಿಕೆ ಯೋಜನೆಯ ಮಾಹಿತಿ ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ಅವರು ತಿಳಿಸಿದರು.

ಅವರು ಇಂದು ನಡೆದ ಮೀನುಗಾರಿಕೆ ಇಲಾಖೆ ವತಿಯಿಂದ 2022-23 ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆಯಲ್ಲಿ‌ 2022-23 ನೇ ಸಾಲಿನ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಅನುಮೋದನೆ ನೀಡಿ ಜನವರಿ ಅಂತ್ಯದೊಳಗೆ ನಿಗದಿತ ಗುರಿ ಸಾಧಿಸುವಂತೆ ತಿಳಿಸಿದರು.

ಮೀನುಗಾರಿಕೆಗೆ ಸಂಬಂಧಿಸಿದಂತೆ ಮೀನು ಮರಿ ಸಾಕಣಿಕೆ, ಶೀತ ಸಂಗ್ರಾಹಗಾರ ಯೋಜನೆ, ಮೀನುಗಳನ್ನು ಬೆಳೆಸುವುದು ಸೇರಿದಂತೆ ಹದಿನಾರು ತರಹದ ಕಾರ್ಯಕ್ರಮಗಳಿವೆ. ಸುಮಾರು ಒಟ್ಟು 256 ಯೂನಿಟ್ಸ್ ಗಳಿಗೆ ಸಂಬಂಧಿಸಿದಂತೆ ಅರ್ಜಿಗಳು ಬಂದಿದೆ ಎಂದರು.

ಜಿಲ್ಲೆಗೆ ಕೊಟ್ಟಿರುವ ಗುರಿಯ ಪ್ರಕಾರ 9.12 ಕೋಟಿ ರೂ ಯೋಜನಾ ವೆಚ್ಚ ನಿಗದಿಯಾಗಿದ್ದು, 4.67 ಕೋಟಿ ಸಹಾಯಧನ ನೀಡಲು ಅವಕಾಶವಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಡಿ ಸ್ವೀಕರಿಸಲಾಗಿರುವ ಬೇಡಿಕೆಗೆ 27 ಕೋಟಿ ರೂ ಯೋಜನೆಗೆ ಹಾಗೂ ಸಬ್ಸಿಡಿ 14.ಕೋಟಿ 67 ಲಕ್ಷ ರೂ ಬೇಕಾಗುತ್ತದೆ. ಜಿಲ್ಲೆಗೆ ನಿಗದಿ ಮಾಡಿರುವ ಗುರಿಯನ್ನು ಪೂರ್ಣಗೊಳಿಸಿ ಹೆಚ್ಚುವರಿ ಬೇಡಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.

ಪ್ರಗತಿಪರ ಮೀನು ಕೃಷಿಕರಾದ ಸುರೇಶ್ ಕಾರೇಪುರದವರು ಸುಮಾರು ಎರಡುವರೆ ಎಕ್ಕರೆ ಜಮೀನಿನಲ್ಲಿ ಮೀನು ಸಾಕಣೆಯಲ್ಲಿ ತೊಡಗಿ ಉತ್ತಮವಾದ ಆದಾಯವನ್ನು ಮಾಡುತ್ತಿದ್ದಾರೆ. ರೈತರು ಕೃಷಿಗೆ ಯೋಗ್ಯವಲ್ಲದ ಸವಳು ನೆಲದಲ್ಲಿ ಮೀನು ಸಾಕಣೆಯಲ್ಲಿ ತೊಡಗಿಸಿಕೊಂಡರೆ ವರ್ಷಕ್ಕೆ ಉತ್ತಮ ಆದಾಯ ಗಳಿಸಬಹುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಂಜೀವಪ್ಪ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ವಿ. ಎಸ್ ಅಶೋಕ್, ಲೀಡ್ ಬ್ಯಾಂಕ್ ಮ್ಯಾನೇಜರ್ ಎಮ್. ಪಿ ದೀಪಕ್, ಮೀನುಗಾರಿಕೆ ಇಲಾಖೆ ಅಧಿಕಾರಿ ಲೋಕೇಶ್, ವಿ.ಸಿ ಫಾರಂ, ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಮಹೇಶ್, ಮೀನುಗಾರಿಕೆ ಉಪ ನಿರ್ದೇಶಕ ಮಂಜೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here