ಮಕ್ಕಳ ಅಪೌಷ್ಟಿಕ ನಿವಾರಣೆಗೆ ಸಸಾರಜನಕಯುಕ್ತ ಆಹಾರ ಕೊಡಿ; ಡಾ.ಭರತ್ ಕುಮಾರ್,

0
266

ಸಂಡೂರು ಪಟ್ಟಣದ ಪರಿಶಿಷ್ಟ ವರ್ಗದ ವಸತಿ ಶಾಲೆಯಲ್ಲಿ ಬಾಲ ಚೈತನ್ಯ ಶಿಬಿರದಲ್ಲಿ ಅಪೌಷ್ಟಿಕ‌ ಮಕ್ಕಳ ತಾಯಂದಿರಿಗೆ ಮಕ್ಕಳ ಆರೋಗ್ಯ ಸುಧಾರಣೆ ಕುರಿತು ಅರಿವು ಮೂಡಿಸಲಾಗುತ್ತಿದ್ದು, ಸಸಾರಜನಕಯುಕ್ತ ಆಹಾರ ಕೊರತೆಯಿಂದ ಉಂಟಾಗುವ ಕ್ವಾಷಿಯರ್ಕರ್ ಮತ್ತು ಮರಾಸ್ಮಸ್ ಕಾಯಿಲೆ ಕುರಿತು ಅರಿವು ಮೂಡಿಸಲಾಯಿತು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಅಪೌಷ್ಟಿಕ ಹೋಗಲಾಡಿಸಲು ಏಕದಳ ದಾನ್ಯಗಳಿಂದ ತಯಾರಿಸುವ ಆಹಾರ ಪದಾರ್ಥಗಳಲ್ಲಿ ದ್ವಿದಳ ದಾನ್ಯ ಸೇರಿಸಿ ತಯಾರಿಸಿ ಸೂಕ್ತ ಸಮಯದಲ್ಲಿ ಕೊಡಬೇಕು, ದ್ವಿದಳ ಧಾನ್ಯಗಳನ್ನು ಮೊಳಕೆ ಬರಿಸಿ ಸ್ವಲ್ಪ ಉಪ್ಪು, ಎರಡು ಹನಿ ನಿಂಬೆಹುಳಿ,ಸ್ವಲ್ಪ ಹಸಿ ಕೊಬ್ಬರಿ,ಕೊತ್ತಂಬರಿ ಸೊಪ್ಪು,ಕ್ಯಾರೆಟ್ ತುರಿ ಸೇರಿಸಿ ಕೊಡುವುದರಿಂದ ಹೆಚ್ಚು ಪ್ರೋಟೀನ್ ಗಳು ಮಕ್ಕಳಿಗೆ ಸಿಗುತ್ತವೆ, ಬೆಲ್ಲ, ತುಪ್ಪ, ಡ್ರೈಪುಡ್ಸ್ ಸೇರಿಸಿ ಕೊಟ್ಟರೆ ಇನ್ನೂ ಉತ್ತಮ, ರೊಟ್ಟಿ-ಚಪಾತಿ ತಯಾರಿಸುವಾಗ ಸೊಪ್ಪುಗಳನ್ನು ಸೇರಿಸಿ ರುಚಿಕಟ್ಟಾಗಿ ತಯಾರಿಸಿಕೊಡಬೇಕು, ಇಂತಹ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ಕೊಡುವುದರಿಂದ ಅಪೌಷ್ಟಿಕತೆ ಹೋಗಲಾಡಿಸ ಬಹುದು ಎಂದು ತಿಳಿಸಿದರು, ಹಾಗೆ ಮಕ್ಕಳ ಆರೋಗ್ಯ ತಪಾಸಣೆಯೂ ಮುಂದುವರೆಸಲಾಗಿದೆ,

ಈ ಸಂದರ್ಭದಲ್ಲಿ ಸಿ.ಡಿ.ಪಿ.ಒ ಎಳೆನಾಗಪ್ಪ,ತಾಲೂಕು ಆರೋಗ್ಯಾಧಿಕಾರಿ ಭರತ್ ಕುಮಾರ್, ಡಾ.ಸುಮಿತ್ರಾ, ಡಾ.ಚೇತನಾ ಗೌಡ, ಡಾ.ರಮ್ಯಾ, ಮಹಿಳಾ ಮೇಲ್ವಿಚಾರಕರಾದ ಎ.ಪಿ ಕುಂಬಾರ್, ಲಕ್ಷ್ಮಿ ಕಂಕಣವಾಡಿ, ಮಕ್ಕಳ ತಾಯಂದಿರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here