ವಯೋಸಹಜ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು

0
97

ಸಂಡೂರು:ಜ:30:-ಸಂಡೂರು ಬಿ ವೃತ್ತದ ಅಂಗನವಾಡಿ ಕೇಂದ್ರಗಳಲ್ಲಿನ ವಯೋ ನಿವೃತ್ತಿಯಾದಂಥಹ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸಿಡಿಪಿಓ ಎಲೆ ನಾಗಪ್ಪ, ವೃತದ ಮೇಲ್ವಿಚಾರಕರಾಕಿ ಭಜಂತ್ರಿ,ಅಂಬಿಕಾ ಕುಂಬಾರ್, ಮತ್ತು ಅಂಗನವಾಡಿ ಕಾರ್ಯಕರ್ತೆಯರಾದ ಟಿ.ಕವಿತಾ ಬಿ.ಶಾರದ ಎಲ್ಲಮ್ಮ ಎಂ.ಶಾರದಾ ಹಾಗೂ ವೃತ್ತದ ಎಲ್ಲಾ ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು

ಡಿ ಮಲ್ಲಾಪುರ ಗ್ರಾಮದ ಎರಡನೇ ಅಂಗನವಾಡಿ ಕೇಂದ್ರದ ಕಾರ್ಯಕರ್ತ ಎ.ಎಂ. ಪಾರ್ವತಮ್ಮ ಅವರು ಇಲಾಖೆಯಲ್ಲಿ 32 ವರ್ಷ ಸೇವೆಯನ್ನು ಮತ್ತು ಡಿ ಮಲ್ಲಾಪುರ ಒಂದನೇ ಕೇಂದ್ರದ ಅಂಗನವಾಡಿ ಸಹಾಯಕಿ ದೊಡ್ಡಬಸಮ್ಮ 36 ವರ್ಷ ಸೇವೆಯನ್ನು ಯಶವಂತನಗರ ಗ್ರಾಮದ ಸೋಮಲಾಪುರ ಅಂಗನವಾಡಿ ಸಹಾಯಕಿ ಸುಶೀಲಮ್ಮ 18 ವರ್ಷ ಸೇವೆಯನ್ನು, ಎಸ್‌ ಬಿ ಹಳ್ಳಿ ಎರಡನೇ ಕೇಂದ್ರದ ಸಹಾಯಕಿ ಗೌರಮ್ಮ 25 ವರ್ಷಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆಯನ್ನು ಮಾಡಿ ವಯೋಸಹಜ ನಿವೃತ್ತಿಯನ್ನು ಹೊಂದಿರುತ್ತಾರೆ.

ಈ ಕಾರ್ಯಕ್ರಮವನ್ನು ಯಶವಂತನಗರ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು

LEAVE A REPLY

Please enter your comment!
Please enter your name here