ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಬಳ್ಳಾರಿ ನಗರಕ್ಕೆ ಬಿಜೆಪಿ ಅಭ್ಯರ್ಥಿ ಯಾರು…!?

0
130

ಬಳ್ಳಾರಿ:ಪೆ:04:- ಬಳ್ಳಾರಿ ಎಲ್ಲಾ ರಂಗದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಖ್ಯಾತಿಯನ್ನು ಪಡೆಯುತ್ತಾ ಬಂದಿದೆ, ಇತ್ತೀಚಿನ ಕೆಲ ದಿನಗಳಿಂದ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳಿಂದ ರಾಜಕೀಯ ಚಟುವಟಿಕೆಗಳು ಇನ್ನಿಲ್ಲದಂತೆ ಗರಿಗೆದರಿ ದಿನಕ್ಕೊಂದು ರಂಗುಪಡೆಯುತ್ತಿವೆ

ಬಳ್ಳಾರಿ ನಗರದ ಬಿಜೆಪಿ ಪಕ್ಷದ ಹಾಲಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ತಮ್ಮ ಸಹೋದರ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಹೊಸ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿರುವುದರಿಂದ. ಬಿಜೆಪಿ ಕಾರ್ಯಕರ್ತರಲ್ಲಿ ಹಾಗೂ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ.
ಒಂದು ವೇಳೆ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡಲಿದ್ದೇನೆ ಎಂದು ಹೇಳಿರುವ ಶಾಸಕರ ಹೇಳಿಕೆಗೆ ನಗರದಲ್ಲೇಡೆ ಚರ್ಚೆಗೆ ಗ್ರಾಸವಾಗಿದ್ದು,

ಹಾಗಾದ್ರೆ ಶಾಸಕ ಜಿ ಸೋಮಶೇಖರ ರೆಡ್ಡಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೆ ಬಿಜೆಪಿ ಪಕ್ಷದ ನಗರ ಅಭ್ಯರ್ಥಿ ಯಾರೆಂದು ಪ್ರಶ್ನೆ ಶುರುವಾಗಿದೆ.

ಬಿಜೆಪಿ ಅಭ್ಯರ್ಥಿ ಯಾರು…?

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಾಲಿ ಶಾಸಕರ ಮಾತು ಈಗ ಬಳ್ಳಾರಿ ನಗರದಲ್ಲಿ ಗೊಂದಲ ಸೃಷ್ಟಿಯಾಗಿದೆ ಒಂದು ವೇಳೆ ಪಕ್ಷ ಟಿಕೆಟ್ ಕೊಡದೆ ಹೋದರೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ಆದರೆ ಸೋಮಶೇಖರ್ ರೆಡ್ಡಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತರೆ ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ಹಿರಿಯ ನಾಯಕರಾದ, ಸರಳ ವ್ಯಕ್ತಿತ್ವ ಹೊಂದಿರುವ ಕೋನಂಕಿ ರಾಮಪ್ಪ ಅವರಿಗೆ ಪಕ್ಷದ ಬಲ್ಲ ಮೂಲಗಳ ಮಾಹಿತಿಯಿಂದ ಟಿಕೆಟ್ ಸಿಗುವ ಲಕ್ಷಣಗಳು ಕಂಡುಬರುತ್ತಿವೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಕೆ ಆರ್ ಪಿ ಪಿ ಹಾಗೂ, ಜೆಡಿಎಸ್,ಪಕ್ಷಗಳ ಎದುರು ಎದೆಯೊಡ್ಡಿ ನಿಂತು ಹೊರಾಡುವ ನಾಯಕತ್ವ ಇವರಲ್ಲಿದೆ ಎಂದು ಅವರ ಅಭಿಮಾನಿಗಳು, ಆಪ್ತರು,ಹಾಗೂ ಬಿಜೆಪಿ ಕಾರ್ಯಕರ್ತರು ನಂಬಿದ್ದಾರೆ.ದಿನದಿಂದ ದಿನಕ್ಕೆ ರಾಜಕೀಯ ವಿದ್ಯಾಮಾನಗಳು, ರಾಜಕೀಯ ನಾಯಕರ ಮನಸ್ಸುಗಳು ಯಾವ ರೀತಿಯಾಗಿ ಬದಲಾವಣೆಗಳಾಗಿವೆ ಯಾವ ಯಾವ ತಿರುವುಗಳನ್ನು ಪಡೆದುಕೊಳ್ಳುತ್ತೋ ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here