ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರವಾಹನ ವಿತರಣೆ:ಅರ್ಜಿ ಆಹ್ವಾನ

0
132

ಬಳ್ಳಾರಿ,ಫೆ.ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2020-21 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ದೈಹಿಕ ವಿಕ¯ಚೇತನರಿಗೆ ಯಂತ್ರಚಾಲಿತ ದ್ವಿಚಕ್ರವಾಹನ ವಿತರಿಸಲು ಉದ್ದೇಶಿಸಿದೆ. ಆಯ್ಕೆಗಾಗಿ ಆರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಹಾಂತೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ.8ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು 20 ರಿಂಧ 60 ವಯೋಮಾನದೊಳಗಿರಬೇಕು. ತ್ರಿಚಕ್ರವಾಹನ ಚಾಲನಾ ಪರಾನಿಗೆ ಪತ್ರ ಹೊಂದಿರಬೇಕು. ಅರ್ಜಿದಾರರು ಶೇ 75% ಕ್ಕಿಂತ ವಿಕಲತೆ ಹೊಂದಿರಬೇಕು. ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ (UಆIಆ ಛಿಚಿಡಿಜ) ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಸ್ರ್ತೀ ಸೇವಾ ನಿಕೇತನ ಆವರಣ ದೇವಿನಗರ ಬಳ್ಳಾರಿ. ಅಥವಾ ಈ ಕೆಳಕಂಡ ಆಯಾ ತಾಲ್ಲೂಕಿನ ಎಂ.ಆರ್.ಡಬ್ಲ್ಯೂ ಕಾರ್ಯಕರ್ತರನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ತಾಲ್ಲೂಕು ಪಂಚಾಯತಿ ರಾಣಿ ಮೊ:8880875620, ಹೊಸಪೇಟೆ ತಾಲ್ಲೂಕು ಪಂಚಾಯತಿ ಜೆ.ರವಿಕುಮಾರನಾಯ್ಕ್ ಮೊ.9945252991, ಸಂಡೂರು ತಾಲ್ಲೂಕು ಪಂಚಾಯತಿ ಕರಿಬಸಜ್ಜ ಮೊ.9632052270, ಹಗರಿಬೊಮ್ಮನಹಳ್ಳಿ ತಾಲ್ಲೂಕು ಪಂಚಾಯತಿ ಲಕ್ಷ್ಮಣ ಮೊ: 9844756602 ಸಿರುಗುಪ್ಪ ತಾಲ್ಲೂಕು ಪಂಚಾಯತಿ ಸಾಬೇಶ್ ಮೊ.9743509698, ಹೂವಿನಹಡಗಲಿ ತಾಲ್ಲೂಕು ಪಂಚಾಯತಿ ಮಂಜುನಾಥ ಮೊ.9900890403 ಕೂಡ್ಲಿಗಿ ತಾಲ್ಲೂಕು ಪಂಚಾಯತಿ ಕೆ. ಬಸವರಾಜ ಮೊ.9980576553, ಧನರಾಜ್ ಆರ್. 9901182525 ಸಂಪರ್ಕಿಸಬಹುದಾಗಿದೆ.

ಅರ್ಜಿ ಹಾಕುವಿಕೆಗೆ ಮಾನದಂಡಗಳಿವು: 20 ರಿಂದ 60 ವರ್ಷದ ವಯೋಮಾನದವರಿಗೆ ಮಾತ್ರ ಅರ್ಹರು. ಇಲಾಖೆಯಿಂದ ವಿತರಿಸಿದ ಅಂಗವಿಕಲರ ಗುರುತಿನ ಚೀಟಿ/ಯು.ಡಿ.ಐ.ಡಿ. ಕಾರ್ಡ (75% ಕ್ಕಿಂತ ಹೆಚ್ಚು ಕಾಲು ವಿಕಲತೆ),ಅಂಗವಿಕಲತೆ ತೋರುವ 6 ಫ್ಹೋಟೋಗಳು, ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರ (ಆದಾಯ ಮಿತಿ ರೂ. 2,00,000/- ಒಳಗಿರಬೇಕು), ಆನ್‍ಲೈನ್ ರಹವಾಸಿ ಪ್ರಮಾಣ ಪತ್ರ. ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ಮುಂತಾದ ಸ್ಥಳೀಯ ಸಂಸ್ಥೆಗಳಿಂದ ಈ
ಮೊದಲು ಯಂತ್ರಚಾಲಿತ ವಾಹನ ಪಡೆದಿಲ್ಲವೆಂದು ಪ್ರಮಾಣ ಪತ್ರ. ಸಾರಿಗೆ ಇಲಾಖೆಯಿಂದ ಚಾಲನಾ ಲೈಸನ್ಸ್ ಪ್ರಮಾಣ ಪತ್ರ & ಡಿ,ಎಲ್ ಹೊಂದಿರಬೇಕು. ಸ್ವಯಂ ಉದ್ಯೋಗ ಹೊಂದಿರುವ ಕುರಿತು ಪ್ರಮಾಣ ಪತ್ರ/ ವ್ಯಾಸಂಗ ಮಾಡುತ್ತಿರುವ/ಕರ್ತವ್ಯ
ನಿರ್ವಹಿಸುತ್ತಿರುವ ಸಂಸ್ಥೆಯ ದೃಢೀಕರಣ ಪ್ರಮಾಣ ಪತ್ರ.ರೂ. 100/- ಬಾಂಡ್‍ನಲ್ಲಿ ಪರಭಾರೆ ಮಾಡದಿರುವ, ಹಿಂದೆ ಯಾವುದೇ ಮೂಲದಿಂದ ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರ ವಾಹನ ಪಡೆಯದಿರುವ ಬಗ್ಗೆ ಪ್ರಮಾಣ ಪತ್ರ. ಆಧಾರ ಕಾರ್ಡ (ಕಡ್ಡಾಯವಾಗಿ), ಚುನಾವಣಾ ಗುರುತಿನ ಚೀಟಿ.ರೇಶನ್ ಕಾರ್ಡ್, ಎಲ್ಲಾ ದಾಖಲಾತಿಗಳನ್ನು ಕಡ್ಡಾಯವಾಗಿ ದೃಢೀರಕರಿಸಬೇಕು. ಎಮ್.ಆರ್.ಡಬ್ಲ್ಯೂ, ವ್ಹಿ.ಆರ್.ಡಬ್ಲ್ಯೂ ಹಾಗೂ ಯು.ಆರ್.ಡಬ್ಲ್ಯೂ ಗಳಿಂದ ಈ ಮೊದಲು ಯಾವುದೇ
ಮೂಲದಿಂದ ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರ ವಾಹನ ಪಡೆದಿರುವುದಿಲ್ಲ ವೆಂಬುವುದರ ಕುರಿತು ದೃಢೀಕರಣ
ಪತ್ರ ಸೇರಿದಂತೆ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಮಾ.8ರೊಳಗೆ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here