ನರೇಗಾ, ಅಂತರ್ಜಲ ಅರಿವು ಮೂಡಿಸಿದ ಗೀತಾಬಾಯಿ ಭೀಮನಾಯ್ಕ

0
226

ಕೊಟ್ಟೂರು:ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ
ಮತದಾನದ ವೇಳೆಯಲ್ಲೆ ನರೇಗಾ ಯೋಜನೆ, ಅಂತರ್ಜಲ ಹೆಚ್ಚಿಸಿಕೊಳ್ಳುವ ಕುರಿತಂತೆ ಜಾಗೃತಿ ನೀಡುವ ಮೂಲಕ ಸಮಾಜ ಸೇವಕಿ ಗೀತಾಬಾಯಿ ಭೀಮನಾಯ್ಕ ಪ್ರಚಾರದ ವೇಳೆ ಗಮನಸೆಳೆದರು.

ಕೊಟ್ಟೂರು ತಾಲೂಕಿನ ದಿಬ್ಬದಹಳ್ಳಿ, ಹೊನ್ನಿಹಳ್ಳಿ, ಅಲಬೂರು ಸೇರಿ ನಾನಾ ಗ್ರಾಮಗಳಲ್ಲಿ ಹೂವು ಬಿಡುಸುತ್ತಿದ್ದ ಕಾರ್ಮಿಕರ ಬಳಿ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಭೀಮನಾಯ್ಕ ಪರ ಮತಯಾಚಿಸಿದರು. ಈ ವೇಳೆ ರೈತಮಹಿಳೆಯೊಂದಿಗೆ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ಪಪ್ಪಾಯಿ, ದಾಳಿಂಬೆ ಮತ್ತು ಬಾಳೆಗೆ ಸಹಾಯಧನ ನೀಡಲಾಗುತ್ತದೆ. ಅಲ್ಲದೆ ನರೇಗಾ ಯೋಜನೆಯಡಿ ಸಸಿಹಾಕಲು ಕೂಲಿ ಮೊತ್ತ ನೀಡಲಾಗುತ್ತಿದೆ.

ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ಮತ್ತು ಮಾಹಿತಿ ನೀಡಿದರು. ಉದ್ಯೋಗ ಖಾತರಿ ಯೋಜನೆ ಕಾಂಗ್ರೆಸ್ ಸರಕಾರದ ಯೋಜನೆ. ಈ ಕುರಿತಂತೆ ಬಿಜೆಪಿಯ ಹಿರಿಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು ಎಂದರು. ಇದೇವೇಳೆ ಕೋಗಳಿ, ದಿಬ್ಬದಹಳ್ಳಿ,ಅಲಬೂರು ಸುತ್ತಲು ಕಳೆದ ೧೦ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಕೊಳವೆಬಾವಿಗಳಲ್ಲಿ ಇದೀಗ ಮಾಲವಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಅಂತರ್ಜಲ ಹೆಚ್ಚಿರುವ ಕುರಿತಂತೆಯೂ ರೈತರು ಗೀತಾಬಾಯಿ ಅವರಿಗೆ ಮಾಹಿತಿ ನೀಡಿದರು.

ಜಲಾಶಯಕ್ಕೆ ಶಾಶ್ವತ ನೀರು ತುಂಬಿಸುವ ಯೋಜನೆಗಾಗಿ ಶಾಸಕರನ್ನು ಅಭಿನಂದಿಸಿದರು. ಅಂತರ್ಜಲ ಹೆಚ್ಚಿಸಿಕೊಳ್ಳಲು ಅಲ್ಲಲ್ಲಿ ಚೆಕ್‌ಡ್ಯಾಂ, ಹೊಲಗಳಲ್ಲಿ ಬದು ನಿರ್ಮಾಣ ಮಾಡಿಸಿಕೊಳ್ಳುವಂತೆ ಮಾಹಿತಿ ನೀಡಿದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷೆ ಯಶೋದಾ ಮಂಜುನಾಥ, ಮಾಜಿ ತಾಪಂ ಸದಸ್ಯರಾದ ಸುಶೀಲಾ ಮಂಜುನಾಥ, ಗ್ರಾ.ಪಂ ಸದಸ್ಯರಾದ ಚಂದ್ರಮ್ಮ.ವಾಮದೇವ,ಶಿವಾನಂದಪ್ಪ,ತಿಮ್ಮಣ್ಣ,ರಾಮಣ್ಣ ಅಲಬೂರು ಮಂಜುನಾಥ, ಯು.ಮಂಜುನಾಥ, ಉಮೇಶ್, ಖಾಜ್ಪೀರ್,ಹಾಲೇಶ್,ತಾತಪ್ಪ,ನಭಿಸಾಬ್ , ಇತರರು ಇದ್ದರು.

ಚಿತ್ರ : ಕೊಟ್ಟೂರು ತಾಲೂಕಿನ ದಿಬ್ಬದಹಳ್ಳಿಯಲ್ಲಿ ರೈತಮಹಿಳೆಯೊಂದಿಗೆ ಮತಯಾಚನೆ ವೇಳೆ ಚರ್ಚೆ ನಡೆಸಿದ ಸಮಾಜ ಸೇವಕಿ ಗೀತಾಬಾಯಿ ಭೀಮನಾಯ್ಕ.

LEAVE A REPLY

Please enter your comment!
Please enter your name here