ರಂಜಾನ್ ಹಬ್ಬದ ಪೂರ್ವಭಾವಿ ಶಾಂತಿ ಸಭೆ

0
111

ಕೊಟ್ಟೂರು: ಈದ್ -ವುಲ್- ಪ್ರೀತ್ ( ರಂಜಾನ್ ಹಬ್ಬ) ದ ಕುರಿತು ಪೂರ್ವಭಾವಿಯಾಗಿ ಶಾಂತಿ ಸಮಿತಿಯ ಸಭೆಯ ಕೊಟ್ಟೂರು ಪಿಎಸ್ಐ ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಪಟ್ಟಣದ ಮೂರುಕಲ್ಲು ಮಠದ ಹತ್ತಿರದ ಶಾದಿ ಮಹಲ್ ಮಂಟಪದಲ್ಲಿ ಶುಕ್ರವಾರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ನಾಗರಿಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅಲ್ಲಾಭಕ್ಷಿ ನಾವೆಲ್ಲರೂ ಪರಸ್ಪರ ಸೋದರಂತೆ ಇದ್ದೇವೆ ಕೊಟ್ಟೂರಿನಲ್ಲಿ ಎಲ್ಲಾ ಹಬ್ಬಗಳನ್ನು ಕೂಡ ನಾವು ಪರಸ್ಪರ ನಂಬಿಕೆ ವಿಶ್ವಾಸದಿಂದ ಆಚರಿಸುತ್ತಾ ಬಂದಿದ್ದೇವೆ ಈ ಬಾರಿಯೂ ಕೂಡ ನಾವು ಯಶಸ್ವಿಯಾಗಿ ರಂಜಾನ್ ಹಬ್ಬ ಆಚರಿಸುತ್ತೇವೆ ಎಂದರು. ದಾದಾ ಖಲಂದರ್ ಮಾತನಾಡಿ ನಾವು ಪರಸ್ಪರ ನಂಬಿಕೆ ವಿಶ್ವಾಸ ಪ್ರತಿ ವರ್ಷವೂ ಎಲ್ಲಾ ಹಬ್ಬವನ್ನು ಆಚರಿಸ್ತಾ ಬಂದಿದ್ದೇವೆ ಈ ಬಾರಿಯೂ ಉತ್ತಮವಾಗಿ ಆಚರಿಸುತ್ತೇವೆ ಎಂದರು .

ಸಭೆಯಲ್ಲಿ ಮಾತನಾಡಿದ ಪಿಎಸ್ಐ ವೆಂಕಟೇಶ್ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುತ್ತಿದೆ ಯಾವುದೇ ರೀತಿ ಹಿತಕರ ಘಟನೆ ಆಗದಂತೆ ಹಾಗೂ ಕಾನೂನ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕು ಯಾವುದೇ ಸಂಶಯದ ನಡವಳಿಕೆ ಕಂಡು ಬಂದರೆ ತಕ್ಷಣ ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಲ್ಲಾಭಕ್ಷಿ, ಮುತುವಲ್ಲಿ, ಆಯುಬ್ ಸಾಬ್ ಆಯತ್, ದಾದಾ ಕಲಂದರ್, ಇಮ್ರಾನ್ ಫಜ್ ಲೂಲ್ಲ್ , ಎಎಸ್ಐ ಅಬ್ಬಾಸ್ ಪಟ್ಟಣ ಪಂಚಾಯಿತಿ ಸದಸ್ಯ ಕೆಂಗಪ್ಪ ಇನ್ನು ಅನೇಕ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here