ಕಾನಹೊಸಹಳ್ಳಿಯ ರಸ್ತೆ ಅಭಿವೃದ್ಧಿ ಭಾಗ್ಯ ಕಾಣಲಿದೆಯೇ ಸಾರ್ವಜನಿಕರಿಂದ, ಅಧಿಕಾರಿಗಳಿಗೆ ಶಾಪ.!!

0
176

ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿಯಲ್ಲಿ ಅರ್ಧಕ್ಕೆ ನಿಂತ ರಸ್ತೆ ಅಭಿವೃದ್ಧಿ ಭಾಗ್ಯ ಕಾಣಲಿದೆಯೋ ಎಂದು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ವಾಹನ ಚಾಲಕರು ಹಿಡಿ ಶಾಪ ಹಾಕುತ್ತಿದ್ದಾರೆ

ಹೌದು…ಇಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ನೋಡುವವರ ಕಣ್ಣುಗಳಿಗೆ ಚಂದ ಎನಿಸಿದರೆ, ಹೆದ್ದಾರಿಗಳಿಂದ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಈ ಮಾತು ಅನ್ವಯವಾಗುವುದಿಲ್ಲ. ಮಳೆ ಸುರಿದ ವೇಳೆ ರಸ್ತೆಗಳು ಹಾಳಾಗಿ, ಗುಂಡಿ ಬಿದ್ದ ಗ್ರಾಮಗಳ ಮಾರ್ಗಗಳಲ್ಲಿ ನೀರು ನಿಲ್ಲುತ್ತಿರುವುದು ಇಂತಹ ಅನಾಹುತಕ್ಕೆ ಕಾರಣವಾಗುತ್ತಿದೆ.
ಈ ಕೇಂದ್ರಕ್ಕೆ ಸಂಬಂಧಪಟ್ಟ ಎಲ್ಲಾ ಹಳ್ಳಿಯ ಜನರು ನಾಡಕಚೇರಿಗೆ ಸಾವಿರಾರು ಸಂಖ್ಯೆಯಲ್ಲಿ ಕೆಲಸದ ನಿಮಿತ್ಯ ಬಂದು ಹೋಗುತ್ತಾರೆ. ಕೇವಲ 200ಮೀಟರ್ ರಸ್ತೆ ದುರಸ್ತಿತಿ ಮಾಡದೆ ನಿರ್ಲಕ್ಷ ವಹಿಸಿದ ತಾಲೂಕ್ ಆಡಳಿತ.?

ಸಂಚಾರ ಸಂಕಟ:

ಇದು ತಾಲ್ಲೂಕಿನ ಒಂದು ರಸ್ತೆಯ ಸಮಸ್ಯೆಯಲ್ಲ; ತಾಲ್ಲೂಕಿನ ಹೂಡೇಂ ರಸ್ತೆ ಲೋಕಿಕೆರೆ, ಹೊಸೂರು, ತಾಯಕನಹಳ್ಳಿ, ತಮ್ಮಯ್ಯನಗುಡ್ಡ, ಕುಂಮತಿ ಹಾಗೂ ಹುಲಿಕೆರೆ ರಸ್ತೆ, ಹಿರೇಕುಂಬಳಗುಂಟೆ ರಸ್ತೆ, ಸಿದ್ದಾಪುರ ಸೇರಿದಂತೆ ತಾಲೂಕಿನ ರಸ್ತೆಗಳು ಅತಿವೃಷ್ಟಿಯಿಂದ ಹಾನಿಯಾಗಿವೆ. ಪ್ರಮುಖ ರಸ್ತೆ ಮಾರ್ಗಗಳು ಕೆಸರುಗದ್ದೆಗಳಾಂತಾಗಿವೆ. ಗುಂಡಿಗಳ ಹಾದಿಯಲ್ಲಿ ಸಾಗುವಾಗ ತಬ್ಬಿಬ್ಬಾಗುವ ವಾಹನ ಚಾಲಕರು, ಸಂಚಾರಕ್ಕೆ ನಿತ್ಯ ಪರದಾಡುವ ದುಃಸ್ಥಿತಿ ನಿರ್ಮಾಣವಾಗಿದೆ. ಕೂಡ್ಲಿಗಿ ಶಾಸಕರಾದ ಎನ್.ವೈ.ಗೋಪಾಲಕೃಷ್ಣ ಅವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅದರಂತೆ, ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನರಿಂದ ಸೈ ಎನಿಸಿಕೊಂಡಿದ್ದಾರೆ. ಆದರೆ, ತಾಲೂಕಿನ ಹೋಬಳಿ ಕೇಂದ್ರವಾದ ಕಾನಹೊಸಹಳ್ಳಿ ಎಂಟ್ರಿಯಲ್ಲೇ ವರ್ಷದಿಂದ ದೊಡ್ಡ ಗುಂಡಿ ಮುಚ್ಚಿಸಲು ಸಾಧ್ಯವಾಗಿಲ್ಲ. ಉದ್ದೇಶಪೂರ್ವಕವಾಗಿ ಶಾಸಕರಿಗೆ ಕೆಟ್ಟ ಹೆಸರು ತರುವುದಕ್ಕೇ ಪಿಡಬ್ಲ್ಯುಡಿ ಅಧಿಕಾರಿಗಳು ಕಾನಹೊಸಹಳ್ಳಿಯ ಮುಖ್ಯರಸ್ತೆ ಮಧ್ಯೆ ನಿರ್ಮಾಣವಾಗಿರುವ ಹೊಂಡ ಮುಚ್ಚಿಸಲು ಮುಂದಾಗುತ್ತಿಲ್ಲ ಎನ್ನುವ ಆರೋಪವೂ ಕೇಳಿಬರುತ್ತಿವೆ.

ಗ್ರಾ.ಪಂ ಪಿಡಿಓ ಹೇಳುವುದೇನು.!

ಗುಂಡಿ ಮುಚ್ಚಿಸಿ ಅನಾಹುತ ತಪ್ಪಿಸುವಂತೆ ಸಾರ್ವಜನಿಕರು ಅನೇಕ ಸಲ ಒತ್ತಾಯ ಮಾಡಿದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಣು, ಕಿವಿ ಇಲ್ಲದವರಂತೆ ವರ್ತಿಸುತ್ತಿದ್ದಾರೆ ಎನ್ನುವುದು ಪ್ರಜ್ಞಾವಂತರ ಆಕ್ರೋಶವಾಗಿದೆ. ಗುಂಡಿ ಮುಚ್ಚಿಸುವಂತೆ ಗ್ರಾ.ಪಂ ಪಿಡಿಒ ಮತ್ತು ಜನಪ್ರತಿನಿಧಿಗಳಿಗೆ ಯಾರಾದರೂ ಹೇಳಿದರೆ, ಅದು ನಮ್ಮ ಕೆಲಸ ಅಲ್ಲ. ಪಿಡಬ್ಲ್ಯುಡಿ ಇಲಾಖೆಯವರು ಮಾಡಬೇಕು ಎನ್ನುವ ಉತ್ತರ ಎದುರಾಗುತ್ತದೆ ಎನ್ನುವುದು ಕೆಲವರ ಆರೋಪವಾಗಿದೆ. ಗುಂಡಿ ಮುಚ್ಚಿಸಲು ನಾಲ್ಕೈದು ಟ್ರ್ಯಾಕ್ಟರ್ ಲೋಡ್ ಮಣ್ಣು ಹಾಕಿಸುವಷ್ಟೂ ಹಣ ಗ್ರಾ.ಪಂ ಇದಾಗಿದೆಯೇ ಎನ್ನುವ ಪ್ರಶ್ನೆ ಜನರಲ್ಲಿ ಕಾಡಿದೆ.

ವರದಿ:-ಮಂಜುನಾಥ್ ಹೆಚ್

LEAVE A REPLY

Please enter your comment!
Please enter your name here