ಪೌಷ್ಟಿಕತೆ ಕಡೆಗೆ ಅಪೌಷ್ಟಿಕ ಮಕ್ಕಳ ಆರೋಗ್ಯ, ಸಮಾದಾನ ತಂದಿದೆ; ಕಾರ್ಯನಿರ್ವಾಹಕ ಅಧಿಕಾರಿ ಷಡಕ್ಷರಯ್ಯ ಅಭಿಮತ,

0
380

ಸಂಡೂರು ಪಟ್ಟಣದ ಪರಿಶಿಷ್ಟ ಪಂಗಡ ಮೆಟ್ರಿಕ್ ಪೂರ್ವ ಬಾಲಕರ ವಸತಿ ಶಾಲೆಯಲ್ಲಿ ಅಪೌಷ್ಟಿಕ ಮಕ್ಕಳ ಆರೈಕೆಗಾಗಿ ಬಾಲ ಚೈತನ್ಯ ಶಿಬಿರದ ಸಮಾರೋಪ ಸಮಾರಂಭದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಪಂಚಾಯತ ಕಾರ್ಯನಿರ್ವಹಕ ಅಧಿಕಾರಿ ಷಡಕ್ಷರಯ್ಯ ಅವರು ಪ್ರಾರಂಭದಲ್ಲಿ ನೋಡಿದ ಮಕ್ಕಳು ಇಂದು ಆರೋಗ್ಯವಂತರಾಗಿ ಲವಲವಿಕೆಯಿಂದ ಇರುವುದನ್ನು ಗಮನಿಸಿ ಉತ್ತಮ ಬೆಳವಣಿಗೆ ಕಾಣುತ್ತಿದೆ, ಮನೆಗಳಿಗೆ ತಲುಪಿದ ನಂತರ ಹೀಗೆ ಮುಂದುವರೆಸಿ ಮನೆಯಲ್ಲೆ ಆಹಾರ ತಯಾರಿಸಿ ಸಮಯಕ್ಕೆ ಸರಿಯಾಗಿ ಕೊಡಿ, ಸ್ವಚ್ಛತೆ ಮರೆಯ ಬೇಡಿ, ಆಗಾಗ ಆರೋಗ್ಯ ತಪಾಸಣೆ ಮಾಡಿಸಿ, ಚಿಕಿತ್ಸೆ ಮುಂದುವರೆಸಿರಿ, ನಿಮ್ಮಲ್ಲಿಯ ಬದಲಾವಣೆ ನೋಡಿ ತುಂಬಾ ಸಂತೋಷವಾಯಿತು ಎಂದು ಹರ್ಷ ವ್ಯಕ್ತ ಪಡಿಸಿದರು,

ಈ ಸಂದರ್ಭದಲ್ಲಿ ಸಿ.ಡಿ.ಪಿ.ಒ ಎಳೆ ನಾಗಪ್ಪ ಮಾತನಾಡಿ 53 ಮಕ್ಕಳ 50 ಮಕ್ಕಳ ತೂಕ ಹೆಚ್ಚಾಗಿದೆ, ಆರೋಗ್ಯ ಸುಧಾರಣೆ ಅಗಿದೆ, ಈ ಎಲ್ಲಾ ಶ್ರಮ ಮಹಿಳಾ ಮೇಲ್ವಿಚಾರಕಿಯರ ಸಹನೆ ಮತ್ತು ನಿಷ್ಟೆಯಿಂದ ಮನೆಯ ವಾತಾವರಣಕ್ಕಿಂತ ಪ್ರತ್ಯೇಕ ಇರಿಸಿ, ಯೋಗ, ಧ್ಯಾನ, ಪ್ರಾಣಾಯಾಮ ಮಾಡಿಸಿ, ಶಾಲಾ ಪೂರ್ವಕ ಶಿಕ್ಷಣ ಚಟುವಟಿಕೆಗಳನ್ನು ಮಾಡಿಸಿ ಸದಾ ಲವಲವಿಕೆಯಿಂದ ಇರುವಂತೆ ಮಾಡಿದ್ದಾರೆ ಮತ್ತು ಸಮಯ ಸಮಯಕ್ಕೆ ಅಡುಗೆ ಮಾಡಿ ಉಣ ಬಡಿಸಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿರಿಗೆ ಸಲ್ಲುತ್ತದೆ, ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಯ ನಿರ್ವಹಿಸಿದ ಎಲ್ಲರಿಗೂ ವಂದನೆಗಳನ್ನು ತಿಳಿಸಿದರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು,ಆರ್.ಸಿ.ಹೆಚ್.ಓ, ಮತ್ತು ಇಲಾಖೆಯ ಹಾಗೂ ಅರ್.ಬಿ.ಎಸ್.ಕೆ ವೈದ್ಯರು ಮತ್ತು ವಿಮ್ಸ್ ನ ಮಕ್ಕಳ ತಜ್ಞರು ಪ್ರತಿದಿನ ಮಕ್ಕಳ ಆರೋಗ್ಯ ತಪಾಸಣೆ ಮಾಡಿದ್ದಾರೆ ಹಾಗೂ ಇಲಾಖೆ ಸಿಬ್ಬಂದಿಯವರು ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದಾರೆ ಅವರಿಗೂ ವಂದನೆಗಳನ್ನು ಅರ್ಪಿಸಿದರು, ಹಾಗೇ ಶಿಬಿರ ನಡೆಸಲು ಪೂರ್ಣ ಸಹಕಾರ ನೀಡಿದ ತಾಲೂಕು ಪರಿಶಿಷ್ಟ ಪಂಗಡ ಕಲ್ಯಾಣ ಅಧಿಕಾರಿ ರವಿ ಕುಮಾರ್ ಅವರಿಗೂ ವಂದನೆಗಳನ್ನು ತಿಳಿಸಿದರು,

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಾಮಕೃಷ್ಣ ಅವರು ಮಾತನಾಡಿ ತುಂಬಾ ಅಚ್ಚು ಕಟ್ಟಾಗಿ ಆರೈಕೆ ಶಿಬಿರ ನಡೆಸಿದ್ದೀರಿ ಮತ್ತು ತಾಯಂದಿರು ಸಹಾ ನಿಮಗೆ ಸಹಕಾರ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು,
ಸಮಾರೋಪ ಸಮಾರಂಭದಲ್ಲಿ ತಾಯಂದಿರು ಅಮೂಲ್ಯ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು, ಕಾರ್ಯಕ್ರಮವನ್ನು ಲಕ್ಷ್ಮಿ ಪರಸಣ್ಣನವರ್ ನಡೆಸಿ ಕೊಟ್ಟರು, ಲಿಂಗರಾಜು ವಂದನಾರ್ಪಣೆ ನೆರವೆರಿಸಿದರು,

ಈ ಸಂದರ್ಭದಲ್ಲಿ ಡಾ.ಮಲ್ಲಿಕಾರ್ಜುನ್, ಡಾ.ಸಹನಾ ನಾಡಗೌಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆಪ್ತ ಸಮಾಲೋಚಕ ನಾಗಭೂಷಣ್, ದೀಪಾ, ನಾಗಮ್ಮ, ಪಕ್ಕಿರಮ್ಮ, ಸಾಯಿನಾಥ್, ಮಹಿಳಾ ಮೇಲ್ವಿಚಾರಕಿಯರಾದ ಎಮ್. ಎಮ್. ಭಜಂತ್ರಿ, ಲಕ್ಷ್ಮಿ ಕಂಕಣವಾಡಿ, ಎ.ಪಿ ಕುಂಬಾರ್, ಶಾರದಾಶಿಂದೆ, ಶರಣಬಸವೇಶ್ವರಿ, ಗೀತಾ ಅರ್ಕಾಚಾರಿ, ಚೇತನಾಗೌಡ, ಇಬ್ರಾಹಿಂ ಕಲೀಲ್,ಸವಿತಾ, ನಾಗವೇಣಿ, ಕರಿಬಸಜ್ಜ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here