ಅ.2ರಂದು ಸಂತೋಷ್ ಲಾಡ್ ಫೌಂಡೇಷನ್‌ನಿಂದ ಹಲವು ಕಾರ್ಯಕ್ರಮ ಆಯೋಜನೆ

0
217

ಸಂಡೂರು:ಸೆ:02:ಸ್ವಾತಂತ್ರ್ಯ ಭಾರತದ 75ನೇ ವರ್ಷದ ಸಂಭ್ರಮಾಚರಣೆ, ರಾಷ್ಟ್ರಪಿತ ಮಾಹಾತ್ಮ ಗಾಂಧೀ ಜಯಂತಿ ಹಾಗೂ ಮಾಜಿ ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಮಾಜಿ ಜಿಲ್ಲಾ ಉಸ್ತುವಾರಿ ಮಂತ್ರಿ ಸಂತೋಷ್ ಲಾಡ್ ಅವರ ಫೌಂಡೇಷನ್ ಹಾಗೂ ಶಾಸಕ ಸಿಎಲ್‌ಪಿ ಕಾರ್ಯದರ್ಶಿ ಈ.ತುಕಾರಾಮ್ ನೇತೃತ್ವದಲ್ಲಿ ಅ.2 ರಂದು ಸಂಡೂರಿನ ಬಸ್ ಡಿಪೊ ಎದುರಿನ ವಿಶ್ವಾಸ್ ಲಾಡ್ ಮೈದಾನದಲ್ಲಿ ಹಲವು ಕಾರ್ಯಕ್ರಮ ಜರುಗಲಿವೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

ತಾಲೂಕಿನ 5 ಸಾವಿರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಸಂಡೂರು ತಾಲೂಕು ಸೇರಿದಂತೆ ಬಳ್ಳಾರಿ ಜಿಲ್ಲೆಯ ಕೃಷಿ, ಸಮಾಜ ಸೇವೆ, ಮಾಜಿ ಸೈನಿಕರು, ಶಿಕ್ಷಣ, ಕ್ರೀಡೆ, ಆರೋಗ್ಯ, ಸಾಹಿತ್ಯ, ಕಲೆ, ರಂಗಭೂಮಿ, ಹಲವು ಸಮಾಜಗಳ ಮುಖಂಡರನ್ನು ಸನ್ಮಾನಿಸಿ ಗೌರವಿಸುವ ಜತೆಗೆ 10 ಸಾವಿರ ಮಹಿಳೆಯರಿಗೆ
“ಮಡಿಲಅಕ್ಕಿ” ತುಂಬುವುದರ ಜೊತೆಗೆ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.

ಮಾಜಿ ಮಂತ್ರಿ ಹಾಗೂ ಫೌಂಡೇಷನ್ ಮುಖ್ಯಸ್ಥ ಸಂತೋಷ್ ಲಾಡ್, ಮಾಜಿ ಶಾಸಕ ಅನಿಲ್ ಲಾಡ್, ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟರಾವ್ ಘೋರ್ಪಡೆ, ಮಾಜಿ ಎಂಎಲ್‌ ಸಿಗಳಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ನಾಸಿರ್ ಹುಸೇನ್,
ಕೆ.ಎಸ್‌.ಎಲ್ ಸ್ವಾಮಿ, ಉಗ್ರಪ್ಪ, ನಿರಂಜನ ನಾಯ್ಡು, ಶಾಸಕರಾದ ಪಿ.ಟಿ.ಪರಮೇಶ್ವರ ನಾಯ್ಕ, ಭೀಮಾನಾಯ್ಕ, ಬಿ.ನಾಗೇಂದ್ರ, ಜೆ.ಎನ್. ಗಣೇಶ, ಮಾಜಿ ಸಚಿವ ದಿವಾಕರ್ ಬಾಬು, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ, ಮಾಜಿ ಸಚಿವೆ ಭಾಗೀರತಿ ಮರುಳುಸಿದ್ದನ ಗೌಡ, ಮಾಜಿ ಶಾಸಕರಾದ ಬಿ.ಎಂ. ನಾಗರಾಜ, ಗವಿಯಪ್ಪ, ಗುಜ್ಜಲ್‌ ವಿಜಯಲಕ್ಷ್ಮಿ, ಚಂದ್ರ ಶೇಖರಯ್ಯ ಸ್ವಾಮಿ, ನಂದಿಹಳ್ಳಿ ಹಾಲಪ್ಪ, ಎನ್.ಎಂ.ನಬಿ ಸಾಬ್ ಸೇರಿದಂತೆ ಹಲವು ಜನ ಮುಖಡರು ಭಾಗವಹಿಸಲಿದ್ದಾರೆ.

ದಿವ್ಯ ಸಾನಿಧ್ಯವನ್ನು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾದೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಉಜ್ಜಯಿನಿ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಉಜ್ಜಯಿನಿ ಪೀಠ. ಉಜ್ಜಯಿನಿ ಹಾಗೂ ಸಾನಿಧ್ಯವನ್ನು ಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಪ್ರಭುಸ್ವಾಮಿಗಳು, ಯಶವಂತನಗರದ ಸಿದ್ದರಾಮೇಶ್ವರ ಮಠದ ಗಂಗಾಧರ ಮಹಾಸ್ವಾಮಿಗಳು ಸೇರಿದಂತೆ, ಹಲವು ಧರ್ಮಗಳ ಸ್ವಾಮೀಜಿಗಳು ನಾಡಿನ 20ಕ್ಕೂ ಹೆಚ್ಚು ಜನ ಮಠಾಧೀಶರು ಸಾನ್ನಿಧ್ಯವಹಿಸಲಿದ್ದಾರೆ.

ನಾಡಿನ ಗಾಯನ ಪ್ರತಿಭೆಗಳಾದ ಕು.ನಾದಿರಾಬಾನು, ಕು. ಅಶ್ವಿನ್ ಶರ್ಮಾ, ರಕ್ಷಾ ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ ಶ್ರೀಮತಿ ಮಂಗಳಾ ರವಿ ಮತ್ತು ಶ್ರೀ ರವಿ ಕೃಷ್ಣಮೂರ್ತಿ ಇವರಿಂದ ವಿಶೇಷ ಸುಗಮ ಸಂಗೀತಾ ಕಾರ್ಯಕ್ರಮ ಜರುಗಲಿದೆ
ಕಾರ್ಯಕ್ರಮದ ನಿರೂಪಣೆಯನ್ನು ಖ್ಯಾತ ನಿರೂಪಕಿ ಅನುಷಾ ಲಕ್ಕಣ್ಣ ನಡೆಸಿಕೊಡುತ್ತಾರೆ

LEAVE A REPLY

Please enter your comment!
Please enter your name here