ಪರಿಸರವನ್ನು ಪ್ರೀತಿಸುವುದರ ಜೊತೆಗೆ ಮನೆಗೊಬ್ಬ ಗ್ರಾಜುಯೇಟ್ ಇರಲಿ: ಶಾಸಕ ಈ ತುಕಾರಾಂ.

0
428

ಸಂಡೂರು;14.ಶಾಸಕನಾಗಿ ಆಯ್ಕೆಯಾದ ದಿನದಿಂದಲೂ ಪ್ರಾಮಾಣಿಕವಾಗಿ ಜನರ ಕಷ್ಟಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿರುವೆ ಎಂದು ಶಾಸಕರು ತಿಳಿಸಿದರು ತಾಲೂಕಿನ ಸುಶೀಲನಗರ ಗ್ರಾಮದಲ್ಲಿ ಡಿಎಂಎಫ್ ಫಂಡ್ ಯೋಜನೆಯಡಿ ಹೊಲಿಗೆ ಯಂತ್ರಗ ಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣ ಆರೋಗ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವೆ, ಪರಿಸರ ನಿಮ್ಮ ಊರು ನಿಮ್ಮ ಗ್ರಾಮವನ್ನು ಪ್ರೀತಿಸುವುದರ ಜೊತೆಗೆ ಮನೆಯ ಪ್ರತಿಯೊಬ್ಬರಿಗೂ ಶಿಕ್ಷಣ ಕೊಡಿಸುವ ಮೂಲಕ ಮನೆಗೊಬ್ಬ ಗ್ರಾಜುಯೇಟ್ ಇರಲಿ ಎಂದು ಆಶಿಸಿದರು. ಗಣಿಬಾದಿತ ಪ್ರದೇಶಗಳ ಅಭಿವೃದ್ಧಿಗೆ ಸುಪ್ರೀಂಕೋರ್ಟ್ನಲ್ಲಿ 17 ಸಾವಿರ ಕೋಟಿ ರೂಪಾಯಿಗಳ ಅನುದಾನ ಇದೆ. ತೀರ್ಮಾನದಂತೆ ಮುಂದಿನ ದಿನಗಳಲ್ಲಿ ಅದರ ಸದ್ಬಳಕೆ ಆಗಲಿದೆ. ಸುಶೀಲನಗರ ಗ್ರಾಮದಲ್ಲಿ 8 ಕೋಟಿ ರೂಪಾಯಿ ವೆಚ್ಚದಲ್ಲಿ ಬೈಪಾಸ್ ರಸ್ತೆ ನಿರ್ಮಾಣಹಾಗೂ 75 ಲಕ್ಷ ರೂಗಳ ವೆಚ್ಚದಲ್ಲಿ ಮಾದರಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಶೀಘ್ರದಲ್ಲಿ ನೆರವೇರಲಿದೆ ಎಂದರು.

ಶ್ರಮಜೀವಿ ಗಳಾಗಿದ್ದು ಕಟ್ಟಿಗೆಯ ಹೊರೆಯನ್ನು ಹೊತ್ತು ಮಾರುತ್ತಿದ್ದ ಇಲ್ಲಿನ ಜನರ ಬದುಕು ಡಾಕ್ಟರ್ ಅಂಬೇಡ್ಕರ್ ಅವರ ಆಶಯದಂತೆ ಬದಲಾಗಿದ್ದು ಸರ್ಕಾರದ ಯೋಜನೆಗಳು ಕಾರಣವಾಗಿವೆ ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸಂತೋಷ್ ಲಾಡ್ ಸೇರಿದಂತೆ ನಾವೆಲ್ಲ ಅವಿರತವಾಗಿ ಶ್ರಮಿಸಿದ್ದೇವೆ ಎಂದರು. ಇಲ್ಲಿನ ಲಂಬಾಣಿ ವರ್ಗದ ಮಹಿಳೆಯರು ಕಸೂತಿ ಕಲೆಯಲ್ಲಿ ಪರಿಣಿತರಾಗಿದ್ದು ಈ ಕರೆಗೆ ಅಂತರಾಷ್ಟ್ರೀಯ ಮನ್ನಣೆ ಇದೆ.ತರಬೇತಿ ಶಾಲೆಯನ್ನು ಆರಂಭಿಸಲಾಗುವುದು ಎಂದು ನುಡಿದರು.

ಡಿಎಂಎಫ್ ಯೋಜನೆಯಡಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡುವ ಕಾರ್ಯಕ್ರಮವನ್ನು ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ನಕುಲ್, ಇಂದಿನ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ನಂದಿನಿ ಮೇಡಂ ಅವರ ಕಾರ್ಯಸಾಧನೆಯನ್ನು ಮೆಚ್ಚಬೇಕಿದೆ ಎಂದು ಶಾಸಕರು ಸಭೆಯಲ್ಲಿ ಅವರ ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ 80 ಜನ ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರ ಗಳನ್ನು ವಿತರಿಸಲಾಯಿತು. ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸೋಮಶೇಖರ, ಗ್ರೇಟ್ 2 ತಹಸಿಲ್ದಾರ್ ಶಿವಕುಮಾರ್ ಕಾರ್ಯನಿರ್ವಾಹಕ ಅಧಿಕಾರಿ.ಕೆ. ಆರ್. ಪ್ರಕಾಶ್, ಗ್ರಾಮ ಪಂಚಾಯತ್ ಅಧ್ಯಕ್ಷ ಅಂಬರೀಶ್ ಉಪಾಧ್ಯಕ್ಷ ದುರ್ಗೇಶ್, ತಾಪಂ ಸದಸ್ಯರುಗಳು ಜಿಲ್ಲಾ ಪರಿಷತ್ ಸದಸ್ಯರುಗಳು, ಗ್ರಾಮ ಪಂಚಾಯತಿ ಸದಸ್ಯರಗಳು ಸೇರಿದಂತೆ ಮಾಜಿ ತಾಲೂಕ ಪಂಚಾಯತಿ ಉಪಾಧ್ಯಕ್ಷೆ ಗಂಗಾಬಾಯಿ ಚಂದ್ರನಾಯಕ್, ಮುಖಂಡರುಗಳಾದ ಚಂದ್ರನಾಯಕ್ ರಾಮನಾಯಕ್, ಆರ್ ನಾಗರಾಜ್, ಆರ್ ಪಕೀರಪ್ಪ, ಜೆಬಿಟಿ ಬಸವರಾಜ್ ಸೇರಿದಂತೆ ಅನೇಕ ಮುಖಂಡರುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here