ಕೋವಿಡ್ ಲಸಿಕಾಕರಣದ ಪ್ರಗತಿ ಪರಿಶೀಲನೆ 3ದಿನದೊಳಗೆ ನಿರೀಕ್ಷಿತ ಗುರಿ ಸಾಧಿಸಿ,ಕೋವಿಡ್ ಲಸಿಕೆ ವಿಶೇಷ ಗಮನಹರಿಸಲು ಡಿಸಿಗಳಿಗೆ ಸಚಿವ ಸುಧಾಕರ್ ಸೂಚನೆ

0
78

ಬಳ್ಳಾರಿ,ಫೆ.4 : ಕೋವಿಡ್ ಲಸಿಕಾಕರಣದ ವಿಷಯದಲ್ಲಿ ಇದುವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಿಸಿದ ಪ್ರಗತಿ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಕೋವಿಡ್ ಲಸಿಕೆ ವಿಷಯದಲ್ಲಿ ಜಿಲ್ಲಾಧಿಕಾರಿಗಳು ವಿಶೇಷ ಗಮನಹರಿಸಬೇಕು ಮತ್ತು ಮುಂದಾಳತ್ವ ವಹಿಸಿ ನಿರೀಕ್ಷತ ಪ್ರಗತಿ ಸಾಧಿಸುವಂತೆ ಸೂಚನೆ ನೀಡಿದ್ದಾರೆ.
ಕೋವಿಡ್ ಲಸಿಕೆ ವಿಷಯದಲ್ಲಿ ಈ ಮುಂಚೆ ರಾಜ್ಯವು ಇತರೇ ರಾಜ್ಯಗಳಿಗೆ ಹೊಲಿಸಿದರೇ ಮೊದಲನೇ ಸ್ಥಾನದಲ್ಲಿತ್ತು;ಸದ್ಯ 19ನೇ ಸ್ಥಾನಕ್ಕೇ ಕುಸಿದಿದ್ದು,ಅದನ್ನು ಮೊದಲಿನಂತೆ 1ಸ್ಥಾನಕ್ಕೇರಿಸಬೇಕು. 3ದಿನದೊಳಗೆ ಆರೋಗ್ಯ ಸೇವಾ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ನೀಡಬೇಕು. ಈ ಮೂಲಕ ನಿರೀಕ್ಷಿತ ಗುರಿಸಾಧಿಸಬೇಕು ಎಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಸೂಚಿಸಿದರು.
ಈಗಾಗಲೇ ನೋಂದಣಿ ಮಾಡಿಕೊಂಡಿರುವ ಆರೋಗ್ಯ ಸೇವಾ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು. ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಮಾತ್ರ ಶೇ.70ರಷ್ಟು ಪ್ರಗತಿ ಸಾಧಿಸಿದ್ದು,ಉಳಿದ ಜಿಲ್ಲೆಗಳು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ; ಈ ಹಿನ್ನೆಲೆಯಲ್ಲಿ ಇನ್ನೂ ಮೂರು ದಿನದೊಳಗೆ ಎಲ್ಲ ಜಿಲ್ಲೆಗಳು ವಿಶೇಷ ಲಸಿಕಾಕರಣ ಪ್ರಕ್ರಿಯೆ ಕೈಗೆತ್ತಿಕೊಳ್ಳುವುದರ ಮೂಲಕ ಶೇ.80ರಿಂದ ಶೇ.85ರಷ್ಟು ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ಸಿಸನ್ ಪ್ಲಾನ್‍ಗಳನ್ನು ಮಾಡಿಕೊಳ್ಳಿ;ಪ್ರತಿ ಸಿಸನ್‍ನಲ್ಲಿಯೂ 200ಕ್ಕೂ ಹೆಚ್ಚು ಜನರಿಗೆ ಪ್ರತಿನಿತ್ಯ ಲಸಿಕೆ ನೀಡಿ, ಮೈಕ್ರೋ ಪ್ಲಾನಿಂಗ್ ಮಾಡಿಕೊಳ್ಳಿ, ಲಸಿಕೆ ಪಡೆಯುವ ನಿಟ್ಟಿನಲ್ಲಿ ಮನವೋಲಿಸಿ ಮತ್ತು ಜಾಗೃತಿ ಮೂಡಿಸಿ ಎಂದು ಹೇಳಿದ ಸಚಿವ ಸುಧಾಕರ್ ಅವರು ಎರಡೆರಡು ಬಾರಿ ಪೋರ್ಟ್‍ಲ್‍ನಲ್ಲಿ ನೋಂದಣಿಯಾಗಿರುವ ಡುಪ್ಲಿಕೇಟ್ ಹೆಸರುಗಳನ್ನು ಡೆಲಿಟ್ ಮಾಡಲು ಕ್ರಮವಹಿಸಿ;ಶೀಘ್ರದಲ್ಲಿಯೇ ಪೋರ್ಟಲ್‍ನಲ್ಲಿ ಅವಕಾಶ ಮಾಡಲಾಗುತ್ತದೆ ಎಂದರು.
ಅಪರ ಮುಖ್ಯ ಕಾರ್ಯದರ್ಶಿಗಳಾದ ಜಾವೇದ್ ಅಖ್ತರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಪಂಕಜಕುಮಾರ್ ಪಾಂಡೆ ಅವರು ಮಾತನಾಡಿ, ಕೋವಿಶಿಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳು ಅತ್ಯಂತ ಸುರಕ್ಷಿತವಾಗಿವೆ;ಔಷಧಿ ಬಗ್ಗೆ ಜಾಗೃತಿ ಮೂಡಿಸಿ ಮತ್ತು ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ನೀಡುವುದಕ್ಕೆ ಅಗತ್ಯ ಕ್ರಮಕೈಗೊಳ್ಳಿ ಎಂದರು.
ವಿಡಿಯೋ ಕಾನ್ಪರೆನ್ಸ್ ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಕೋವಿಡ್ ಲಸಿಕಾಕರಣದ ಪ್ರಕ್ರಿಯೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಕೂಡಲೇ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಸೀಸನ್ ಸೈಟ್‍ಗಳ ಸಂಖ್ಯೆ ಹೆಚ್ಚಿಸಬೇಕು. ಇದುವರೆಗೆ ಲಸಿಕೆ ನೀಡುವಲ್ಲಾಗಿರುವ ಪ್ರಗತಿ ಇದುವರೆಗೆ ಯಾರಿಗೆ ಲಸಿಕೆ ಹಾಕಿಸಿಲ್ಲವೋ ಎಂಬುದರ ಸಂಪೂರ್ಣ ವಿವರ ಮತ್ತು ಮೂರುದಿನಗಳಲ್ಲಿ ಜಿಲ್ಲೆಯಲ್ಲಿ ಪ್ರಗತಿ ಸಾಧಿಸಲು ಅನುಸರಿಸಬೇಕಾದ ಕ್ರಮಗಳ ವಿವರವನ್ನು ಇಂದು ಸಂಜೆಯೊಳಗೆ ಒದಗಿಸುವಂತೆ ಸೂಚಿಸಿದರು.
ಇನ್ನೀತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಡಿಎಚ್‍ಒ ಡಾ.ಜನಾರ್ಧನ್, ಆರ್‍ಸಿಎಚ್ ಅನಿಲಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here