ಭಾವಜೀವಿ, ಸಾಹಿತ್ಯ ಸಿಂಚನ ರಾಘವೇಂದ್ರ ದೇವಪ್ಪ ತಳವಾರ

0
368

ಜೀವನವೆಂಬುದು ಕೆಳಗಿಂದ ಮೇಲೇರಿ, ಮತ್ತೇ ಕೆಳಗಿಳಿಯುವ ಜೋಕಾಲಿಯಂತೆ. ಈ ಬದುಕಿನ ಲೋಲಕದಾಟವು ಎಲ್ಲರಿಗೂ ಅನ್ವಯ, ಇದಕ್ಕೆ ನಾನೂ ಹೊರತಿಲ್ಲ!!

ಸಾಧನೆಯೇ ಮಾತು ಆಗಬೇಕು ಮಾತನಾಡುವುದೇ ಸಾಧನೆ ಆಗಬಾರದು ಎನ್ನುವುದಕ್ಕೆ ರಾಘವೇಂದ್ರ ದೇವಪ್ಪ ಅವರು ಉತ್ತಮ ಉದಾಹರಣೆ ಆಗಿದ್ದರೆ.

ಜನನ :-

ರಾಘವೇಂದ್ರ ದೇವಪ್ಪ ತಳವಾರ, ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಮುರುಡಿ ಎಂಬ ಗ್ರಾಮದಲ್ಲಿ 9 ನೇ ಎಪ್ರಿಲ್ 1997 ರಲ್ಲಿ ದೇವಪ್ಪ ಮತ್ತು ಬಸವಣ್ಣೆವ್ವ ಎಂಬ ದಂಪತಿಗೆ ಮಗನಾಗಿ ಜನಿಸಿದೆರು . ಅವರಿಗೆ ಸೋಮಶೇಖರ ಎಂಬ ಒಬ್ಬ ಸಹೋದರನೂ ಇದ್ದಾನೆ.

ಇವರ ತಂದೆ ತಾಯಿಗಳು ಕೂಲಿ ಕೆಲಸ ಮಾಡುತ್ತಿದ್ದ ತಾವು ಅರೆಹೊಟ್ಟೆ ಅಲ್ಲಿ ಇದ್ದರು ಮಗನಿಗೆ ಅಕ್ಷರ ಜ್ಞಾನವನ್ನು ಉಣಬಡಿಸಿದ್ದಾರೆ

ಶಿಕ್ಷಣ :-

ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ,ಮತ್ತು ಪ್ರೌಢ ಶಿಕ್ಷಣವನ್ನು ಕಡಕೋಳ ಎಂಬ ಗ್ರಾಮದಲ್ಲಿ, ಪಿಯುಸಿ & ಪದವಿಗಳನ್ನು ಗದಗಿನಲ್ಲಿ ಮುಗಿಸಿ ಎಂಎಸ್ಸಿ ಗಣಿತಶಾಸ್ತ್ರವನ್ನು ಅಭ್ಯಸಿಸಲು ಉ. ಕ. ಜಿಲ್ಲೆಯ ಶಿರಸಿಗೆ ತೆರಳಿದರು

ಶಿರಸಿ ಅಲ್ಲಿ ಕೆಲವು ಕಾರಣಗಳಿಂದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ
ಇಗ್ನೋ , ದೆಹಲಿ ಇಂದ ಎಂಎಸ್ಸಿ ಪರಿಸರ ವಿಜ್ಞಾನ ಹಾಗೂ ಕೆ. ಎಸ್ ಓ. ಯು ಮೈಸೂರ್ ನಿಂದ ಪಿ. ಜಿ ಡಿ ಬಿ ಎ ಯನ್ನು ಅಭ್ಯಾಸ ಮಾಡುತ್ತಿದ್ದಾರೆ

ಅಕ್ಷರ ಸೇವೆ :-

ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ‘ಅಕ್ಷರ ದಾಸೋಹ’ ಎಂಬ ಮಾಸಪತ್ರಿಕೆಯ ಸಂಪಾದಕನಾಗಿ ಸೇವೆ ಸಲ್ಲಿಸುತ್ತಿರುವ ಇವರು 4-5 ಸರ್ಕಾರಿ ನೌಕರಿಯ ಪರೀಕ್ಷೆಗಳಲ್ಲೂ ಉತ್ತೀರ್ಣನಾಗಿದ್ದು, ಸದ್ಯಕ್ಕೆ ನನ್ನ ಕನಸಿನ ಜೀವನದ ಪಯಣದಲ್ಲಿ ಮುನ್ನಡೆಯುತ್ತಿದ್ದಾರೆ

ಸಾಹಿತ್ಯ ಲೋಕಕ್ಕೆ ಪರಿಚಯ :

ಬಾಲ್ಯದಿಂದಲೂ ಕನ್ನಡವೆಂದರೆ ಕುಣಿಯುತ್ತಿದ್ದ ನಾನು ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗಿಂದಲೂ ಕನ್ನಡ, ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ

ಜೊತೆ ಜೊತೆಗೆ ನಾಟಕ, ದೊಡ್ಡಾಟ, ಕ್ರೀಡೆಗಳಲ್ಲೂ ನನಗೆ ಅತೀವ ಆಸಕ್ತಿ ಇದ್ದು . ಅಂದು ಚಿಗುರೊಡೆದ ಕನ್ನಡ ಪ್ರೇಮ ನನ್ನಿಂದ ಮೊದಲ ಕವನವನ್ನು ಬರೆಯುವಂತೆ ಮಾಡಿದ್ದು 9 ನೇ ತರಗತಿಯಲ್ಲಿ.

ಪ್ರೇರಣೆ :-

ಕನ್ನಡ ಶಿಕ್ಷಕರಾದ ಮಹಾಂತೇಶ ಅಂಗಡಿಯವರು ನಮ್ಮ ಸಾಹಿತ್ಯ ಸಂಗಡಿಗರೂ ಆಗಿದ್ದರು.ಇವರ ಪ್ರೇರಣೆಯಿಂದ ಸಾಕಷ್ಟು ಕವನ ಚಿಕ್ಕ ಲೇಖನವನ್ನು ಬರೆದಿದ್ದಾರೆ

ಪ್ರಶಸ್ತಿ :-

‘ಆತ್ಮಾನುಬಂಧದ ಸಖಿ’ ಎಂಬ ಕವನ ಸಂಕಲನ ಕೃತಿಗೆ ತುಮಕೂರಿನ ‘ಗುರುಕುಲ ಕಲಾ ಪ್ರತಿಷ್ಠಾನ’ ವು ನೀಡಲ್ಪಡುವ ‘ಗುರುಕುಲ ಸಾಹಿತ್ಯ ಕೇಸರಿ’ ಎಂಬ ಪ್ರಶಸ್ತಿಗೂ ಭಾಜನರಾಗಿದ್ದಾರೆ

ಸಾಹಿತ್ಯ ಪ್ರಸರಣ :-

ರಾಘವೇಂದ್ರ ಇವರು ಟೆಲಿಗ್ರಾಮ್ ನಲ್ಲಿ ಕನ್ನಡ ಕವನಗಳು ಎನ್ನುವ ಬಳಗವನ್ನು ಸ್ಥಾಪಿಸಿ ನೂರಾರು ಕವಿ ಮನಸುಗಳಿಗೆ ತಮ್ಮ ಕವಿತೆಯ ಮೂಲಕ ರಸದೌತಣವನ್ನು ನೀಡಿದ್ದಾರೆ.

ಇವರ ಕವನಗಳು ಸಾಮಾಜಿಕ ಆಗು ಹೋಗುಗಳು. ಬಡತನ, ನಿರುದ್ಯೋಗ, ಅನಕ್ಷರತೆ, ಸ್ತ್ರೀ ಸ್ವಾತಂತ್ರ್ಯ, ಪ್ರೀತಿ, ಸ್ನೇಹ, ವಿಶ್ವಾಸ, ನಂಬಿಕೆ, ಸಾಧನೆಗಳ ಸುತ್ತ ಜೊತೆಗೆ ನಮ್ಮ ಸುತ್ತಲಿನ ಸಮಾಜದ ಕೈಗನ್ನಡಿಯಾಗಿ ನೊಂದವರಿಗೆ ಸಾಂತ್ವನ ಹೇಳಿ, ಸೋತವರನ್ನ ಹುರಿದುಂಬಿಸಿ, ಎಲ್ಲರಿಗೂ ಸ್ಪೂರ್ತಿ ಕಿರಣವಾಗಿರುವಂತೇ ಇವೇ ಇವರ ಕವನಗಳು.

ಕೃಷಿ ಪ್ರೇಮ :-

ಸಾಹಿತ್ಯದ ಜೊತೆಗೆ ಕೃಷಿಯಲ್ಲೂ ಅತೀವ ಆಸಕ್ತಿ ನನಗಿದೆ. ಸಮಯ ಸಿಕ್ಕಾಗಲೆಲ್ಲಾ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತೇನೆ.

ವ್ಯಕ್ತಿತ್ವ :-

ಸರಳ ಮತ್ತು ಸಜ್ಜನರು , ಮಿತ ಭಾಷಿಕರು, ಭಾವನೆಗೆ ಜೀವ ತುಂಬುವಇವರ ಗುಣ ಎಂತ ಕಲ್ಲು ಮನಸಿನ ವ್ಯಕ್ತಿಯನ್ನು ಕರಗಿಸುತ್ತದೆ ವೈಯುಕ್ತಿಕವಾಗಿ ನಾನು ಹೇಳಬೇಕು ಅಂದ್ರೆ ಭಾವನೆಯೇ ಇವರಿಗೆ ಜೀವಾಳ.ಭಾವನೆಗೆ ಪ್ರತಿ ಭಾವನೆ ತೋರಿಸಿ, ನೋಂದಾಗ ಸಮಾಧಾನ ಮಾಡಿ, ನನ್ನ ಖುಷಿಯಲ್ಲಿ ತಮ್ಮ್ ಖುಷಿ ನೋಡಿ, ಸಂತೈಸುವ ಮಾತೃ ಗುಣ ನನ್ನ ತುಂಬಾ ಇಷ್ಟ.
ಇವರ ಎಲ್ಲ ಕನಸು ನನಸು ಆಗಲಿ.ಉಜ್ವಲ ಭವಿಷ್ಯ ಇವರದಾಗಲಿ.

ರಾಘವೇಂದ್ರ ಅವರ ಮನದ ಮಾತುಗಳು :-

ನನ್ನ ಪ್ರತಿ ಹೆಜ್ಜೆಯಲ್ಲೂ ಜೊತೆಗಿದ್ದು ಪ್ರೋತ್ಸಾಹಿಸುವ ನನ್ನ ತಂದೆ – ತಾಯಿಯರಿಗೆ, ಸ್ನೇಹಿತರಿಗೆ, ಗುರುಗಳಿಗೆ, ಪತ್ರಿಕಾ ಮಾಧ್ಯಮದವರಿಗೆಲ್ಲರಿಗೂ ನನ್ನ ಮನದಾಳದ ಧನ್ಯವಾದಗಳು.

ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ, ಬೆಂಬಲ ನನಗಿರಲಿ, ನನ್ನ ಸಾಹಿತ್ಯ ಸುಧೆಯ ಸವಿರುಚಿ ನಿಮಗಿರಲಿ. ನಾವೆಲ್ಲರೂ ಕನ್ನಡವನ್ನು ಉಳಿಸೋಣ, ಕನ್ನಡವನ್ನು ಬೆಳೆಸೋಣ.

ವಿದ್ಯಾ ಶ್ರೀ ಬಿ
ಬಳ್ಳಾರಿ

LEAVE A REPLY

Please enter your comment!
Please enter your name here