ಕೂಡ್ಲಿಗಿ ಗಾಂದೀಜಿ ರಾಷ್ಟ್ರೀಯ ಸ್ಮಾರಕದಲ್ಲಿ, ಹುತಾತ್ಮರ ದಿನಾಚರಣೆ

0
134

ಕೂಡ್ಲಿಗಿ:ಗಾಂದೀಜಿ ರಾಷ್ಟ್ರೀಯ ಸ್ಮಾರಕದಲ್ಲಿ, ಹುತಾತ್ಮರ ದಿನಾಚರಣೆ
ಕೂಡ್ಲಿಗಿ ಪಟ್ಟಣದ ಮಹಾತ್ಮ ಗಾಂಧಿ ರಾಷ್ಟ್ರೀಯ ಸ್ಮಾರಕದ ಆವರಣದಲ್ಲಿ, ವೀರಮರಣವನ್ನಪ್ಪಿದ ದೇಶಕ್ಕಾಗಿ ತಮ್ಮ ಪ್ರಾಣವನ್ನರ್ಪಿಸಿದ,ಹುತಾತ್ಮರ ಸ್ಮರಣಾರ್ಥ ಶ್ರದ್ಧಾಂಜಲಿ ಕಾರ್ಯಕ್ರಮ ಜರುಗಿತು. ಗಾಂಧೀ ಸ್ಮಾರಕ ಸಮಿತಿ ಹಾಗೂ ಜೆಸಿಐ, ತಾಲೂಕಾಡಳಿತ ಸಹಯೋಗದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.


ಕಾರ್ಯಕ್ರಮದಲ್ಲಿ ತಹಶಿಲ್ದಾರರಾದ ಎಸ್.ಮಹಾಬಲೇಶ್ವರ,ತಾಪಂ ಇಓ, ಜಿ.ಎಮ್.ಬಸಣ್ಣ, ಸಿಪಿಐ ವಸಂತ ವಿ ಅಸೋದೆ,ಪಿಎಸ್ಐ ತಿಮ್ಮಣ್ಣ ಚಾಮನೂರು ಸೇರಿದಂತೆ.ವಿವಿದ ತಾಲೂಕು ಮಟ್ಟದ ಅಧಿಕಾರಿಗಳು, ಹಿರಿಯನಾಗರೀಕರು,ನಿವೃತ್ತ ನೌಕರರು,ಈಶ್ವರಿ ಭ್ರಹ್ಮ ಕುಮಾರಿಯರು,ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕ ವರ್ಗ ಸೇರಿದಂತೆ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.ವಿರುಪಾಕ್ಷ ಮೂರ್ತಿ ನಿರೂಪಿಸಿದರು ಹಾಗೂ ಸಂಗೀತ ಶಿಕ್ಷಕಿ ರೋಜಾರಾಣಿ ಸಂಗೀತ ಸೇವೆ ನೀಡಿದರು,ಹುತಾತ್ಮರ ತ್ಯಾಗಕ್ಕಾಗಿ ಗಣ್ಯಮಾನ್ಯರು ಹಾಗೂ ಉಪಸ್ಥಿತರೆಲ್ಲರೂ ಸ್ಮಾರಕ್ಕೆ ಗೌರವ ಸಲ್ಲಿಸಿ ಅಶೃತರ್ಪಣ ಅರ್ಪಿಸಿದರು.

ವರದಿ:- ಇಬ್ರಾಹಿಂ ಖಲೀಲ್

LEAVE A REPLY

Please enter your comment!
Please enter your name here