ಬಿಇಓ ಮೈಲೇಶ್ ಬೇವೂರ್ ವರ್ಗಾವಣೆ ತುಂಬಾ ಅಚ್ಚರ್ಯಕರ, ಹಾಗೂ ನೋವಿನ ಸಂಗತಿ; ಡಿಎಸ್ಎಸ್ ಅಧ್ಯಕ್ಷ ರಾಮಕೃಷ್ಣ ಹೆಗಡೆ

0
204

ಸಂಡೂರು ತಾಲೂಕಿನ ಶಿಕ್ಷಣ ಇಲಾಖೆಯ ಅಧಿಕಾರಿಯದ BEO(ಮೈಲೇಶ್ ಬೇವೂರು) ರವರು ವರ್ಗಾವಣೆಗೊಂಡಿರುವುದು ತುಂಬಾ ಆಶ್ಚರ್ಯಕರವಾದ ಸಂಗತಿ ಏಕೆಂದರೆ ವರ್ಗಾವಣೆಯು ಸರಕಾರಿ ಇಲಾಖೆವರು ಅದು ಒಂದು ಪ್ರಕ್ರಿಯೆ ಒಪ್ಪಿಕೊಳ್ಳಬಹುದು!

ಆದರೆ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಸರ್ಕಾರದ ಸುತ್ತೋಲೆ ಪ್ರಕಾರ ತಾಲೂಕು ಮಟ್ಟದ ಅಧಿಕಾರಿಗಳನ್ನ ವರ್ಗಾವಣೆ ಮಾಡುವ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ವೃತ್ತಿಗೆ ಬಂದ ದಿನದಿಂದ ಇಂತಿಷ್ಟು ದಿನಗಳು ಆಗಲೇ ಬೇಕೆಂಬ ಸೂಚನೆ ಇದ್ದರೂ ಕೂಡ ಸಂಡೂರು ತಾಲೂಕಿನ BEO ತನ್ನ ಅಧಿಕಾರವನ್ನು ತೆಗೆದುಕೊಂಡು ಕೇವಲ 11ತಿಂಗಳುಗಳಲ್ಲಿ ವರ್ಗಾವಣೆಗೊಂಡಿರುವುದು ನಮ್ಮೆಲ್ಲರಿಗೂ ತುಂಬ ನೋವು ತಂದಿರುವ ಸಂಗತಿ

ಏಕೆಂದರೆ ತಮ್ಮ ಅಧಿಕಾರ ಅವಧಿಯಲ್ಲಿ ನಾವು ಕಂಡ ಹಾಗೆ ತುಂಬಾ ಪ್ರಾಮಾಣಿಕತೆಯಿಂದ ಎಲ್ಲ ಶಿಕ್ಷಕ ವೃಂದದವರಿಗೂ ವಿದ್ಯಾರ್ಥಿಗಳಿಗೂ ತಮ್ಮ ಸಿಬ್ಬಂದಿಯು ಜೊತೆಯಲ್ಲಿ ಎಲ್ಲಿಯೂ ಕೂಡ ತಮ್ಮತನವನ್ನು ಬಿಟ್ಟುಕೊಡದೆ ತಮ್ಮ ವ್ಯಾಪ್ತಿ ಒಳಗಡೆ ಅಚ್ಚುಕಟ್ಟಾಗಿ ಸೇವೆ ಸಲ್ಲಿಸಿರುವುದನ್ನು ನಾವು ಗಮನಿಸಿರುತ್ತೇವೆ ಹಾಗಾಗಿ ಇಂತಹ ಅಧಿಕಾರಿಯೂ ಇನ್ನೂ ಸ್ವಲ್ಪ ದಿನಗಳ ಕಾಲ ಇರಬೇಕಾಗಿತ್ತು ಅನಿಸುತ್ತದೆ ಇಂತಹ ಅಧಿಕಾರಿಯ ವರ್ಗಾವಣೆಯ ವಿರುದ್ಧವಾಗಿ ಯಾವ ಸಂಘ- ಸಂಸ್ಥೆಗಳು, ರಾಜಕಾರಣಿಗಳು, ಬುದ್ಧಿಜೀವಿಗಳು, ವಿದ್ಯಾವಂತರು, ಬುದ್ದಿವಂತರು ಹೋರಾಟಗಾರರು ಧ್ವನಿ ಎತ್ತದಿರುವುದು ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಒಳಗೊಂಡಂತೆ ಚಿಂತಿಸುವುದರ ಜೊತೆಗೆ ತುಂಬಾ ಗಂಭೀರವಾಗಿ ಆತ್ಮವಲೋಕನ ಮಾಡಿಕೊಳ್ಳುವುದರ ಜೊತೆಗೆ ಚರ್ಚಿಸಬೇಕಾಗುತ್ತದೆ ಈ ಒಂದು ನೋವಿನ ಸಂಗತಿಯನ್ನು ಕೆಲವೇ ಕೆಲವು ಮೌಲ್ಯತ ವಿಚಾರವಂತರಿಗೆ ಅರ್ಥವಾಗುತ್ತದೆ

ಈ ವರ್ಗಾವಣೆಯ ಹಿನ್ನೆಲೆಯ ಅಂಶಗಳನ್ನು ನಾವುಗಳು ಗಮನಿಸಿದಾಗ ಅಥವಾ ಮೆಲುಕುವುದಾದರೆ ನಮ್ಮ ತಿಳುವಳಿಕೆಯ ಪ್ರಕಾರ..

ಮೊದಲಿನಿಂದಲೂ ತಿಳಿದಿರುವ ಸತ್ಯ ವಿಚಾರವೇನೆಂದರೆ ಯಾವ ಇಲಾಖೆಯಾದರೂ ಬೇರೆ ಯಾವುದೇ ಹಂತದಲ್ಲಾದರೂ ಜಾತಿ ರಾಜಕಾರಣ ನಡೆಯುತ್ತಿತ್ತು ಆದರೆ ಶಿಕ್ಷಣ ಇಲಾಖೆಯಲ್ಲಿಯೂ ಅದು ನಡೆಯಬಾರದು ಎಂಬ ವಾದ್ಯಂತ ಇದ್ದರೂ ಕೂಡ ಇತ್ತೀಚಿನ ದಿನಗಳಲ್ಲಿ ನಮ್ಮ ಸಂಡೂರಿನ ಶಿಕ್ಷಣ ಇಲಾಖೆಯಲ್ಲಿ ಕಣ್ಣಿಗೆ ಕಾಣದಂತ ರೀತಿಯಲ್ಲಿ ಉಲ್ಬಣಗೊಳ್ಳುತ್ತಿದೆ

ಈ ವರ್ಗಾವಣೆಯು ತಡೆಗಟ್ಟುವಂತೆ ಅಧಿಕಾರಿಯು ನ್ಯಾಯಾಲಯದ ಮೆಟ್ಟಿಲು ಏರಬಹುದಾಗಿತ್ತು ಆದರೆ ಸ್ಥಳೀಯ ರಾಜಕಾರಣಿಗಳಿಗೆ ವಿರೋಧವಾಗುತ್ತದೆ ಎಂಬುವುದು ಒಂದು ಕಡೆಯಾದರೆ ಅಭಿವೃದ್ಧಿ ಕೆಲಸಕ್ಕೆ ಅಡೆತಡೆ ಆಗಬಹುದು ಎಂಬ ಅಂಶವನ್ನು ಮನಗೊಂಡು ಹೊಂದಾಣಿಕೆ ಆದಂತೆ

ಆದ್ದರಿಂದ ಯಾವುದೇ ಹಂತದ ವೃಂದದಲ್ಲಾದರೂ ಇಂತಹ ಪರಿಸ್ಥಿತಿಗಳು ಎದುರಾದಾಗ ನಾವುಗಳು ಹೋರಾಟದ ಮನೋಭಾವಗಳನ್ನ ಬೆಳೆಸಿಕೊಳ್ಳಬೇಕಾಗುತ್ತದೆ ಸಂಘಟನಾತ್ಮಕವಾಗಿ ಸಂಘಟನೆ ಮಾಡಬೇಕಾಗುತ್ತದೆ ಈ ಅಂಶವನ್ನು ಮನಗೊಂಡಾಗ 1974ರ 80ರ ದಶಕದಲ್ಲಿ ಕರ್ನಾಟಕದ ಭದ್ರಾವತಿಯ ಪ್ರೊ|| ಬಿ.ಕೃಷ್ಣಪ್ಪನವರು ವಿಶ್ವೇಶ್ವರಯ್ಯ ಕಾಲೇಜಿನ ಪ್ರಾಚಾರ್ಯರಾಗಿ ತಮ್ಮ ಸಾಂಸಾರಿಕ ಜೀವನವನ್ನು ಸ್ವಂತಿಕೆಯಿಂದ ತಾವೇ ಸ್ವಾರ್ಥದಿಂದ ಜೀವಿಸಬಹುದಾಗಿತ್ತು
ಆದರೆ ತಾನು ಪಟ್ಟಂತ ಕಷ್ಟಗಳು, ನೋವುಗಳು, ಅವಮಾನಗಳು ಅಸ್ಪೃಶ್ಯತೆ ಆಚರಣೆಯ ವಿರುದ್ಧವಾಗಿ ಶೋಷಣೆ ವಿರುದ್ಧವಾಗಿ ಅನ್ಯಾಯದ ವಿರುದ್ಧವಾಗಿ ಸರಕಾರದ ವಿರುದ್ಧವಾಗಿ ಅನೇಕ ಹೋರಾಟಗಳನ್ನ ಕರ್ನಾಟಕದ ಎಲ್ಲಾ ಹಳ್ಳಿಗಳಲ್ಲಿ,ತಾಲೂಕುಗಳಲ್ಲಿ, ಹೋಬಳಿಗಳಲ್ಲಿ, ಜಿಲ್ಲೆಗಳಲ್ಲಿ ಭಾಗವಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳನ್ನ ಸಂಘಟನೆಗಳನ್ನ ಕಟ್ಟುವುದು ರೊಂದಿಗೆ ಸರಕಾರದ ವಿರುದ್ಧವಾಗಿ ಹೋರಾಟ ಮಾಡಿ ನ್ಯಾಯವನ್ನು ಪಡೆಯುತ್ತಿದ್ದರು

ಆದರೆ ಇಂದಿನ ಎಸ್ಸಿ/ಎಸ್ಟಿ ಉದ್ಯೋಗಿಗಳು, ಶಿಕ್ಷಣವಂತರುವಿಚಾರವಂತರು ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಆದಂತವರು, ರಾಜಕಾರಣಿಗಳು ಯಾವ ರೀತಿಯಲ್ಲಿ ನಾವು ಸಂಘಟನೆಯನ್ನು ಕಟ್ಟುತ್ತೇವೆ ಸಮಾಜ ಸೇವೆ ಮಾಡುತ್ತೇವೆ ಹಾಗೂ ಕೊನೆ ಪಕ್ಷ ಸಮಾಜ ಸೇವೆ ಮಾಡುವವರ ಅಥವಾ ಸಂಘಟನೆ ಕಟ್ಟುವವರ ಬೆನ್ನೆಲುಬಾಗಿ ತಿಂತಿದ್ದೇವೆಯೇ ಎಂಬುವುದನ್ನು ತಾವು ಆತ್ಮಲೋಕನ ಮಾಡಿಕೊಳ್ಳಬೇಕಾಗುತ್ತದೆ

ಹಾಗಾಗಿ ಭೀಮ ಬಂಧುಗಳೇ ಈ ಕಾಲಮಾನದ ನಾಯಕರುಗಳೇ ಮೇಲೆ ತಿಳಿಸಿದ ಪರಿಸ್ಥಿತಿಯು ಎಲ್ಲ ಹಂತದಲ್ಲಿಯೂ ಎಲ್ಲಾ ರಂಗದಲ್ಲಿಯೂ ನಮಗೂ ಕೂಡ ಕಾಡುತ್ತದೆ ಪ್ರಸ್ತುತ ರಾಜಕಾರಣಿಗಳಾಗಲಿ ಅಥವಾ ಅಧಿಕಾರಿಗಳ ಬಳಿಯಾಗಲಿ ಒಂದು ಚಿಕ್ಕ ಕೆಲಸ ಕೂಡ ಬೇಗ ಆಗುವುದಿಲ್ಲ ಇಂತಹ ಪರಿಸ್ಥಿತಿಗಳಿಗೆ ಪರಿಹಾರ ಕೊಂಡುಕೊಳ್ಳಬೇಕಾದರೆ ನಾವುಗಳು ವೈಯಕ್ತಿಕ ದ್ವೇಷಗಳನ್ನು ಬಿಟ್ಟು ಸಂಘಟನೆಗಳನ್ನ ವಿಘಟನೆ ಮಾಡುವುದನ್ನು ಬಿಟ್ಟು ಜಾತಿ ಕುಲ ಗೋತ್ರಗಳಿಗೆ ಸಂಘಟನೆ ಕಟ್ಟುವುದನ್ನು ಬಿಟ್ಟು ಈ ನಾಡಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಪರಿಚಯ ಮಾಡಿಕೊಟ್ಟು ಅನೇಕ ಚಳುವಳಿಗಳನ್ನ ಬಾಬಾ ಸಾಹೇಬರ ವೈಚಾರಿಕ ಸಿದ್ದಾಂತಗಳನ್ನ ಬದ್ಧತೆ ಮತ್ತು ನೆಲೆಗಟ್ಟನ್ನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಚಳುವಳಿಯನ್ನ ಪ್ರೊ||ಬಿ. ಕೃಷ್ಣಪ್ಪನವರು ಈ ನಾಡಿಗೆ ಕೊಟ್ಟಿದ್ದಾರೆ ಆ ಬದ್ಧತೆಯ ಚಳುವಳಿಯನ್ನ ಮುಂದುವರಿಸುವುದಾದರೆ ನಮಗೆ ಸಾಮಾಜಿಕ ನ್ಯಾಯ ಸಿಗಬಹುದು ಇಲ್ಲವಾದರೆ ಪ್ರಸ್ತುತ ರಾಜಕಾರಣಿಗಳ ಮುಂದೆ ಪ್ರತಿನಿತ್ಯ ಕೈ ಕಟ್ಟಿಕೊಂಡು ಬಿಕ್ಷೆ ಬೇಡಬೇಕಾಗುತ್ತದೆ ಬೇಡುತ್ತಿದ್ದೇವೆ ಮುಂದುವರಿಯುತ್ತದೆ..
ಜೈ ಭೀಮ್ …. ಜೈ ಕೃಷ್ಣಪ್ಪಾಜಿ….

LEAVE A REPLY

Please enter your comment!
Please enter your name here