ಜಿಟಿ ಜಿಟಿ ಮಳೆಯಿಂದ, ಕೆಸರು ಗದ್ದೆಯಾದ ಕೊಟ್ಟೂರು ಸಂತೆ ಮಾರ್ಕೆಟ್

0
234

■ಕೊಟ್ಟೂರು ತಾಲೂಕು ಕೇಂದ್ರಕ್ಕೆ ಇಲ್ಲದಾಗಿದೆ ಸುಸಜ್ಜಿತ ಸಂತೆ ಮಾರ್ಕೆಟ್
■ಬ್ರಿಟಿಷ್ ಕಾಲದಲ್ಲಿಯೇ ಕೊಟ್ಟೂರು ಕಾಟನ್ ಮಾರುಕಟ್ಟೆ ಕೇಂದ್ರವೆಂದು ಹೆಸರಾಗಿದೆ,ಇಂದಿಗೂ ಸ್ವಂತ “ಸಂತೆ ಮಾರ್ಕೆಟ್” ಭಾಗ್ಯ ಇಲ್ಲದಾಗಿದೆ.
■ನೂತನ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಕೊಟ್ಟೂರಲ್ಲಿ ಸುಸಜ್ಜಿತ ಸಂತೆ ಮಾರ್ಕೆಟ್ ನಿರ್ಮಾಣಕ್ಕೆ ಚಿತ್ತವಿಡುವರೆ, ಸಾರ್ವಜನಿಕರ ನಿರೀಕ್ಷೆ.

ಕೊಟ್ಟೂರು ಜಿಟಿ ಜಿಟಿ ಮಳೆಯು ಮಂಗಳವಾರ, ಬುಧವಾರ ಸುರಿದಿದ್ದಲ್ಲದೆ ಗುರುವಾರನು ಬಿಟ್ಟು ಬಿಡದೆ ಸುರಿದ ಪರಿಣಾಮ ಪಟ್ಟಣದ ತೇರುಬಯಲಿನ ಸಂತೆ ಮಾರ್ಕೆಟ್ ಅಕ್ಷರಶಃ ಕೆಸರು ಗದ್ದೆಯಾಗಿ ಮಾರ್ಪಟ್ಟ ಹಿನ್ನೆಲೆ ಕೆಲ ಜನರು ಶಪಿಸುತ್ತ ಅದರಲ್ಲೇ ಕಷ್ಟಪಟ್ಟು ತರಕಾರಿ ಖರೀದಿ ಮಾಡಿದರು.

ಕೆಸರನ್ನು ತುಳಿದುಕೊಂಡು, ನೀರನ್ನು ದಾಟಿಕೊಂಡು ಸಂತೆ ಮಾರ್ಕೆಟ್ ನ ಅವ್ಯವಸ್ಥೆಗೆ, ವಾಚಮಾಚವಾಗಿ ಜನಪ್ರತಿ ನಿಧಿಗಳಿಗೆ ಹಿಡಿ ಶಾಪ ಹಾಕುತ್ತ ತರಕಾರಿ ಕೊಂಡುಕೊಳ್ಳುವಂತಹದ್ದು ಕೆಲವರಿಗೆ ಅನಿವಾರ್ಯವಾಗಿತ್ತು.

ಕೆಸರಿನಲ್ಲಿಯೇ ಕೆಲವರು ಚಾಪಿಹಾಸಿಕೊಂಡು,ಸೊಪ್ಪು, ತರಕಾರಿ,ಹಣ್ಣು ಮಾರಾಟ ಮಾಡಿದರೆ ಇನ್ನೂ ಕೆಲವರು ಜಿಟಿ ಜಿಟಿ ಮಳೆಯಲ್ಲಿ ಕೊಡೆ ಹಿಡಿದು ನಿಂತುಕೊಂಡೇ ಮಾರಾಟ ಮಾಡುವುದು ಎಲ್ಲೆಡೆ ಗೋಚರಿಸಿತು.

ಚರಂಡಿ ಗೊಜ್ಜಲದಂತ ಸಂತೆ ಮಾರ್ಕೆಟ್ ಮಾರ್ಪಟ್ಟಿರುವುದನ್ನು ಅವಲೋಕಿಸಿದ ಕೆಲ ಮಹಿಳೆಯರು ಸಂತೆ ಮಾರ್ಕೆಟ್ ಗೆ ಕಾಲಿಡಲು ಹಿಂದೇಟಾಕಿ, ಮುಖ್ಯ ರಸ್ತೆಯ ಬದಿಯಲ್ಲಿದ್ದ ಅಷ್ಟಿಷ್ಟು ತರಕಾರಿ, ಹಣ್ಣು, ಸೊಪ್ಪು ಖರೀದಿಸಿ ಮನೆ ಕಡೆ ಮುಖಮಾಡಿದರು.

ಸಂತೆಗೆ ಬಂದಿದ್ದ ಸಾವಿರಾರು ರೂ. ದುಬಾರಿ ತರಕಾರಿ ಮಾರಾಟವಾಗದೆ ಉಳಿಯಿತು,ಹಳ್ಳಿಗಳಿಂದ ಮಾರಾಟಕ್ಕೆ ತಂದಿದ್ದ ತರಕಾರಿ ವ್ಯಾಪಾರ ಇಲ್ಲದೆ ಉಳಿದಿದ್ದರಿಂದ ರೈತರು ಹಿಡಿ ಶಾಪ ಹಾಕುತ್ತ ಊರಿಗೆ ತೆರಳಿದರು.

ಈ ಸಂತೆ ಮಾರ್ಕೆಟ್ ಕೇವಲ ಮಾರ್ಕೆಟ್ ಮಾತ್ರವಲ್ಲ ಖಾಸಗಿ ಬಸ್ ನಿಲ್ದಾಣವು ಹೌದು, ಜನರು ಖರೀದಿ ಮಾಡುವ ಬರದಲ್ಲಿ ಇಲ್ಲಿ ಸ್ವಲ್ಪ ಯಾಮಾರಿದರು ಜನರ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

ಕೊಟ್ಟೂರು ತಾಲೂಕು ಕೇಂದ್ರ ಮತ್ತು ವ್ಯಾಪಾರ ಕೇಂದ್ರವೂ ಹೌದು,ಮಾರುಕಟ್ಟೆ ವ್ಯಾಪಾರದಲ್ಲಿ ಬ್ರಿಟಿಷ್ ಕಾಲದಿಂದಲೂ ಹೆಸರಾದ ಪಟ್ಟಣ, ಅದರೂ ಇಲ್ಲಿಗೆ ಸುವ್ಯವಸ್ಥಿತ ಸಂತೆ ಮಾರ್ಕೆಟ್ ಇಲ್ಲದಿರುವುದು ಇಲ್ಲಿಯವರೆಗೆ ಆಡಳಿತ ನಡೆಸಿದ ಎಲ್ಲಾ ಜನ ಪ್ರತಿನಿಧಿಗಳ ನಿರ್ಲಕ್ಷ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.

ಪ್ರತಿ ದಿನ ತರಕಾರಿ ಮಾರಾಟ ವ್ಯಾಪಾರ ಇಲ್ಲಿ ನಡೆಯುತ್ತೆ, ಹಳ್ಳಿಗಳಿಂದ ರೈತರು ತಂದು ಮಾರಾಟ ಮಾಡುವರು ಇಲ್ಲಿ ಸಾವಿರಾರು. ರೂ.ಕೈ ಬದಲಾಗುತ್ತೆ,ಇಲ್ಲಿನ ತರಕಾರಿ ಹೊರ ಜಿಲ್ಲೆ ಮತ್ತು ರಾಜ್ಯಕ್ಕೂ ರಪ್ತಾಗುತ್ತೆ, ಈ ಹಿನ್ನೆಲೆ ಇಲ್ಲಿ ಸುವ್ಯವಸ್ಥಿತ ಸಂತೆ ಮಾರ್ಕೆಟ್ ನಿರ್ಮಾಣ ಅವಶ್ಯಕತೆ ಇದೆ.

◆ಹತ್ತಾರು ವರ್ಷಗಳಿಂದ ಇಲ್ಲಿನ ಪರಿಸ್ಥಿತಿ ಇದೇ ರೀತಿ ಇದೆ,ಕೊಟ್ಟೂರು ವ್ಯಾಪಾರ ಕೇಂದ್ರ ಎಂದು ಹೆಸರಿದೆ ಆದರೆ ಇಲ್ಲಿ ಸುಸಜ್ಜಿತ ಸಂತೆ ಮಾರ್ಕೆಟ್ ಇಲ್ಲದಿರುವುದು ದುರ್ದೈವ,ಗಚ್ಚಿನ ಮಠ ಶಾಲೆ ಆವರಣದಲ್ಲಿ ಮೊದಲು ಸಂತೆ ನಡೆತಿತ್ತು,ಎರಡು ದಶಕಗಳ ಹಿಂದೆ ಇಲ್ಲಿಗೆ ವರ್ಗವಾಹಿತು. ಅಂದಿನಿಂದ ಇಂದಿನವರೆಗೂ ಇದೇ ಅವ್ಯವಸ್ಥೆಯಲ್ಲಿ ವ್ಯಾಪಾರ ಮಾಡುವಂತಾಗಿದೆ.

-ಕಾಶಿ,
ಮಸಾಲೆ ವ್ಯಪಾರ,
ಕೊಟ್ಟೂರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here