ಶಾಲಾ ಕರ್ತವ್ಯಕ್ಕೆ ಹಾಜರಾಗಲು ಸೂಚನೆ

0
136

ಬಳ್ಳಾರಿ,ಜು.25: ಸಂಡೂರು ತಾಲೂಕಿನ ಯು.ರಾಜಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಿಲ್ಪ.ಕೆ ಅವರು, 2021 ಜೂ.23 ರಿಂದ ಇಲಾಖೆಯ ಮೇಲಾಧಿಕಾರಿಗಳ ಅನುಮತಿ ಪಡೆಯದೇ ಹಾಗೂ ಶಾಲೆಗೆ ಯಾವುದೇ ಮಾಹಿತಿ ನೀಡದೇ ಶಾಲಾ ಕರ್ತವ್ಯಕ್ಕೆ ಅನಧೀಕೃತವಾಗಿ ಗೈರು ಹಾಜರಾಗಿದ್ದು, ಮರಳಿ ಶಾಲಾ ಕರ್ತವ್ಯಕ್ಕೆ ಹಾಜರಾಗುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಶಿಸ್ತುಪ್ರಾಧಿಕಾರಿಗಳಾದ ಎ.ಹನುಮಕ್ಕ ಅವರು ಸೂಚಿಸಿದ್ದಾರೆ.

ಸದರಿ ಶಿಕ್ಷಕಿಗೆ 2021 ಡಿ.18 ರಂದು ಶಾಲಾ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಲಾಗಿತ್ತು. ಆದರೂ ಅನುಮತಿ ನೀಡಿದ ದಿನಾಂಕದಿಂದ ಪ್ರಸ್ತುತ ಇಲ್ಲಿಯವರೆಗೂ ಅನುಮತಿ ಪಡೆದು ಶಾಲಾ ಕರ್ತವ್ಯಕ್ಕೆ ಹಾಜರಾಗದೇ ಅನಧೀಕೃತವಾಗಿ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಗೈರು ಹಾಜರಾದ ಕುರಿತಂತೆ ನೋಟಿಸ್ ಹಾಗೂ ಪ್ರಕಟಣೆಯ ಮೂಲಕ ಶಾಲಾ ಕರ್ತವ್ಯಕ್ಕೆ ಹಾಜರಾಗಲು ಸಾಕಷ್ಟು ಅವಕಾಶ ನೀಡಲಾಗಿದ್ದರೂ ಗೈರು ಹಾಜರಾಗಿರುತ್ತಾರೆ.

ಅಂತಿಮವಾಗಿ ಈ ಪ್ರಕಟಣೆ ಪ್ರಕಟವಾದ ನಂತರದ 7 ದಿನದೊಳಗಾಗಿ ನಗರದ ಕೋಟೆ ಪ್ರದೇಶದ ಶಾಲಾ ಶಿಕ್ಷಣ ಇಲಾಖೆಯ ಶಿಸ್ತುಪ್ರಾಧಿಕಾರಿ ಹಾಗೂ ಉಪನಿರ್ದೇಶಕರು (ಆಡಳಿತ) ಕಚೇರಿಗೆ ತಮ್ಮ ರಕ್ಷಣ ಹೇಳಿಕೆ ಸಲ್ಲಿಸಬೇಕು, ಇಲ್ಲವಾದಲ್ಲಿ ತಮ್ಮ ಹೇಳಿಕೆ ಏನು ಇಲ್ಲವೆಂದು ಭಾವಿಸಿ ಏಕಪಕ್ಷೀಯವಾಗಿ ಸರ್ಕಾರದ ಆದೇಶದಂತೆ ಹಾಗೂ ಸಿ.ಸಿ.ಎ 1957ರ ನಿಯಮಗಳಲ್ಲಿ ಭಾಗ-4 8ರ ದಂಡನೆಗಳ ಸ್ವರೂಪ ಉಪನಿಯಮ (8) ರನ್ವಯ ಸೇವೆಯಿಂದ ವಜಾ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here