ನಾಯಿ ಹಾಗೂ ಪ್ರಾಣಿಗಳು ಕಚ್ಚಿದಾಗ ನಿರ್ಲಕ್ಷ ಬೇಡ,ಕಡ್ಡಾಯವಾಗಿ ಆಂಟಿ ರೇಬೀಸ್ ಲಸಿಕೆ ಹಾಕಿಸಿ; ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
285

ಸಂಡೂರು: ಸೆ: 27: ತಾಲೂಕಿನ ತೋರಣಗಲ್ಲು ಗ್ರಾಮದ ಒಂದನೇ ವಾರ್ಡಿನಲ್ಲಿ “ವಿಶ್ವ ರೇಬೀಸ್ ದಿನ” ಕುರಿತು ಗುಂಪುಸಭೆಗಳ ಮೂಲಕ ಜಾಗೃತಿ ಕಾರ್ಯಕ್ರಮ ನಡೆಯಿತು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ರೇಬೀಸ್ ವ್ಯಾಕ್ಸಿನ್ ಕಂಡುಹಿಡಿದ ಲೂಯಿಸ್ ಪಾಶ್ಚರ್ ಅವರು ಮರಣ ಹೊಂದಿದ ಸೆಪ್ಟೆಂಬರ್ 28 ನ್ನು “ವಿಶ್ವ ರೇಬೀಸ್ ದಿನ” ವನ್ನಾಗಿ ಆಚರಿಸಲಾಗುತ್ತಿದೆ, ರೇಬೀಸ್ ಮಾರಣಾಂತಿಕವಾಗಿದ್ದರೂ ಜಾಗೃತಿಯಿಂದ ಮರಣಗಳನ್ನು ತಡೆಯಬಹುದಾಗಿದೆ, ರೇಬೀಸ್ ವೈರಾಣುಗಳು ನಾಯಿಗಳಲ್ಲಿ ಹೆಚ್ಚಾಗಿ ಮತ್ತು ಕಡಿಮೆ ಪ್ರಮಾಣದಲ್ಲಿ ಬೆಕ್ಕು, ಮಂಗ,ತೋಳ,ನರಿ ಇತರೆ ಕೆಲವು ಪ್ರಾಣಿಗಳ ಜೊಲ್ಲಿನಲ್ಲಿದ್ದು, ಅವು ಮನುಷ್ಯನಿಗೆ ಕಚ್ಚುವುದರ ಮೂಲಕ ಹರಡುವ ಮಾರಣಾಂತಿಕ ಕಾಯಿಲೆಯಾಗಿದೆ, ನಾಯಿ ಕಚ್ಚಿದಾಗ ತಡಮಾಡದೇ ಸೋಪು ನೀರಿನಿಂದ ಚೆನ್ನಾಗಿ ತೊಳೆಯ ಬೇಕು, ಗಾಯದ ಮೇಲೆ ಏನನ್ನೂ ಹಚ್ಚಬಾರದು, ಬಟ್ಟೆ ಕಟ್ಟಬಾರದು, ನಾಟಿ ವೈದ್ಯ ಮಾಡಿಕೊಳ್ಳದೇ ನೇರವಾಗಿ ಅಸ್ಪತ್ರೆಗೆ ಬೇಟಿ ನೀಡಿ ಆ್ಯಂಟಿ ರೇಬೀಸ್ ವ್ಯಾಕ್ಸಿನ್ ನ ನಾಲ್ಕು ಡೋಸ್ ನಿಗದಿತ ಸಮಯದಲ್ಲಿ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು,

ನಾಯಿಗಳು ಕಚ್ಚಿದಾಗ ನಾಯಿಗಳ ಮೇಲೆ ನಿಗ ಇಡಬೇಕು, ಹುಚ್ಚು ಹಿಡಿದಿರುವ ಲಕ್ಷಣಗಳು ಇದ್ದರೆ ಅಂತಹ ನಾಯಿ ಕಚ್ಚಿದವರಿಗೆ ಪ್ರತ್ಯೇಕ ವ್ಯಾಕ್ಸಿನೇಷನ್‌ ವ್ಯವಸ್ಥೆ ಇರುತ್ತದೆ, ನಾಯಿ ಕಚ್ಚುವಿಕೆಯ ಆಧಾರದಲ್ಲಿ ಚಿಕಿತ್ಸೆ ನಿರ್ಧರಿಸಲ್ಪಡುತ್ತದೆ, ಸಾರ್ವಜನಿಕರು ವೈದ್ಯರ ಮಾರ್ಗದರ್ಶನದಂತೆ ಅನುಸರಿಸ ಬೇಕು, ರೇಬೀಸ್ ಸೋಂಕಿನ ಲಕ್ಷಣಗಳು ಜೊಲ್ಲು ಸೋರಿಸುವುದು ಬೆಳಕು, ನೀರು ನೋಡಿದಾಗ ಬೆದರುವುದು ಮುಖ್ಯ ಲಕ್ಷಣಗಳಾಗಿವೆ, ಪ್ರಾಣಿಗಳ ಜೊತೆ ಒಡನಾಡ ಇರುವವರು ಎಚ್ಚರಿಕೆಯಿಂದ ಇರಬೇಕು, ಪ್ರಾಣಿಗಳಿಗೂ ರೇಬೀಸ್ ವ್ಯಾಕ್ಸಿನೇಷನ್‌ ಮಾಡಿಸಬೇಕು, ಬೀದಿ ನಾಯಿಗಳಿಂದ ಅಂತರ ಕಾಯ್ದು ಕೊಳ್ಳ ಬೇಕು, ಅವುಗಳಿಗೆ ಚೇಡಿಸಬಾರದು, ನಾಯಿಗಳ ಸಂತಾನೋತ್ಪತ್ತಿ ಸಮಯ ಮತ್ತು ಮರಿಗಳನ್ನು ಹಾಕಿದ ಸಮಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು,ರಸ್ತೆಗಳಲ್ಲಿ ತುಂಬಾ ತೊಂದರೆ ಕೊಡುವ ನಾಯಿಗಳು ಇದ್ದಾಗ ಪ್ರಾಣಿ ರಕ್ಷಕರಿಗೆ ತಿಳಿಸಬೇಕು ಎಂದು ತಿಳಿಸಿದರು, ನಂತರ ರೇಬೀಸ್ ಕುರಿತು ಕರಪತ್ರಗಳನ್ನು ಹಂಚಲಾಯಿತು,

ಈ ಸಂದರ್ಭದಲ್ಲಿ ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಆಶಾ ಕಾರ್ಯಕರ್ತೆಯರಾದ ಮೇರಿ ಅನಸೂಯಾ, ದೇವಮ್ಮ,ಲಕ್ಷ್ಮಿ,ಕಾವೇರಿ, ಸಾರ್ವಜನಿಕರಾದ ಹೊನ್ನೂರಪ್ಪ,ಒಡ್ಡಿ ಹನುಮಂತಪ್ಪ, ಶಾರದಮ್ಮ,ಮುತ್ತಮ್ಮ,ನಾಗಮ್ಮ,ಶಂಕ್ರಮ್ಮ,ದುರುಗಮ್ಮ,ನಾಗವೇಣಿ,ಹುಲಿಗೆಮ್ಮ,ಸುಶ್ಮಿತಾ,ಪಕ್ಕೀರಮ್ಮ,ಯಲ್ಲಮ್ಮ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here