ಮಲೇರಿಯಾ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಲು ಕರೆ,

0
180

ಸಂಡೂರು: ಅ: 06: ತಾಲೂಕಿನ ತೋರಣಗಲ್ಲು ಗ್ರಾಮದ 10 ಎಮ್.ಟಿ ಗೇಟ್ ವ್ಯಾಪ್ತಿಯ ಕಾರ್ಮಿಕರು ವಾಸಿಸುವ‌ ಸೆಡ್ ಬಳಿ ಮಲೇರಿಯಾ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,

ಈ ಸಂದರ್ಭದಲ್ಲಿ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾತನಾಡಿ 2030 ರೊಳಗೆ ಮಲೇರಿಯಾ ಮುಕ್ತ ಮಾಡುವ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡು ಅನುಷ್ಟಾನ ಮಾಡಲಾಗುತ್ತಿದೆ, ಜ್ವರದ ಲಕ್ಷಣಗಳು ಇರುವವರಿಗೆ ರಕ್ತಲೇಪನದ ಮಾದರಿ ಸಂಗ್ರಹಣೆ ಮಾಡಲಾಗುತ್ತಿದೆ, ಗ್ರಾಮದಲ್ಲಿ ವೃತ್ತಿ ಅರಸಿ ಬಂದ ವಲಸಿಗರನ್ನು ತಪಾಸಣೆ ಮಾಡಲಾಗುತ್ತಿದೆ, ಅಲ್ಲದೇ ಎಲ್ಲಿಂದಲಾದರೂ ಬರಲಿ ಮಲೇರಿಯಾ ಲಕ್ಷಣಗಳು ಇರುವವರು ರಕ್ತ ಪರೀಕ್ಷೆ ಮಾಡಿಸಿಕೊಂಡು ಖಾತ್ರಿ ಪಡಿಸಿಕೊಂಡು ಜ್ವರಕ್ಕೆ ಚಿಕಿತ್ಸೆ ಪಡೆಯಬೇಕು, ಮಲೇರಿಯಾ ನಿಯಂತ್ರಣಕ್ಕೆ ಜನರ ಸಹಕಾರದ ಅಗತ್ಯ ಇದ್ದು ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ನಿಜಾಮುದ್ದೀನ್ ಮಲೇರಿಯಾ ಒಬ್ಬರಿಂದೊಂಬ್ಬರಿಗೆ ಹರಡಂತೆ ಮೈತುಂಬ ಬಟ್ಟೆ ಹಾಕುವುದು,ಮಲಗುವಾಗ,ಸೊಳ್ಳೆ ಪರದೆ ಬಳಸುವುದು,ಸೊಳ್ಳೆ ನಿರೋಧ ಕ್ರೀಮ್,ಕಾಯಿಲ್‌ಗಳನ್ನು ಬಳಸುವುದು, ಮುಖ್ಯವಾಗಿ ಸೊಳ್ಳೆಗಳ ಉತ್ಪತ್ತಿ ಆಗದಂತೆ ನೋಡಿಕೊಳ್ಳುವಂತೆ ತಿಳಿಸಿದರು,

ಈ ಸಂದರ್ಭದಲ್ಲಿ ಬಿಹಾರ್,ಛತ್ತೀಸ್ಗಢ ದಿಂದ ಬಂದ ಕಾರ್ಮಿಕರು ಮತ್ತು ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here