ನಾನು ಕೆಲಸದಲ್ಲಿದ್ದಲ್ಲೇ ನನಗೆ ಲಸಿಕೆ ಸಿಕ್ಕಿದ್ದು ನನ್ನ ಅದೃಷ್ಟ ಎಂದ ಕಾರ್ಮಿಕ,ಎಮ್ ಬಸಾಪುರ ಗ್ರಾಮದಲ್ಲಿ ಕೋವಿಡ್ ಲಸಿಕಾ ಅಭಿಯಾನ

0
336

ಸಂಡೂರು:ಸೆ:05:- ನಾನು ಕೆಲಸದಲ್ಲಿದ್ದಲ್ಲೆ ನನಗೆ ಲಸಿಕೆ ಸಿಕ್ಕಿದ್ದು ನನ್ನ ಅದೃಷ್ಟ: ರಸ್ತೆ ಕಾಮಗಾರಿ ಕಾರ್ಮಿಕ ನಾಗರಾಜ್ ಅನಿಸಿಕೆ, ಕೋವಿಡ್ ಲಸಿಕೆ ಪಡೆದು ಮಾತನಾಡಿದ ನಾಗರಾಜ್ ಪಟ್ಟಣಗಳಲ್ಲಿ ಲಸಿಕೆ ಪಡೆಯಲು ಸಾಲು ನೋಡಿ ವಾಪಸ್ಸಾಗುತ್ತಿದ್ದೆ, ಆದರೆ ಇಂದು ಮೆಟ್ರಿಕಿ-ಬಸಾಪುರ ರಸ್ತೆ ಡಾಂಬರಿಕರಣ ಕೆಲಸ ಮಾಡುವಾಗ ವಾಹನ ಬಂತು ನಮ್ಮನ್ನು ಪ್ರೀತಿಯಿಂದ ಎಲ್ಲರೂ ಲಸಿಕೆ ಪಡೆದಿದ್ದೀರಾ ಎಂದು ವಿಚಾರಿಸಿದರು, ನಾನು ಇನ್ನೂ ಇಲ್ಲ ಅಂದೆ, ಬನ್ನಿ ಹಾಕುವೆವು ಅಂದ್ರು, ಎಲ್ಲಿಗೆ ಬರಬೇಕು ಅಂದೆ, ಇಲ್ಲೇ ನಮ್ಮ ವಾಹದಲ್ಲೆ ಲಸಿಕೆ ಇದೆ ಹಾಕುವೆವೆ ಅಂದ್ರು, ಇಲ್ಲೇನಾ,ಹೌದು ಎಂದ್ರು,ಕರೆದು ನನ್ನೊಂದಿಗೆ ಮೂರು ಜನಕ್ಕೂ ಲಸಿಕೆ ಹಾಕಿದ್ರು ಇದು ನನಗೆ ತುಂಬಾ ಸಂತೋಷ ವಾಯಿತು, ಪಟ್ಟಣಗಳಲ್ಲಿ ಜನ ಕ್ಯೂ ನಿಂತ್ರು ಸಿಗಲ್ಲ ಹಳ್ಳಿಗಳಲ್ಲಿ ಲಸಿಕೆ ಸುಲಭವಾಗಿ ಸಿಗುತ್ತೆ, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದನು,

ಸಂಡೂರು ತಾಲೂಕಿನ ಎಮ್ ಬಸಾಪುರ ಗ್ರಾಮದಲ್ಲಿ ಇಂದು ಲಸಿಕಾ ಅಭಿಯಾನ ಅಂಗವಾಗಿ ಗ್ರಾಮದಲ್ಲಿ 18 ವರ್ಷದ ಜನರಿಗೆ ಲಸಿಕೆ ಹಾಕಲು ಲಸಿಕಾ ಕೇಂದ್ರ ತೆರೆಯಲಾಗಿತ್ತು, ಆದರೆ ಅಲ್ಲಿ ಅದೇ ಪ್ರತಿಕ್ರಿಯೆ ನಮಗೆ ಲಸಿಕೆ ಬೇಡ-ಲಸಿಕೆ ಬೇಡ, ಅಲ್ಲಿ ಸತ್ತಿದ್ದಾರೆ, ಇಲ್ಲಿ ಸತ್ತಿದ್ದಾರೆ, ಜ್ವರ ಬರುತ್ತೆ, ಲಸಿಕೆಯೂ ಬೇಡ-ಆ ನಂತರದ ನೋವೂ ಬೇಡ, ಕೆಲವರು ನಮಗೆ ಹೊಲದ ಕೆಲಸಗಳಿವೆ,ಹಾಕಿಸಿಕೊಂಡ ನಂತರ ಕೆಲಸ ನಿಂತು ಹೋಗುತ್ತೆ,ಅಂತ ಹೇಳುವವರೇ ಹೆಚ್ಚು,

1882 ಜನಸಂಖ್ಯೆ ಇರುವ ಗ್ರಾಮದಲ್ಲಿ 1260 ಫಲಾನುಭವಿಗಳಲ್ಲಿ ಇದುವರೆಗೂ ಕೇವಲ 180 ಜನರು ಅದೂ 45ವರ್ಷ ಮತ್ತು 60ವರ್ಷ ವಯಸ್ಸಿನ ಜನರು ಮಾತ್ರ ಮತ್ತು ಪಡೆದಿದ್ದಾರೆ, 18 ವರ್ಷ ವಯಸ್ಸಿನ ಯಾವೊಬ್ಬ ವ್ಯಕ್ತಿಯೂ ಲಸಿಕೆ ಪಡೆದಿರಲಿಲ್ಲ, ಹೇಗಾದರೂ ಮಾಡಿ ನಾವು ಇವರಿಗೆ ಲಸಿಕೆ ಪಡೆಯುವಂತೆ ಮಾಡಬೇಕೆಂಬ ಛಲದಿಂದ ನಮ್ಮ ತಂಡ ಮನೆ ಮನೆಗೆ ಬೇಟಿ ಕೊಟ್ಟು ಲಸಿಕೆಯ ಮಹತ್ವವನ್ನು ತಿಳಿಸಿದೆವು, ಏನೂ ಆಗುವುದಿಲ್ಲ, ಹೇಳಿಕೆ ಮಾತು ಕೇಳಿ ಭಯಗೊಂಡಿರುವಿರಿ ಸುಮ್ಮನೆ ಲಸಿಕೆ ಪಡೆಯಿರಿ ಎಂದು ತಿಳಿಸಿದೆವು, ಮೊದಲಿಗೆ 20 ವರ್ಷದ ಶಂಕರ್ ಲಸಿಕೆ ಪಡೆದ, ನಂತರ ಕೆಲವು ಯುವಕರು ಬಂದು ಲಸಿಕೆ ಪಡೆದರು, ಇವರನ್ನು ನೋಡಿ ಮತ್ತೆ ಕೆಲವರು ಬಂದು ಲಸಿಕೆ ಪಡೆದರು. ಹಾಗೂ ಹೀಗೂ ಮಾಡಿ 51 ಜನರಿಗೆ ಲಸಿಕೆ ನೀಡಲಾಯಿತು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ವಿವರಿಸಿದರು,

ನಂತರ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಕುಶಾಲ್ ರಾಜ್ ಪರಿಶೀಲನೆ ಮಾಡಿ ಕೆಲವು ಮನೆಗಳಿಗೆ ಬೇಟಿ ನೀಡಿ ಲಸಿಕೆ ಬಗ್ಗೆ ಮನವರಿಕೆ ಮಾಡಿಕೊಟ್ಟರು, ಈ ಸಂದರ್ಭದಲ್ಲಿ ಡಾ.ಕುಶಾಲ್ ರಾಜ್, ಸ್ಕ್ವಾಡೆಸ್ ಮೊಬೈಲ್ ಮೆಡಿಕಲ್ ಯುನಿಟ್ (ಎಮ್.ಎಮ್.ಯು) ನ ವೈದ್ಯರಾದ ಡಾ.ಪೂಜಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ಸಂರಕ್ಷಣ ಅಧಿಕಾರಿ ಶಂಕ್ರಮ್ಮ, ಮೆಟ್ರಿಕಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಪ್ರಭಾಕರ ರೆಡ್ಡಿ, ಜಿ.ಎನ್.ಎಮ್ ಪವಿತ್ರ, ಲ್ಯಾಬ್ ಟೆಕ್ನಾಲಜಿಸ್ಟ್ ನಾಗವೇಣಿ, ಪಾರ್ಮಾಸಿಸ್ಟ್ ಶೃತಿ, ಎ.ಎನ್.ಎಮ್ ಲತಾ, ಶರತ್ ಕುಮಾರ್,ಆಶಾ ಕಾರ್ಯಕರ್ತೆಯರಾದ ಗೌರಮ್ಮ, ಅನುಪಮಾ, ರುದ್ರಮ್ಮ, ಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ಮಹಂಕಾಳಿ ಮತ್ತು ನಾಗವೇಣಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here