ಸ್ಮಯೋರ್ ಸಂಸ್ಥೆಯಿಂದ ಅಜಾದಿ ಕಾ ಅಮೃತ್ ಮಹೋತ್ಸವ.

0
213

ಸಂಡೂರು:ಪೆ:18:- ಸ್ಮಯೋರ್ ಸಂಸ್ಥೆಯು ಸೊಂಡೂರು ತಾಲೂಕಿನ ದೇವಗಿರಿಯ ಸಮುದಾಯ ವೃತ್ತಿ ತರಬೇತಿ ಕೇಂದ್ರದಲ್ಲಿ 75 ವರ್ಷಗಳ ಭಾರತ ಸ್ವಾತಂತ್ರ್ಯದ ಸ್ಮರಣಾರ್ಥವಾಗಿ (ಅಜಾದಿ ಕಾ ಅಮೃತ್ ಮಹೋತ್ಸವ) ದಿನಾಂಕ 16.12.2021 ರಿಂದ 31.12.2021 ರವರೆಗೆ ಹಮ್ಮಿಕೊಂಡಿದ್ದ ವಿವಿಧ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ದಿನಾಂಕ 15.02.2022 ರಂದು ಮುಖ್ಯ ಅತಿಥಿಗಳಾದ ಶ್ರೀಯುತ ಸುರೇಶ್ ಪ್ರಸಾದ್, ಉಪ ನಿಯಂತ್ರಕರು ಗಣ ಮತ್ತು ಕಛೇರಿ ಉಸ್ತುವಾರಿ, ಭಾರತೀಯ ಗಣ ಗಳ ಬ್ಯೂರೊ (ಐಬಿಎಮ್), ಬೆಂಗಳೂರು ಇವರು ಸಸಿಗಳನ್ನು ನೆಡುವದರ ಮೂಲಕ ಮತ್ತು ಇವರೊಂದಿಗೆ ಸ್ಮಯೋರ್ ಸಂಸ್ಥೆಯ ಎಂ.ಡಿ. ಮಹಮ್ಮದ್ ಸಲೀಂ (ಡೈರೆಕ್ಟರ್ ಮೈನ್ಸ್) ಮತ್ತು ಇತರ ಅಧಿಕಾರಿಗಳು ಜ್ಯೋತಿ ಬೆಳಗಿಸುವುದರ ಮೂಲಕ ಸಮಾರೋಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿ ಅಗಮಿಸಿದ ಶ್ರೀಯುತ ಸುರೇಶ್ ಪ್ರಸಾದ್, ಉಪ ನಿಯಂತ್ರಕರು ಗಣ ಮತ್ತು ಕಛೇರಿ ಉಸ್ತುವಾರಿ, ಭಾರತೀಯ
ಗಣ ಗಳ ಬ್ಯೂರೊ, ಬೆಂಗಳೂರು ಇವರು ಮಾತನಾಡುತ್ತ ಹಸಿರು ಭಾರತ ಪರಿಕಲ್ಪನೆಯ ಅಡಿಯಲ್ಲಿ ನೌಕರರಿಗೆ ಹಾಗೂ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ, ಪರಿಸರ ಸಂರಕ್ಷಣೆ, ಪರಿಸರ ಸ್ವಚ್ಛತೆ ಬಗ್ಗೆ ಜಾಗೃತಿ ನೀಡಿರುವ ವಿಧಾನ ಹಾಗೂ ಪರಿಣಾಮಕಾರಿಯಾಗಿ ಯಶಸ್ವಿಯಾದ ಬಗ್ಗೆ ಅವರು ತುಂಬು ಹೃದಯದ ಹರ್ಷವನ್ನು ವ್ಯಕ್ತಪಡಿಸಿದರು.

ಸ್ಮಯೋರ್ ಸಂಸ್ಥೆಯ ಎಂ.ಡಿ. ಮಹಮ್ಮದ್ ಅಬ್ದುಲ್ ಸಲೀಂ ನಿರ್ದೇಶಕರು (ಗಣ ) ಇವರು ಈ 15 ದಿನಗಳಲ್ಲಿ ಆರೋಗ್ಯ ಶಿಕ್ಷಣ, ಪರಿಸರ ಸಂರಕ್ಷಣೆ ಸ್ವಚ್ಛತೆ ಬಗ್ಗೆ ವಿಸ್ತಾರವಾದ ಜಾಗೃತಿಯನ್ನು ದೇವಗಿರಿ, ಕಮ್ಮತ್ತೂರು, ಸುಬ್ಬರಾಯನಹಳ್ಳಿ ಹಾಗೂ ರಾಮಘಡ ಗ್ರಾಮಗಳಲ್ಲಿ ವ್ಯಾಪಕವಾಗಿ ಮೂಡಿಸುವಲ್ಲಿ ಹಾಗೂ ಹಸಿರು ಭಾರತ ಪರಿಕಲ್ಪನೆಯ ಸಾಮೂಹಿಕ ಸಸಿ ನೆಡುವ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಭಾಗವಹಿಸಿದ್ದಕ್ಕೆ ನೌಕರರಿಗೆ ಹಾಗೂ ಸಾರ್ವಜನಿಕರಿಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಸ್ಮಯೋರ್ ಶಾಲೆ, ದೇವಗಿರಿಯ ಸುಮಾರು 50 ವಿಧ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಪರಿಸರ ಉಳಿವಿಗೆ ನಮ್ಮ ಹಾಗೂ ಸಮಾಜದ ಜವಾಬ್ದಾರಿ, ಮರಗಳನ್ನು ಕಡಿಯುವುದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ನೆರೆದಿದ್ದ ಸಭೀಕರಿಗೆ ಮನವರಿಕೆ ಮಾಡಿಕೊಟ್ಟರು. ಅಲ್ಲದೇ ಹಸಿರು ಭಾರತ ಪರಿಕಲ್ಪನೆಯಡಿಯಲ್ಲಿ, ದಿನಾಂಕ 16.12.2021 ರಿಂದ 31.12.2021 ರವರೆಗೆ ದೇವಗಿರಿ, ಕಮ್ಮತ್ತೂರು, ಸುಬ್ಬರಾಯನಹಳ್ಳಿ ಹಾಗೂ ರಾಮಘಡ ಗ್ರಾಮಗಳ ಅಂಗನವಾಡಿ ಕೇಂದ್ರಗಳಲ್ಲಿ, ಶಾಲೆಗಳಲ್ಲಿ, ಸಮೂಹ ವೃತ್ತಿ ತರಭೇತಿ ಕೇಂದ್ರದಲ್ಲಿ, ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡ ವಿವಿಧ ಜಾಗೃತಿ ಕಾರ್ಯಕ್ರಮಗಳ ವಿಡಿಯೊಗಳನ್ನು ಪ್ರದರ್ಶಿಸಲಾಯಿತು. ಈ 15 ದಿನಗಳ ಕಾರ್ಯಕ್ರಮಗಳಲ್ಲಿ ಸರ್ಕಾರಿ ವೈದ್ಯಕೀಯ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿಗಳು, ನೌಕರರು ಅವರ ಕುಟುಂಬ ವರ್ಗದವರು, ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು, ಶಿಕ್ಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಆರೋಗ್ಯ ಶಿಕ್ಷಣ, ಪರಿಸರ ಸಂರಕ್ಷಣೆ ಸ್ವಚ್ಛತೆ ಬಗ್ಗೆ ವಿಸ್ತಾರವಾದ ಜಾಗೃತಿಯನ್ನು ನೀಡಲಾಯಿತು.

ಈ ಸಂಧರ್ಭದಲ್ಲಿ ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಶ್ರೀಧರ್ ಪರಮೇಶ್ವರ್ ಹೆಗ್ಡೆ ಪ್ರಧಾನ ವ್ಯವಸ್ಥಾಪಕರು, ವಂದನಾರ್ಪಣೆಯನ್ನು ವಿ. ಜಯಪ್ರಕಾಶ್, ಹಿರಿಯ ಪ್ರಧಾನ ವ್ಯವಸ್ಥಾಪಕರು ನಡೆಸಿಕೊಟ್ಟರು, ಈ ಕಾರ್ಯಕ್ರಮದಲ್ಲಿ ಸ್ಮಯೋರ್ ನೌಕರರು, ಯೂನಿಯನ್ ಮತ್ತು ಪಂಚಾಯತ್ ಪ್ರತಿನಿಧಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here