ಲೋಕಾಯುಕ್ತರ ಮುಂದೆ ಕಣ್ಣೀರಾದ ಅಂಧ ಯುವತಿ ದೃಷ್ಟಿ ಮರಳಿಸುವುದಾಗಿ ವಂಚನೆ

0
24

ದೃಷ್ಟಿ ಮರಳಿಸುವುದಾಗಿ ನಂಬಿಸಿ ದೃಷ್ಟಿ ವಿಕಲಚೇತನರೊಬ್ಬರಿಗೆ ವಂಚಿಸಿದ ಪ್ರಕರಣ, ಪಟ್ಟಣದ ತಹಸಿಲ್ ಕಚೇರಿಯಲ್ಲಿ ಲೋಕಾಯುಕ್ತರು ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಬಹಿರಂಗವಾಗಿದೆ.

ತಾಲೂಕಿನ ದೋಣಿಮಲೈನ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (ಎನ್‌ ಎಂ ಡಿ ಸಿ)ದಲ್ಲಿ ಸ್ವಾಗತಕಾರ್ತಿಯಾಗಿ. ಕೆಲಸ ಮಾಡುತ್ತಿರುವ ತಾರಾನಗರ ಮೂಲದ ನೇತ್ರಾವತಿ ಅವರೇ ಇಂತಹ ಮೋಸದ ಜಾಲಕ್ಕೆ ಬಲಿಯಾಗಿ 68,410 ರೂ. ಕಳೆದುಕೊಂಡವರು.

ಪದವೀಧರೆಯಾಗಿರುವ ಅವರು ಹುಟ್ಟಿದ ಮೂರು ವರ್ಷದಲ್ಲೇ ಉಭಯ ಕಣ್ಣುಗಳ ದೃಷ್ಟಿ ಕಳೆದುಕೊಂಡಿದ್ದಾರೆ. ದೇವರ ದಯೆಯಿಂದಾದರೂ ಕಣ್ಣುಗಳು ಕಾಣಬಹುದು ಎಂಬ ಆಸೆಯಿಂದ ಹಲವು ದೇವರಿಗೆ, ಪುಣ್ಯ ಕ್ಷೇತ್ರಗಳಿಗೆ ಹರಕೆ ದೃಷ್ಟಿ ವಿಕಲಚೇತನೆ ಹೊತ್ತು ತೆರಳಿದ್ದಾರೆ.

ನೇತ್ರಾವತಿ. 2022, ಆಕ್ಟೊಬರ್ 16 ರಂದು ಸವದತ್ತಿ ಯಲ್ಲಮ್ಮ ದೇವಿಯ ದರ್ಶನಕ್ಕಾಗಿ ನೇತ್ರಾವತಿ ಅವರು ತನ್ನ ಅಕ್ಕನ ಮಗ ಸಂದೀಪ ಅವರ ಜತೆಗೆ ತೆರಳಿದಾಗ ನೀಲೇಶ ಎಂಬ ವ್ಯಕ್ತಿ ಪರಿಚಯಾಗಿದ್ದಾನೆ. ”ನಮ್ಮ ಅಕ್ಕ ಹುಟ್ಟು ಕುರುಡುತನದಿಂದ ಬಳಲುತ್ತಿದ್ದರು. ಅವರಿಗೆ ಮುಧೋಳದಲ್ಲಿ ಔಷಧ ಕೊಡಿಸಿದ್ದರಿಂದ ಕಣ್ಣಿನ ದೃಷ್ಟಿ ಬಂದಿದೆ. ನೀವು ಅಲ್ಲಿಗೆ ಹೋಗಿ ಪೌಡರ್ ರೂಪದಲ್ಲಿ ನೀಡುವ ಔಷಧ ಪಡೆಯಿರಿ, ಔಷಧ ಮಾರುವವರು ನಮ್ಮ ಅಣ್ಣ ಲಕ್ಷ್ಮಣ ಪಾಟೀಲ್ ಎಂದ ನಿಲೇಶ ತನ್ನ ಅಣ್ಣ ಲಕ್ಷ್ಮಣ ಪಾಟೀಲ್ ನ ಮೊಬೈಲ್ ಸ್ಸಂಖ್ಯೆ2ನೀಡಿದ್ದಾನೆ

ಮೂರು ತಿಂಗಳ ಕಾಲ ಪೌಡರ್ ಅನ್ನು ಹಚ್ಚಿದಲ್ಲಿ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಎಂದು ವಂಚಕರು ನಂಬಿಸಿದ್ದಾರೆ. ತಿಂಗಳಾದರೂ ದೃಷ್ಟಿಯಲ್ಲಿ ಯಾವುದೇ ಬದಲಾವಣೆ ಕಾಣದ್ದರಿಂದ ನೇತ್ರಾವತಿ ಯವರ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ ವಾಪಸ್ ಲಕ್ಷ್ಮಣ ಪಾಟೀಲ್‌ ಮೊಬೈಲ್‌ಗೆ ಕರೆ ಮಾಡಿದರೆ ಹಾರಿಕೆಯ ಉತ್ತರ ನೀಡಿದ್ದಾನೆ.

ದಿನಗಳ ನಂತರ ಫೋನ್ ರಿಸೀವ್ ಮಾಡಿಲ್ಲ. ಇಂತಹ ವಂಚಕರಿಂದ ತನ್ನಂತೆ ಇತರ ದೃಷ್ಟಿ ತಲೆಗೆ ವಿಕಲಚೇತನರಿಗೆ ಮೋಸವಾಗಬಾರದು ಎಂಬ ನಿರ್ಧಾರದೊಂದಿಗೆ ನೇತ್ರಾವತಿ ಅವರು, ಮೂರು ಲೋಕಾಯುಕ್ತ ಎಸ್‌ಪಿ ಶಶಿಧರ್, ಸಿಪಿಐ ಮೊಹಮ್ಮದ್ ರಫೀಕ್ ಅವರ ಮುಂದೆ ತಮ್ಮ ನೇತ್ರಾವತಿಯವರ ಅಳಲು ತೋಡಿಕೊಂಡರು. ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಲೋಕಾಯುಕ್ತರು ಸೂಚಿಸಿದರು.

Box

68,410 ರೂ. ಪಾವತಿ:-
“ಬೇವು, ತುಳಸಿ ಎಲೆಗಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಕೊಬ್ಬರಿ ಎಣ್ಣೆ ಮಿಶ್ರಣ ಮಾಡಿಕೊಂಡು ಮುಧೋಳಕ್ಕೆ ಬನ್ನಿ ಔಷಧ ನೀಡುತ್ತೇವೆ,” ಎಂದು ವಂಚಕ, ನೇತ್ರಾವತಿ ಹಾಗೂ ಸಂದೀಪ ಅವರನ್ನು ಆಹ್ವಾನಿಸಿದ್ದಾನೆ. ಈ ವಂಚಕನ ಮಾತು ನಂಬಿದ ನೇತ್ರಾವತಿಯವರ ತಂದೆ ಹುಲುಗಪ್ಪ, ತಾಯಿ ಮಂಗಳಮ್ಮ, ಅಕ್ಕನ ಮಗ ಸಂದೀಪ ಅವರು ಬಾಡಿಗೆ ವಾಹನದಲ್ಲಿ ಮುಧೋಳಕ್ಕೆ ತೆರಳಿ ಲಕ್ಷ್ಮಣ ಪಾಟೀಲ್‌ಗೆ ಗೂಗಲ್ ಪೇ ಮೂಲಕ 68,410 ರೂ. ಪಾವತಿಸಿ, ಪೌಡರ್ ಪಡೆದಿದ್ದಾರೆ.

LEAVE A REPLY

Please enter your comment!
Please enter your name here