ಥೈರಾಯ್ಡ್‌ ಗ್ರಂಥಿಯ ಸಮರ್ಪಕ ಆರೋಗ್ಯಕ್ಕಾಗಿ ಅಯೋಡಿನ್ ಯುಕ್ತ ಉಪ್ಪುನ್ನೆ ಬಳಸಿರಿ; ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
165

ತಾಲೂಕಿನ ಕುರೇಕುಪ್ಪ ಪುರಸಭೆ ವ್ಯಾಪ್ತಿಯ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ 16 ನೇ ವಾರ್ಡ್‌ನಲ್ಲಿ “ವಿಶ್ವ ಅಯೋಡಿನ್ ಕೊರತೆಯ ನ್ಯೂನತೆ ನಿಯಂತ್ರಣ ದಿನ ಮತ್ತು ಸಪ್ತಾಹ” ಕುರಿತು ಗುಂಪುಸಭೆಗಳ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಮನುಷ್ಯನ ಪರಿಪೂರ್ಣ ಆರೋಗ್ಯಕ್ಕೆ ಪ್ರೋಟೀನ್, ವಿಟಮಿನ್ ಗಳ ಜೊತೆಗೆ ಖನಿಜಾಂಶಗಳು ಅವಶ್ಯಕತೆ ಇದೆ, ಫಾಸ್ಪರಸ್, ಮೆಗ್ನೀಷಿಯಂ, ಪೊಟಾಷಿಯಂ, ಐರನ್, ಕ್ಯಾಲ್ಸಿಯಂ ನಂತಹ ಹಲವು ಖನಿಜಾಂಶಗಳು ದೇಹಕ್ಕೆ ಬೇಕಾಗಿದ್ದು, ಅದರಲ್ಲಿ ಅಯೋಡಿನ್ ಎನ್ನುವ ಅತೀ ಸೂಕ್ಷ್ಮ ಖನಿಜಾಂಶ ಎಲ್ಲಾ ವಯಸ್ಸಿನವರಿಗೂ ಬಹಳ ಅವಶ್ಯಕತೆ ಇದೆ, ಅಯೋಡಿನ್ ಕೊರತೆಯಿಂದ ಹಲವು ನ್ಯೂನತೆಗಳು ದೇಹದಲ್ಲಿ ಉಂಟಾಗುವವು, ಬುದ್ದಿ ಮಾಂದ್ಯತೆ, ನೆನಪಿನ ಶಕ್ತಿ ಕುಂಠಿತ, ಕಿವುಡುತನ, ಮೂಗತನ, ಕುಬ್ಜ ಬೆಳವಣಿಗೆ, ನಡಿಗೆಯಲ್ಲಿ ದೋಷಗಳು, ಮಹಿಳೆಯರಲ್ಲಿ ಪದೇ ಪದೇ ಗರ್ಭಪಾತವಾಗುವುದು, ಹೆರಿಗೆಯಲ್ಲಿ ಸತ್ತು ಹುಟ್ಟುವ ಮಕ್ಕಳು, ಸಂತಾನೋತ್ಪತ್ತಿ ತೊಂದರೆಗಳು ಹಾಗೂ ಗಳಗಂಡ ಕಾಯಿಲೆಗಳು ಉಂಟಾಗುವುದು, ಅದಕ್ಕಾಗಿ ಸರಿಯಾದ ಪ್ರಮಾಣದಲ್ಲಿ ಅಯೋಡಿನ್ ಸೇವನೆ ಮುಖ್ಯವಾಗಿದ್ದು, ದೇಹಕ್ಕೆ ಬೇಕಾಗುವಷ್ಟು ಅಯೋಡಿನ್‌ನ್ನು ಉಪ್ಪಿನಲ್ಲಿ ಸೇರಿಸಿ ಸಾರವರ್ಧಕ ಮಾಡಲ್ಪಟ್ಟಿರುತ್ತದೆ, ನಾವು ಬಳಸುವ ಉಪ್ಪು ಅಯೋಡಿನ್ ಅಂಶ ಇದೆಯೋ ಇಲ್ಲವೋ ಎಂಬುದನ್ನು ಅಂಗಡಿಯಿಂದ ತರುವಾಗ ಸೂರ್ಯ ಮಾರ್ಕ್ ಇರುವುದನ್ನು ಗಮನಿಸಿ ತರಬೇಕು,

ಹಾಗೆ ತಂದ ಉಪ್ಪಿನಲ್ಲಿ ಅಯೋಡಿನ್ ಅಂಶ ನಷ್ಟವಾಗದ ರೀತಿಯಲ್ಲಿ ಬಳಸಬೇಕು, ಡಬ್ಬಿಯಲ್ಲಿಟ್ಟು ಮುಚ್ಚಳದಿಂದ ಮುಚ್ಚಿಡಬೇಕು, ಅಡುಗೆ ಬೇಯಿಸುವಾಗ ಉಪ್ಪನ್ನು ಹಾಕಬಾರದು, ಊಟ ಮಾಡುವಾಗ ಬಳಸುವುದರಿಂದ ಅಯೋಡಿನ್ ಅಂಶ ನಷ್ಟ ವಾಗುವುದಿಲ್ಲ, ಮತ್ತು ಅಯೋಡಿನ್ ಅಂಶ ಹೇರಳವಾಗಿ ದೊರೆಯುವ ಕ್ಯಾರೆಟ್, ಹಸಿರು ಸೊಪ್ಪುಗಳು, ಮೊಟ್ಟೆ, ಸಮುದ್ರದ ಮೀನು, ಸೀಗಡಿಗಳನ್ನು ಬಳಸಬೇಕು ಎಂದು ತಿಳಿಸಿದರು,

ಥೈರಾಯ್ಡ್ ಗ್ರಂಥಿಯು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅಯೋಡಿನ್ ಅವಶ್ಯಕತೆ ಇರುತ್ತದೆ, ಕೊರತೆ ಉಂಟಾದಾಗ ಗಂಟಲಲ್ಲಿ ಊತ ಕಾಣಿಸಿ ಕೊಳ್ಳುತ್ತದೆ, ಇಂತಹ ಗಡ್ಡೆಗಳನ್ನು ಅದೃಷ್ಟದ ಗಡ್ಡೆ ಎಂದು ಕೆಲವರು ನಿರ್ಲಕ್ಷ್ಯ ಮಾಡುವರು, ಇದು ಅದೃಷ್ಟದ ಗಡ್ಡೆ ಅಲ್ಲ ಗಳಗಂಡ ಕಾಯಿಲೆಯಾಗಿರುತ್ತದೆ, ಅಂತವರು ಆಸ್ಪತ್ರೆಗೆ ಬಂದು ಥೈರಾಯ್ಡ್ ಟೆಸ್ಟ್ ಮಾಡಿಸಬೇಕು, ಮೂಡ ನಂಬಿಕೆಯನ್ನು ಬಿಡಬೇಕು, ಮತ್ತು ಕಾರ್ಯಕರ್ತೆಯರು ಮನೆ ಬೇಟಿಗೆ ಬಂದಾಗ ಉಪ್ಪಿನ ಪರೀಕ್ಷೆ ಮಾಡಿ ಅಯೋಡಿನ್ ಪ್ರಮಾಣ ಎಷ್ಟು ಇದೆ ಎಂಬುದನ್ನು ಖಾತ್ರಿ ಮಾಡುವರು, ಅಯೋಡಿನ್ ಅಂಶ ಇರದಿದ್ದರೆ ಅಂತಹ ಉಪ್ಪನ್ನು ಬಳಸಬಾರದು ಎಂದು ತಿಳಿಸಿದರು,

ಈ ಕಾರ್ಯಕ್ರಮದಲ್ಲಿ ಅಯೋಡಿನ್ ಟೆಸ್ಟ್ ಮಾಡುವ,ಮತ್ತು ಸ್ವಚ್ಛ ಕೈತೊಳೆಯುವ ಬಗ್ಗೆ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು, ಇದೇ ಕಾರ್ಯಕ್ರಮದಲ್ಲಿ ಅಂಧರ ಬಾಳು ಬೆಳಗಲು ಮೂರು ಜನ ಆಶಾ ಕಾರ್ಯಕರ್ತೆಯರಾದ ಪದ್ಮಾ,ಮಂಜುಳಾ, ತೇಜಮ್ಮ,ಮತ್ತು ರೀಡ್ಸ್‌ನ ಅಂಜಿನಪ್ಪ,ಚೆನ್ನಕೇಶವ ಅವರು ಸೇರಿ ಒಟ್ಟು ಐದು ಜನರು ನೇತ್ರದಾನ ಮಾಡಿದರು,

ಈ ಕಾರ್ಯಕ್ರಮದಲ್ಲಿ ಮುಖಂಡರಾದ ತಿಪ್ಪೇಸ್ವಾಮಿ, ಹೊನ್ನೂರ್‌ಸಾಬ್,ರಿಜ್ವಾನ್, ಮೈಮುನ್,ಸಾವಿತ್ರಿ,ಜ್ಯೋತಿ,ಸಲ್ಮಾ,ರಾಧ,ಮಾಬುನ್ನಿ, ಸಿಲಾರ್‌ಭಿ,ಭವಾನಿ,ಪ್ರೇಮಾ, ಆಶಾ ಫೆಸಿಲಿಟೇಟರ್ ಬಸಮ್ಮ,ಶ್ರೀದೇವಿ, ಆಶಾ,ವಿಜಯಶಾಂತಿ,ಹುಲಿಗೆಮ್ಮ, ವೆಂಕಟಲಕ್ಷ್ಮಿ, ಕಾವೇರಿ,ರಾಜೇಶ್ವರಿ, ರೇಖಾ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here