ಎಂದೂ ಬಾಡದ ದೇವಕುಸುಮ ವಾಲ್ಮೀಕಿ ಋಷಿ; ತಾಪಂ ಇಓ ಷಡಕ್ಷರಯ್ಯ

0
99

ಸಂಡೂರು:ಅ:29: ವಾಲ್ಮೀಕಿ ಮಹರ್ಷಿಗಳು
ಮಹಾಕಾವ್ಯವನ್ನಷ್ಟೇ ಬರೆಯಲಿಲ್ಲ. ಅವರೇ ಒಂದು ಮಹಾಕಾವ್ಯವಾಗಿ ಈ ನೆಲದ ಸಂಸ್ಕೃತಿಯಲ್ಲಿ ನೆಲೆಸಿದ್ದಾರೆ. ಅದರಲ್ಲೂ ವಿಶೇಷವಾಗಿ ಶೂದ್ರ ವರ್ಗದಲ್ಲಿ ಅರಳಿದ ಮಹಾ ಕಾವ್ಯ ಪುಷ್ಪವಾಗಿ ಭುವಿಯಗಲಕೂ ಬಾನೆತ್ತರಕೂ ಘಮಘಮಿಸುತ್ತಿದ್ದಾರೆ. ಎಂದೂ ಬಾಡದ ದೇವಕುಸುಮ ವಾಲ್ಮೀಕಿ ಋಷಿ,ರಾಮಾಯಣದ ಮೂಲಕ ಬಾರತವನ್ನು ತಮ್ಮ ಬದುಕಿನ ಮೂಲಕ ದಮನಿತರನ್ನು ಬೆಳಗಿದ ಮಹಾಮುನಿ
ಬೇಡನಾಗಿ ಹುಟ್ಟಿದರೂ, ದರೋಡೆಕೋರನಾದರೂ, ಪರಿವರ್ತನೆಯ ಕುಲುಮೆಯಲ್ಲಿ ಉರಿದು ಜ್ಞಾನದಗ್ನಿಯಲ್ಲಿ ಮಿಂದೆದ್ದು ತಮ್ಮ ಜ್ಞಾನಾಸ್ತ್ರದಿಂದ ಜಗತ್ತನ್ನೇ ಗೆದ್ದು ಮಹರ್ಷಿಯ ಪಟ್ಟಕ್ಕೇರಿ ರಾಮಾಯಣ ಮಹಾಕಾವ್ಯದ ಮೂಲಕ ಆದಿಕವಿಯಾಗಿ ಇಡೀ ಜಗತ್ತಿಗೆ ಸುಜ್ಞಾನದ ಮಹಾ ಬೆಳಕು ಸುರಿದ ಮಹಾಮುನಿ ವಾಲ್ಮೀಕಿ ಎಂದರೆ ಯಾವತ್ತೂ ಅದು ಕೇವಲ ಒಂದು ಹೆಸರೆನಿಸದೆ ಭರತ ಭೂಮಿಯ ಸುಸಂಸ್ಕೃತಿಯ ಭವ್ಯ ಸಂಪತ್ತೆನಿಸುತ್ತದೆ. ವಾಲ್ಮೀಕಿ ಮಹಾಕಾವ್ಯವನ್ನಷ್ಟೇ ಬರೆಯಲಿಲ್ಲ. ಅವರೇ ಒಂದು ಮಹಾಕಾವ್ಯವಾಗಿ ಈ ನೆಲದ ಸಂಸ್ಕೃತಿಯಲ್ಲಿ ನೆಲೆಸಿದ್ದಾರೆ. ಒಬ್ಬ ಬೇಡ ಮಹರ್ಷಿಯಾಗುವುದು ಸಾಮಾನ್ಯ ಮಾತಲ್ಲ ಮಹರ್ಷಿಯಾಗಲಿಕ್ಕೆ ಗುರುವಿನ ಪಾತ್ರ ಬಹಳ ಮುಖ್ಯ ಅಂತೆಯೇ ಒಬ್ಬ ಬೇಡ ನಾರದ ಮಹರ್ಷಿ ಗುರುಗಳ ವಾಕ್ಯವನ್ನು ಪರಿಪಾಲನೆ ಮಾಡಿ ತಪ್ಪಸ್ಸಿನ ಸಿದ್ಧಿಯಿಂದ ಸಾಧನೆ ಮಾಡಿ ಉತ್ತುಂಗ ಸ್ಥಾನಕ್ಕೇರಿ ಮಹರ್ಷಿ ಪದವಿ ಸಂಪಾದಿಸಿದರು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಷಡಕ್ಷರಯ್ಯ ಹೇಳಿದರು.

ಕರ್ನಾಟಕ ಸರ್ಕಾರ, ತಾಲೂಕಾಡಳಿತ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಡೂರು ಇವರ ಸಹಯೋಗದೊಂದಿಗೆ 2023 ವಾಲ್ಮೀಕಿ ಜಯಂತ್ಯೋತ್ಸವದ ಉದ್ಘಾಟನಾ ಸಮಾರಂಭದ ವಾಲ್ಮೀಕಿ ಭವನದಲ್ಲಿ ಭಾಗವಹಿಸಿ ಮಾತನಾಡಿದರು.

ಸಂಡೂರು ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ ಜನಾಂಗದ ಇಲ್ಲಿ ಎಲ್ಲಾ ಸಮಾಜದವರೊಡಗೂಡಿ ಸುಂದರವಾದ ಬದುಕು ಕಟ್ಟಿಕೊಂಡಿದ್ದಾರೆ. ನಂಜುಂಡಪ್ಪ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ಕ್ಷೇತ್ರವಾಗಲು ಕಾರಣ ಶಿಕ್ಷಣ ಎಂದು ಹೇಳಿದರು.

ಶಾಸಕರಾದ ಈ, ತುಕಾರಾಮ್ ಮಾತನಾಡಿ,ವಿಶ್ವ ಮನುಕುಲಕ್ಕೆ ಒಳ್ಳೆ ಸಂದೇಶವನ್ನು ನೀಡಿದಂತಹ ಮಾಹಾನ್ ಗ್ರಂಥ ರಾಮಾಯಣವನ್ನು ರಚಿಸಿದವರು ಶ್ರೀ ವಾಲ್ಮೀಕಿ ಮಹರ್ಷಿ, ಜಯಂತಿಗಳಲ್ಲಿ ಚಿಂತನ ಮಂಥನ ಮುಖ್ಯ. ವಾಲ್ಮೀಕಿ ರಾಮಾಯಣ ತ್ರೇತಾಯುಗದಲ್ಲಿ ಬರುತ್ತದೆ. ರಾಮರಾಜ್ಯದ ಪರಿಕಲ್ಪನೆಯನ್ನು ಸರ್ವರು ಅನುಸರಿಸಬೇಕಾಗಿದೆ ಎಂದು ಸಲಹೆ ನೀಡಿದರು.

ತಹಶೀಲ್ದಾರ್ ಅನಿಲ್ ಕುಮಾರ್, ಮಾತನಾಡಿ ಪ್ರಪಂಚದಲ್ಲಿಯೇ ಅತ್ಯಂತ ಮೌಲ್ಯಯುತ ಗ್ರಂಥವನ್ನು ರಚಿಸಿದವರು ವಾಲ್ಮೀಕಿ, ವಾಲ್ಮೀಕಿ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ ಎಲ್ಲಾ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.ಹಾಗೇ ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿ ಬಳ್ಳಾರಿ ಪ್ರಾಧ್ಯಾಪಕ ಗೋಪಾಲ ನಾಯಕ, ಮಾತನಾಡಿ ರಾಮನನ್ನು, ರಾವಣನನ್ನು ಸ್ವೀಕರಿಸಿದ ಜನ ವಾಲ್ಮೀಕಿಯನ್ನು ಸ್ವೀಕರಿಸಲಿಲ್ಲ, ಬೇಡ ಕಣ್ಣು ಕೊಟ್ಟವನು ಕಣ್ಣು ಕೀಳುವವನಲ್ಲ ಎಂದರು. ಸಾನ್ನಿಧ್ಯ ವಹಿಸಿದ್ದ ಪ್ರಭು ಸ್ವಾಮೀಜಿ, ತಾಲೂಕಾಧ್ಯಕ್ಷ ಜಯಣ್ಣ ನವಲುಟಿ, ಮಾತನಾಡಿದರು

ವಿಶೇಷವಾಗಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮವನ್ನು ಎಲ್ಲರ ನಿರೀಕ್ಷೆಗೂ ಮೀರಿ ತಾಲೂಕಿನ ಎಲ್ಲಾ ಸಮಾಜದ ಮುಖಂಡರನ್ನು ಗಣನೆಗೆ ತೆಗೆದುಕೊಂಡು, ಆಹ್ವಾನಿಸಿ ಇದು ಸರ್ವ ಜನಾಂಗದ ಸಹಬಾಳ್ವೆಯ ವೇದಿಕೆ ಅಂತ ಗೌರವವನ್ನು ತಂದುಕೊಟ್ಟ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ರವಿಕುಮಾರ್ ಹಾಗೂ ಅವರ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಸಲ್ಲುತ್ತದೆ

ಈ ಸಂಧರ್ಭದಲ್ಲಿ ನಿರೂಪಣೆಯನ್ನು ಶ್ರೀಧರ್ ಮೂರ್ತಿ,
ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಸ್ವಾಗತಿಸಿದರು. ಸಮಾಜದ ಮುಖಂಡರಾದ ಜೆ.ಬಿ.ಟಿ. ಬಸವರಾಜ, ವಾಸಣ್ಣ ತಿಪ್ಪಯ್ಯ, ತುಮುಟಿ ಲಕ್ಷ್ಮಣ, ಹಾಲು ಮತ ಸಮಾಜದ ನಿವೃತ್ತ ಶಿಕ್ಷಕ ಬಸವರಾಜ ಮಸುತಿ,ಆಪ್ತ ಸಹಾಯಕ ಹಿರೇಮಠ್, ರೋಷನ್ ಜಮೀರ್, ಹಸೆನ್‌ ಸಾಬ್, ನೇತ್ರಾವತಿ ವಿ.ಕೆ., ಎಲ್.ಎಚ್‌. ಶಿವಕುಮಾರ ಕೆ.ವಿ. ಸುರೇಶ್‌, ಜಯರಾಮ್,ಅಂಬರೀಶ್, ಮಲ್ಲಿಕಾರ್ಜುನ, ಶಿಗ್ಗಾವಿ, ಡಾ. ಕಿರಣ್ ಕುಮಾರ್, ಸುರೇಶ್, ಸಿದ್ದೇಶ್, ನಿವೃತ್ತ ಶಿಕ್ಷಕ ಜಿ. ಸೋಮಪ್ಪ ಇದ್ದರು. ನಂತರ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.

LEAVE A REPLY

Please enter your comment!
Please enter your name here