“ಕನ್ನಡದ ನೆಲಜಲ ಮಹಾ ಇತಿಹಾಸವನ್ನೇ ಸಾರುತ್ತಿವೆ: ತಹಶೀಲ್ದಾರ್ ವಿ ಕಾರ್ತಿಕ್ “

0
75

ಕೊಟ್ಟೂರು :ಕನ್ನಡ ರಾಜ್ಯೋತ್ಸವ ಸಮಾರಂಭವು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಎಪಿಎಂಸಿ ಆವರಣದಲ್ಲಿ ಶಿಕ್ಷಣ ಇಲಾಖೆ, ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಮತ್ತು ಪಟ್ಟಣ ಪಂಚಾಯ್ತಿ ವತಿಯಿಂದ ಬುಧವಾರ ರಂದು ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಉಸಿರಾಯಿತು ಕನ್ನಡ ಘೋಷಣದೊಂದಿಗೆ 50ನೇ ಕನ್ನಡ ಸಂಭ್ರಮ ಪಟ್ಟಣದ ಶ್ರೀ ಗುರುಬಸವೇಶ್ವರ ದೇವಸ್ಥಾನದಿಂದ ಪಟ್ಟಣದ ಎಲ್ಲಾ ಶಾಲೆಯ ಮಕ್ಕಳು ಹಾಗೂ ಎಲ್ಲಾ ಅಧಿಕಾರಿ ವರ್ಗದವರು ಸಕಲ ವಾದ್ಯಗಳೊಂದಿಗೆ ತಾಯಿ ಭುವನೇಶ್ವರಿ ಫೋಟೋವನ್ನು ಟ್ರ್ಯಾಕ್ಟರ್ ಮೂಲಕ ಕೊಟ್ಟೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ನಂತರ ಎಪಿಎಂಸಿ ಅವರಣದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪವನ್ನು ಹಾಕುವುದರ ಮೂಲಕ ತಾಶಿಲ್ದಾರರಾದ ವಿ ಕಾರ್ತಿಕ್ ರವರು ಕಾರ್ಯಕ್ರಮವನ್ನು ಚಾಲನೆ ನೀಡಿದರು. ಗುರು ಬಸವರಾಜ್ ವೇದಿಕೆ ಮೇಲಿರುವ ಗಣ್ಯರನ್ನು ಸ್ವಾಗತಿಸಿದರು .

ವಿದ್ಯಾರ್ಥಿಗಳಿಂದ ಕನ್ನಡದ ರಾಜ್ಯೋತ್ಸವದ  ಬಗ್ಗೆ ವಿಶೇಷವಾಗಿ ಕನ್ನಡದ 5 ಗೀತೆಗಳನ್ನು ತುಂಬಾ ಸೊಗಸಾಗಿ ಹಾಡಲಾಗಿತ್ತು.

ನಂತರ ಮಾನ್ಯ ದಂಡಾಧಿಕಾರಿಗಳಾದ ವಿ ಕಾರ್ತಿಕ್ ಅವರು ಕನ್ನಡ ರಾಜ್ಯೋತ್ಸವದ ಐವತ್ತನೇ ಸಂಭ್ರಮದ ಆಚರಣೆಯ ಇಂದಿನ ದಿನ ನಮಗೆಲ್ಲರಿಗೂ ಸಂಭ್ರಮದ ಆನಂದ, ಅನಾದಿಕಾಲದಿಂದಲೂ ಕನ್ನಡದ ಉಳಿವಿಗಾಗಿ ಸಾಕಷ್ಟು ರಾಜಮನೆತನಗಳ, ಸಂಘಟನೆಗಳ ಮತ್ತು ಕನ್ನಡದ ಅಭಿಮಾನಿಗಳ ನಿರಂತರ ಹೋರಾಟದ ಫಲವಾಗಿ ಇಂದು ಈ ಆಚರಣೆ ನಿಜಕ್ಕೂ ಅರ್ಥಪೂರ್ಣ, ಕನ್ನಡ ರಾಜ್ಯ ಎಲ್ಲರನ್ನೂ ಕೈಬೀಸಿ ಕರೆಯುವ ಮತ್ತು ಎಲ್ಲಾ ರಾಜ್ಯ ದೇಶದವರನ್ನ ಕರುಣೆಯಿಂದ ಸಲಹುತ್ತಿರುವ ರಾಜ್ಯ, ಕನ್ನಡದ ನೆಲಜಲ ಇಲ್ಲಿನ ಆದರಣೀಯ ಸ್ಥಳಗಳು ಮಹಾ ಇತಿಹಾಸವನ್ನೇ ಸಾರುತ್ತಿವೆ. ಮತ್ತು ಇಲ್ಲಿ ಸಾಹಿತ್ಯ ಸಾಂಸ್ಕೃತಿಕ ಸಂಗೀತ ನೃತ್ಯ ಜಾನಪದ,ಕಲಾ ರಂಗಗಳೆಲ್ಲವೂ ದೇಶದಲ್ಲಿ ಹಾಗೂ ಇಡೀ ವಿಶ್ವದಲ್ಲಿ ರಾಜ್ಯವನ್ನು ಮೇರು ಪರ್ವತಕ್ಕೆ ಕೊಂಡೊಯ್ಯುತ್ತಿವೆ.ಎಂದು ಮಾತನಾಡಿದರು.

ತದನಂತರ ಶ್ರೀ ಭುವನೇಶ್ವರಿ ದೇವಿ ಕುರಿತು ಎಲ್ಲಾ ಶಾಲಾ ಮಕ್ಕಳಿಂದ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.ಹಾಗೂ ವಿವಿಧ ರಂಗದಲ್ಲಿ  ಸಾಧನೆಗೈದವರಿಗೆ  ಶ್ರೀ ಶಿವರಾಜ್ ಕನ್ನಡಿಗ ಮಾಧ್ಯಮ ರಂಗ  ,ಶ್ರೀಮತಿ ಪದ್ಮ ಜಾಗಟಗೇರೆ ಸಾಹಿತ್ಯ, ಶ್ರೀ ನಾಗೇಶ್ ಪೂಜಾರ್ ರಂಗಭೂಮಿ, ಶ್ರೀ ಮೂಲಿಮನಿ ಕೊಟ್ರೇಶ್ ಸಂಗೀತ ಕ್ಷೇತ್ರ ,ಶ್ರೀ ಸತೀಶ್ ನಿವೃತ್ತಿ ಪ್ರಾಧ್ಯಾಪಕರು ಸಮಾಜ ಸೇವೆ,ಇವರುಗಳಿಗೆ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಮತ್ತು ಪಟ್ಟಣ ಪಂಚಾಯತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿಜಯಕುಮಾರ್ ಸಹಾಯಕ ನಿರ್ದೇಶಕರು ತಾಲೂಕು ಪಂಚಾಯಿತಿ ಇಓ ವೈ ರವಿ ಕುಮಾರ್,ಕೊಟ್ಟೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ ನಸರುಲ್ಲಾ ಅವರು, ಎಪಿಎಂಸಿ ಕಾರ್ಯದರ್ಶಿ ವೀರಣ್ಣ , ಕನ್ನಡ ಸಾಹಿತ್ಯ ತಾಲೂಕು ಅಧ್ಯಕ್ಷ ದೇವರ ಮನಿ ಕೊಟ್ರೇಶ್, ಕೆಂಗರಾಜ್ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಕೆ ಕೊಟ್ರೇಶ್ ಅಧ್ಯಕ್ಷರು ಕಾರ್ಯನಿರತ ಪತ್ರಕರ್ತರ  ಸಂಘ, ಶಶಿಧರ್ ಮೈದೂರ್ ಚೀಪ್ ಕಮಿಟಿ ಸದಸ್ಯ,ಕೊಟ್ಟೂರು ಅಜ್ಜಪ್ಪ ಎಲ್ಲಾ  ನಿಂಗಪ್ಪ ಇಸಿಒ, ಮತ್ತುಸಿ ಆರ್ ಪಿ  ಗಳು ಹಾಗೂ ತಾಲೂಕಿನ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಾರ್ವಜನಿಕರು ಸೇರಿದ್ದರು.

LEAVE A REPLY

Please enter your comment!
Please enter your name here