ಕೊಟ್ಟೂರು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಿಂತ : ಇಲ್ಲಿ ಗ್ರೇಡ್-೧ ಕಾರ್ಯದರ್ಶಿಯವರೇ ಮೇಲುಸ್ತುವಾರಿ..!

0
273

ಕೊಟ್ಟೂರು ತಾಲ್ಲೂಕು ಪಂಚಾಯಿತಿ ಹೆಸರಿಗೆ ಮಾತ್ರ ತಾಲ್ಲೂಕು ಪಂಚಾಯಿತಿಯಾಗಿದೆ. ಆದರೆ ಇಲ್ಲಿಗೆ ಇದುವರೆಗೂ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಗಳೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊಟ್ಟೂರು ತಾಲ್ಲೂಕು ಪಂಚಾಯಿತಿಗೆ ಪ್ರಸ್ತುತ ವರ್ಷದವರೆಗೂ ಒಬ್ಬ ಖಾಯಂ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ನಿಯೋಜನೆ ಮಾಡದೇ ಇರುವುದು ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತದೆ.

ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಭಾರ ಅಧಿಕಾರ ವಹಿಸಿಕೊಂಡಿರುವುದರಿಂದ ಅಭಿವೃದ್ಧಿಯಲ್ಲಿ ಕಾರ್ಯಗತವಿಲ್ಲ . ರೈತರ ಕಾರ್ಯಗಳಲ್ಲಿ ಅನಗತ್ಯವಾಗಿ ಅಲೆದಾಡುವ ಪ್ರಸ್ತುತಿ ಒದಗಿದೆ.

ನಿಗದಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ಯಶಸ್ವಿಗೊಳಿಸುವಲ್ಲಿ ವಿಫಲವಾಗುತ್ತಿರುವುದರಿಂದ ಇದರಿಂದ, ಗ್ರಾಮೀಣ  ಪ್ರದೇಶದ ರೈತ ಜನರಿಗೆ ಅಲೆದಾಡುವ ಪರಿಸ್ಥಿತಿ ಬಂದಿದೆ.

ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವೇತನ ಪಡೆಯುವುದಕ್ಕೂ ಸಹ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ವೇತನ ಪಡೆಯಲು ಸಹ ಇನಾಮು ಕೊಡಲೇಬೇಕಾಗಿದೆ ಅಂತ..! ಕೊಡದೇ ಇದ್ದರೆ ಸಂಬಳವಾಗುವುದೇ ಇಲ್ಲ ಮತ್ತು ಕೊಡಲಿಕ್ಕೆ ಆಗದಿರುವ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳ ಹತ್ತಿರ ದೂರು ನೀಡುವಂತಹ ವಾತಾವರಣ ನಿರ್ಮಾಣವಾಗಿದೆ..!

ಗ್ರಾಮ ಪಂಚಾಯಿತಿಗಳ ಮೇಲುಸ್ತುವಾರಿ ನೋಡಿಕೊಳ್ಳಬೇಕಾಗಿರುವ ತಾಲ್ಲೂಕು ಪಂಚಾಯಿತಿ ಹೀಗೆ ಇದ್ದೂ ಇಲ್ಲದಂತಾಗಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕು ಪಂಚಾಯಿತಿಯಲ್ಲಿ ಗ್ರೇಡ್-೧ ಕಾರ್ಯದರ್ಶಿಗಳಾಗಿರುವ ರೂಪ ಅವರೇ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಅಂತೆ..! ಹೆಸರಿಗೆ ಮಾತ್ರ ಕಾರ್ಯನಿರ್ವಾಹಕ ಅಧಿಕಾರಿಗಳಿದ್ದು, ಎಲ್ಲ ಮೇಲುಸ್ತುವಾರಿಯು ಸಹ ಗ್ರೇಡ್-೧ ಕಾರ್ಯದರ್ಶಿಯಾಗಿರುವ ರೂಪ ಅವರು ಪ್ರತಿಯೊಂದು ಅಧಿಕಾರಿಗೆ ಮೇಲುಸ್ತುವರಿಯಾಗಿ ತಮ್ಮ ಆಡಳಿತ ಮಾಡುತ್ತಿದ್ದು ಮತ್ತು ಇವರಿಗೆ ಸಹಪಾಠಿ ಯಾಗಿ ಡಾಟಾ ಎಂಟ್ರಿ ಆಪರೇಟರ್ ಮೋಹನ್ ಎಂಬುವರು ಸಹಕಾರಿಯಾಗಿ ದರ್ಬಾರ್ ಮಾಡುತ್ತಿದ್ದಾರೆ. ಎಂದು ಆರೋಪಗಳು ಕೇಳಿ ಬಂದಿದೆ.!
ಎಂದು ಇವರಗಳ ವಿರುದ್ಧ ಸಿ.ಪಿ.ಐ.(ಎಂ&ಎಲ್) ಮಲ್ಲಿಕಾರ್ಜುನ  ದೂರಿದರು. ಕ್ಷೇತ್ರದ ಶಾಸಕರು, ಸರ್ಕಾರ ಕೂಡಲೇ ಕೊಟ್ಟೂರಿಗೆ ಖಾಯಂ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಿಸಬೇಕೆಂದು ಮತ್ತು ರೂಪ ಮತ್ತು ಮೋಹನ್ ಇವರುಗಳ ಮೇಲೆ ಸೂಕ್ತ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

■ಕ್ಷೇತ್ರದ ಶಾಸಕರು ಇಂತಹ ಅಧಿಕಾರಿಗಳ  ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಗಳು ಪ್ರತಿಭಟನೆ ಮಾಡುವ ಮೂಲಕ ಉತ್ತರ ನೀಡಬೇಕಾಗುತ್ತದೆ ಎಂದು ಶಾಸಕರಿಗೆ ಸಿಪಿಐಎಂಎಲ್ ಪಕ್ಷ ಬಾಲಗಂಗಾಧರ್ ಕಾರ್ಯಕರ್ತರು  ಎಚ್ಚರಿಕೆ ನೀಡಿದರು.

■ಕೊಟ್ಟೂರು ತಾಲೂಕು ಪಂಚಾಯತ್ ಗ್ರೇಡ್ -1 ಕಾರ್ಯದರ್ಶಿ ರೂಪ ಅವರು ವಿರುದ್ಧ ಈ ಹಿಂದೆ  ನಕಲಿ ದಾಖಲೆ ಸೃಷ್ಟಿಸಿ ಬಡ್ತಿ ಪಡೆದಿರುವ ಬಗ್ಗೆ ಹಲವು ದೂರು ದಾಖಲಾಗಿದ್ದವು ಇವುಗಳನ್ನು ಪರಿಶೀಲಿಸುವಂತೆ ಒತ್ತಾಯಿಸುತ್ತಿದ್ದಾರೆ. ಪಿ ಚಂದ್ರಶೇಖರ್ ಆರ್‌ಟಿಐ ಕಾರ್ಯಕರ್ತರು.

LEAVE A REPLY

Please enter your comment!
Please enter your name here