ರಂಭಾಪುರಿ ಜಗದ್ಗುರುಗಳಿಂದ ಧರ್ಮಜಾಗೃತಿ ಕಾರ್ಯಕ್ರಮ

0
125

ವಿಜಯನಗರ:ಜೂನ್:07:- ಪಂಚಪೀಠಗಳಲ್ಲೊಂದಾದ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ವೀರಸೋಮೇಶ್ವರ ಜಗದ್ಗುರುಗಳಿಂದ ಪಟ್ಟಣದಲ್ಲಿ ಮಂಗಳವಾರ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮಜಾಗೃತಿ ಕಾರ್ಯಕ್ರಮ ನಡೆಯಿತು.

ಪಟ್ಟಣದ ಭಕ್ತಾದಿಗಳು ಜಗದ್ಗುರುಗಳವರ ಆಶೀರ್ವಾದ ಪಡೆದು ಸಂತಸ ವ್ಯಕ್ತಪಡಿಸಿದರು. ಇಷ್ಟಲಿಂಗ ಮಹಾಪೂಜೆ ಮನುಷ್ಯನ ಬದುಕಿನ ಅವಿಭಾಜ್ಯ ಅಂಗ, ಇಷ್ಟಲಿಂಗ ಪೂಜೆ ಮಾಡಿಕೊಳ್ಳುವುದರಿಂದ ಮಾನವ ತನ್ನ ಬದುಕಿನಲ್ಲಿ ಶಾಂತಿ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಭಕ್ತಾದಿಗಳು ಆಶಯ ವ್ಯಕ್ತಪಡಿಸಿದರು. ನಡೆದಾಡುವ ದೇವರು ಅಂತಾನೆ ಕರೆಯಿಸಿಕೊಳ್ಳುವ ಶ್ರೀಗಳು ದಣಿವರಿಯರಿಯದೆ ಲೋಕ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿ ಸಮಾಜದ ಎಲ್ಲ ಸ್ಥರದ ಭಕ್ತಜನಕ್ಕೆ ನಿರಂತರ ಭಕ್ತಿಯ ಪರಕಾಷ್ಟೆಯನ್ನು ತಲುಪಿಸಿ ಸರಿ ಮಾರ್ಗ ತೋರುತ್ತಿದ್ದಾರೆ. ಸಾವಿರಾರು ಜನರ ಸಮ್ಮುಖದಲ್ಲಿ ಶ್ರೀಗಳವರು ಆಶೀರ್ವಚನ ನೀಡಿದರು.

ಪಟ್ಟಣದ ಟಿ.ನೀಲಕಂಠಯ್ಯನವರ ಮನೆಯಿಂದ ಮುಖ್ಯರಸ್ತೆ ಮಾರ್ಗವಾಗಿ ಸಮಾಳ ವಾದ್ಯಗಳಿಂದ ಜಗದ್ಗುರುಗಳನ್ನು ಕಾರ್ಯಕ್ರಮದ ವೇದಿಕೆಗೆ ಕರೆತಂದರು. ಈ ಸಂದರ್ಭದಲ್ಲಿ ಕಣ್ಣುಕುಪ್ಪಿ ಕೊಟ್ರೇಶ, ಮೈದೂರು ವಿಶ್ವನಾಥ, ಸಂಗಮೇಶ್ವರ ಗುರುಶಾಂತಪ್ಪ, ಪ್ಯಾಟಿಗೌಡ್ರು ಕೊಟ್ರಬಸವನಗೌಡ, ಸಮಾಳ ವಾದ್ಯಗಾರರಾದ ಬಂದಾತರ ರೇವಣಸಿದ್ದಪ್ಪ, ಮತ್ತಿಹಳ್ಳಿ ಪ್ರಕಾಶ, ಬಂದಾತರ ಸಿದ್ದೇಶ ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here