ಯಶವಂತನಗರ ಉಪಕೇಂದ್ರ ಬಂಡ್ರಿ ಪ್ರಾಥಮಿಕ ಅರೋಗ್ಯ ಕೇಂದ್ರದಿಂದ ಕರೋನಾ ಲಸಿಕೆ ಅಭಿಯಾನ.

0
156

ಯಶವಂತನಗರ ಆರೋಗ್ಯ ಉಪಕೇಂದ್ರ ಸರ್ಕಾರಿ ಆಯುರ್ವೇದ ಕೇಂದ್ರದಲ್ಲಿ ಇಂದು 5-4-21 ರಂದು ಕೋವಿಡ್19 ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟನೆಮಾಡಿದ ಶ್ರೀ ಪರಮಪೂಜ್ಯ ಸಿದ್ದರಾಮೇಶ್ವರಸ್ವಾಮಿ ಮತ್ತು ಊರಿನ ಮುಖಂಡರಾದ ಛತ್ರಿಕಿ ಸತೀಶ್ ಮತ್ತು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಅಂಜಿನಪ್ಪ ಮತ್ತು ಪಿಡಿಒ ರೇವಣ್ಣ ಸಿದ್ದಪ್ಪ ಮತ್ತು ಗ್ರಾಮಪಂಚಾಯಿತಿ ಸದಸ್ಯರು ಅರೋಗ್ಯ ಇಲಾಖೆಯವರಾದ ಡಾ:ಚಂದ್ರಪ್ಪ ಡಾ:ಮನ್ಸೂರ್ ಅಲಿ ಆಯುಷ ಅರೋಗ್ಯ ವೈದ್ಯಾಧಿಕಾರಿಗಳಾದ
ಡಾ:ಎಮ್.ವಿರುಪಾಕ್ಷಪ್ಪ ನವರು ಉಪಸ್ಥಿತರಿದ್ದರು

ಶ್ರೀ ಗಂಗಾಧರಸ್ವಾಮಿ ಲಸಿಕೆಯ ಬಗ್ಗೆ ತಮ್ಮನ್ನು ಉದಾರಣೆ ಕೊಡುವ ಮೂಲಕ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಹೇಳಿದರು.
ಊರಿನ ಮುಖಂಡರಾದ ಛತ್ರಿಕಿ ಸತೀಶ್ ಅವರು ಕೂಡ ಗ್ರಾಮದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆಯನ್ನು ಪಡೆಯಬೇಕು. ಮತ್ತು ಮಾಸ್ಕ್ ಧರಿಸಬೇಕು ಅಂತರವನ್ನು ಕಾಯ್ದುಕೊಳ್ಳಬೇಕು. ಹಾಗಾಗ ಕೈಗಳನ್ನು ತೊಳೆಯಬೇಕೆಂದು ಹೇಳಿದರು.

ಆಯುಷ್ ಅರೋಗ್ಯ ವೈದ್ಯಾಧಿಕಾರಿಗಳಾದ ಎಂ ವಿರುಪಾಕ್ಷಪ್ಪನವರು ಎಲ್ಲಾ ಗ್ರಾಮಸ್ಥರು 45 ವರ್ಷ ಮೇಲ್ಪಟ್ಟವರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು

ಸಹಾಯಕಿಯಾದ ಶ್ರೀಮತಿ ಧರಣಿ ಇವರು ಕೋವಿಡ್ 19 ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕವಿತಾ ಹಾಗೂ
ಆಶಾ ಕಾರ್ಯಕರ್ತೆಯರು ಇತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here