ಆದರ್ಶ ವ್ಯಕ್ತಗಳ ಅನುಕರಣೆ ಮಾಡಿದಲ್ಲಿ ಜೀವನ ಸಾರ್ಥಕ: ಯಾಸ್ಮೀನ್ ಜಂಗಲ್‌ನಾಯಿಕ್,

0
161

ಸಂಡೂರು: ನ: 27: ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜೆ.ಎಸ್.ಡಬ್ಲ್ಯೂ ಫೌಂಡೇಷನ್ ‌ನ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮ ಉದ್ಘಾಟಿಸಿ ಕ್ಲಸ್ಟರ್ ರಿಸೋರ್ಸ್ ಪರ್ಸನ್ ಯಾಸ್ಮಿನ್ ಜಂಗಲ್‌ನಾಯಿಕ್ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ನೆಚ್ಚಿನ ಆದರ್ಶ ವ್ಯಕ್ತಗಳ ಅನುಕರಣೆ ಮಾಡಿದಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಬಂದೇನವಾಜ್ ಮಾತನಾಡಿ ಈಗಿನ ಮಕ್ಕಳಿಗೆ ಶಿಸ್ತು,ಶಿಕ್ಷಣದ ಮೇಲಿನ ಗೌರವ ಕಡಿಮೆ, ಶಿಸ್ತು ಪಾಲಿಸಿ ಆಸಕ್ತಿಯಿಂದ ಕೇಳಿಸಿಕೊಂಡಾಗ ವಿಷಯ ಮನನ ವಾಗುತ್ತದೆ, ವಿದ್ಯೆ ತಾನಾಗೆ ಒಲಿದು ಬರಲಿದೆ ಎಂದು ತಿಳಿಸಿದರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಶಿಕ್ಷಕ ವೃತ್ತಿ ಮಹತ್ತಮ ಕೆಲಸ ಗುರುವಿನ ಒಲುಮೆ ಇದ್ದರೆ ಮುಂದೆ ಶಿಕ್ಷಕರೋ ಅಥವಾ ಅತ್ಯುನ್ನತ ಹುದ್ದೆಗಳು ಲಭಿಸಲಿವೆ ಎಂದು ತಿಳಿಸಿದರು, ಸಹ ಶಿಕ್ಷಕಿ ಪಾರ್ವತಿ ಅವರು ಪಂಡಿತ್ ಜವಾಹರ್ ಲಾಲ್ ನೆಹರು ಮತ್ತು ಮಕ್ಕಳ ದಿನ ಕುರಿತು ಪೂರ್ಣ ಮಾಹಿತಿ ನೀಡಿದರು,ಶಿಕ್ಷಕಿ ರಜನಿಯವರು ಆಸ್ಪೈರ್ ಸಂಸ್ಥೆಯಿಂದ ಮಕ್ಕಳಿಗೆ ಸ್ಕಿಲ್ ಚಟುವಟಿಕೆಗಳ ಶ್ರಮವನ್ನು ಕೊಂಡಾಡಿದರು, ನಂತರ ಮಕ್ಕಳಿಂದ ಕೇಕ್ ಕತ್ತರಿಲಾಯಿತು ಹಾಗೆ ಆಟೋಟ ಗಳಲ್ಲಿ ವಿಜೇತರಾದವರಿಗೆ ಆಸ್ಪೈರ್ ಸಂಸ್ಥೆಯ ವ್ಯವಸ್ಥಾಪಕಿ ಪರಿಮಳ ಅವರು ಬಹುಮಾನ ವಿತರಣೆ ಮಾಡಿದರು,

ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ ಸದಸ್ಯರಾದ ಟಿ.ಬಾಬು,ತೆಲುಗು ಶಾಲೆ ಮುಖ್ಯ ಶಿಕ್ಷಕಿ ನಾಗವೇಣಿ,ಮ್ಯಾಜಿಕ್‌ ‌ ಬಸ್‌ನ ಎಲ್.ಇ.ಎಸ್ ಮಲ್ಲೇಶಪ್ಪ,ಸುರೇಶ್,ಸಹ ಶಿಕ್ಷಕರಾದ ಬಸವರಾಜ್,ಶರೀಫ್, ಶಶಿಕಲಾ, ರೇಣುಕಾ,ಕೃಷ್ಣವೇಣಿ, ಮಹಾಲಕ್ಷ್ಮಿ,ಸರಳ, ಪ್ರಿಯಾಂಕಾ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here