ಕೂಡ್ಲಿಗಿ: ಬಸ್ ಸಂಚಾರ ಕಲ್ಪಿಸಿ, ವಿವಿದ ಗ್ರಾಮಸ್ಥರ ಒತ್ತಾಯ.!

0
79

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಜಂಗಮ ಸೋವೇನಹಳ್ಳಿ, ಗ್ರಾಮ ಸೇರಿದಂತೆ ಹಗರಿಬೊಮ್ಮನಹಳ್ಳಿ ಮಾರ್ಗಕ್ಕೆ ಸಮಪರ್ಕವಾಗಿ. ಬಸ್ ಸಂಚಾರ ವ್ಯವಸ್ಥೆ ಮಾಡಬೇಕೆಂದು ಜಂಗಮ ಸೋವೇನಹಳ್ಳಿ ಗ್ರಾಮಸ್ಥರು, ಸಾರಿಗೆ ಸಂಸ್ಥೆ ಕೂಡ್ಲಿಗಿ ಘಟಕದ ವ್ಯವಸ್ಥಾಪರಿಗೆ ಹಾಗೂ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ, ವಿವಿದ ಗ್ರಾಮಗಳ ಮುಖಂಡರು ಹಕ್ಕೊತ್ತಾಯ ಮಾಡಿದ್ದಾರೆ.

ಕೂಡ್ಲಿಗಿ-ಹಗರಿಬೊಮ್ಮನಹಳ್ಳಿ ಮಾರ್ಗದ ಹೆಸರಿನ ಬಸ್, ನಾಣ್ಯಪುರ ಶಿವಪುರ ಗ್ರಾಮದ ಮೂಲಕ ಬಸ್ ಸಂಚಾರ ಮಾಡುತ್ತಿತ್ತು. ಆ ಬಸ್ ಕೂಡ್ಲಿಗಿಯಿಂದ ಜಂಗಮ ಸೋವೇನಹಳ್ಳಿ, ನಾಣ್ಯಾಪುರ’ ಶಿವಪುರ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಅದನ್ನು ಕೋವಿಡ್ ಲಾಕ್ ಡೋನ್ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿತ್ತು,ಲಾಕ್ ಡೋನ್ ಅವದಿ ಮುಗಿದು ಆರೇಳು ತಿಂಗಳಾದರೂ ಕೂಡ.ಈ ವರೆಗೂ ಹಗರಿಬೊಮ್ಮನಹಳ್ಳಿ- ಕೂಡ್ಲಿಗಿ ಮಾರ್ಗದ ರೂಟ್ ನಂಬರ್ 27ರ ಬಸ್ ಪುನಃ ಸಂಚಾರಕ್ಕೆ ಕ್ರಮ ಜರುಗಿಸಿಲ್ಲ, ಸಂಸ್ಥೆಗೆ ನಷ್ಟ ಆಗುತ್ತೆ ಅನ್ನುವಂತಹ ಕುಂಟು ನೆಪ ಮಾಡಿ ಬಸ್ ಸಂಚಾರವನ್ನು ಸ್ಥಗಿತ ಮಾಡಿದ್ದು,ಹತ್ತಾರು ಹಳ್ಳಿಗಳ ನೂರಾರು ಪ್ರಯಾಣಿಕರು ಹಾಗೂ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಈ ಬಸ್ ಅನುಕೂಲವಾಗಿತ್ತು.ಎರೆಡೂ ತಾಲೂಕುಗಳ ಪ್ರಯಾಣಿಕರು ಇದೇ ಬಸ್ ಅವಲಂಬಿಸಿದ್ದಾರೆ.

ಆರ್ಥಿಕ ಹಾಗೂ ಶೈಕ್ಷಣಿಕ ಕೃಷಿ ಆರೋಗ್ಯ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ, ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ಹೆಚ್ಚಾಗಿ ವ್ಯವಹಾರ ಮಾಡುವುದರಿಂದಾಗಿ. ಅತ್ಯಾವಶ್ಯಕವಾಗಿದೆ ಬಡ ಮದ್ಯಮ ವರ್ಗದವರು ಸಾರಿಗೆ ಬಸ್ಸುಗಳನ್ನೆ ಅನಿವಾರ್ಯವಾಗಿ ಅವಲಂಬಿತರಾಗಿದ್ದು, ಅಲ್ಲದೇ ಈ ಭಾಗದ ಜನರ ಜೀವನಾಡಿ ಯಾಗಿರುವ ಸಾರಿಗೆ ಬಸ್ ಸಂಚಾರ ಅನಿವಾರ್ಯವಾಗಿದ್ದು. ಆದ ಕಾರಣ ಲಾಭ-ನಷ್ಟದ ನೆಪ ಹೇಳದೆ ಸೇವಾ ಮನೋಭಾವದೊಂದಿಗೆ ಹಾಗೂ ಗ್ರಾಮಸ್ಥರ ಹಿತಕ್ಕಾಗಿ, ಲಾಕ್ ಡೌನ್ ನ ಪೂರ್ವದಲ್ಲಿ ಕಾರ್ಯನಿರ್ವಸುವಂತೆ ಸಾರಿಗೆ ರೂಟ್ ನಂಬರ್ 27 ಮಾರ್ಗದ ಬಸ್ಸನ್ನು. ಅದೇ ಮಾರ್ಗದಲ್ಲಿ ಪುನಃ ಸಂಚಾರಕ್ಕೆ ಕ್ರಮ ಜರುಗಿಸಬೇಕೆಂದು ವಿವಿದ ಗ್ರಾಮಗಳ ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ವಿವಿದ ಗ್ರಾಮಗಳ ಶಾಲಾ ಕಾಲೆಜ್ ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರು, ಕೂಡ್ಲಿಗಿ ಸಾರಿಗೆ ಘಟಕದ ವ್ಯವಸ್ಥಾಪಕ ಮರಿಲಿಂಗಪ್ಪರವರಿಗೆ ತಮ್ಮ ಮನವಿ ಪತ್ರ ನೀಡಿದ್ದಾರೆ. ಜಂಗಮ ಸೋವೇನಹಳ್ಳಿ, ನಾಣ್ಯಪುರ, ಶಿವಪುರ ಗ್ರಾಮಗಳ ಮುಖಂಡರು ಹಾಗೂ ವಿದ್ಯಾರ್ಥಿಗಳು. ಜಂಗಮ ಸೋವೇನಹಳ್ಳಿ ಗ್ರಾಮದ ನಂದಿ ವಿರೂಪಾಕ್ಷಪ್ಪ, ಕಟ್ಟಡ ಕಾರ್ಮಿಕ ಮುಖಂಡ ಬಿ.ಹೂಲೆಪ್ಪ ನೇತೃತ್ವದಲ್ಲಿ ಮನವಿ ಮಾಡಿದ್ದಾರೆ.

ವರದಿ:-ಮಂಜುನಾಥ್. ಹೆಚ್

LEAVE A REPLY

Please enter your comment!
Please enter your name here