ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಸವರಾಜ್ ಅಡವಿಬಾವಿ ಅವರ ಮಧ್ಯಸ್ಥಿಕೆಯಿಂದ ಎನ್ ಎಂ ಡಿ ಸಿ ಭದ್ರತಾ ಸಿಬ್ಬಂದಿಗಳ ಮರುನೇಮಕ ಸಂಧಾನ ಯಶಸ್ವಿ

0
391

ಸಂಡೂರು:ಅ:15:- ಸಂಡೂರು ತಾಲೂಕಿನ ಎನ್ ಎಂ ಡಿ ಸಿ ಭದ್ರತಾ ಸಿಬ್ಬಂದಿಗಳನ್ನು ಏಕಾಏಕಿಯಾಗಿ ವಜಾಗೊಳಿಸಿದರ ನಿಮಿತ್ತ 18.10.2021 ರಂದು ಹಮ್ಮಿಕೊಂಡಿದ್ದ ಅನಿರ್ದಿಷ್ಠ ಮುಷ್ಕರ ಹೋರಾಟ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಸವರಾಜ್ ಅಡವಿಬಾವಿ ಅವರ ಮಧ್ಯಸ್ಥಿಕೆಯಿಂದ ಇಂದು ಯಶಸ್ವಿಯಾಗಿದೆ

ಎನ್ ಎಂ ಡಿ ಸಿ ಭದ್ರತಾ ಸಿಬ್ಬಂದಿಯ ನೊಂದ ಕಾರ್ಮಿಕರು ಹಾಗೂ ಸಂಡೂರು ತಾಲೂಕಿನ ಸರ್ವ ಸಂಘಗಳು ಮತ್ತು ಭುಜಂಗನಗರ ಗ್ರಾಮದ ಸಾರ್ವಜನಿಕರು ಎನ್ ಎಂ ಡಿ ಸಿ ಭದ್ರತಾ ಸಿಬ್ಬಂದಿಗಳ ಸುಮಾರು 10-12ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು ಇವರನ್ನು ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಕೆಲಸದಿಂದ ವಜಾಗೊಳಿಸಿದ್ದರು ಸುಮಾರು 4 ತಿಂಗಳಿಂದ 74 ಜನರ ಜೀವನ ಬೀದಿ ಪಾಲಾಗಿದ್ದು ಈ ವಿಷಯವಾಗಿ ಹಿಂದೆ ದಿನಾಂಕ:03.08.2021 ರಂದು ಎನ್ ಎಂ ಡಿ ಸಿ ಆಡಳಿತ ಮಂಡಳಿಯವರ ಗಮನಕ್ಕೆ ತಂದು ಮುಷ್ಕರ ನಡೆಸಿದ್ದರು ಆ ದಿನದಂದು ಮಂಡಳಿಯವರು ಭರವಸೆ ನೀಡಿದ್ದು ಇದುವರೆಗೆ ಯಾವುದೇ ಉದ್ಯೋಗ ನೀಡಿರಲಿಲ್ಲ

ಆದ್ದರಿಂದ ಕೆಲಸದಿಂದ ತೆಗೆದುಹಾಕಲ್ಪಟ್ಟ ಭದ್ರತಾ ಸಿಬ್ಬಂದಿಗಳು ಮತ್ತು ಅವರ ಕುಟುಂಬಸ್ಥರು ಸೇರಿ ಭುಜಂಗನಗರ ಶಿವ ಸರ್ಕಲ್ ನಲ್ಲಿ ದಿನಾಂಕ:18.10.2021 ರಿಂದ ಬೆಳಿಗ್ಗೆ 5.00ಗಂಟೆಯಿಂದ ನಮಗೆ ನ್ಯಾಯ ಸಿಗುವವರೆಗೂ ಎನ್ ಎಂ ಡಿ ಸಿ ಯ ವಾಹನ ಹೊರತುಪಡಿಸಿ ಬೇರೆ ಯಾವುದೇ ಸಾರ್ವಜನಿಕ ವಾಹನಗಳನ್ನು ನಿಲ್ಲಿಸಲಾಗುವುದಿಲ್ಲ, ಅನಿರ್ದಿಷ್ಠ ಮುಷ್ಕರ ಹೋರಾಟಕ್ಕೆ ಅನುಮತಿ ನೀಡಬೇಕೆಂದು ಮಾನ್ಯ ತಹಶೀಲ್ದಾರ್ ಹಾಗೂ ಆರಕ್ಷಕ ವೃತ್ತ ನಿರೀಕ್ಷಕರು ಸಂಡೂರು ವೃತ್ತ ಇವರುಗಳಿಗೆ ಮನವಿಯನ್ನು ಸಲ್ಲಿಸಿದ್ದರು

ಕಾರ್ಮಿಕರ ಸಮಸ್ಯೆ ಹಾಗೂ ಅವರ ಕಷ್ಟಗಳನ್ನು ಅರಿತಿರುವ ತಹಶೀಲ್ದಾರ್ ಹಾಗೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಸವರಾಜ್ ಅಡವಿಬಾವಿ ಅವರುಗಳು ತಾಲೂಕಿನ ಕನ್ನಡಪರ ಸಂಘಗಳಾದ ಕರ್ನಾಟಕ ರಕ್ಷಣಾ ವೇದಿಕೆ, ಗಣಿ ಲಾರಿ ಕಾರ್ಮಿಕರ ಸಂಘ, ತಾಲೂಕು ರೈತ ಸಂಘ,ಭುಜಂಗನಗರ ಲಾರಿ ಸಂಘಗಳ ಅಧ್ಯಕ್ಷರುಗಳನ್ನು ಕರೆಸಿಕೊಂಡು ಎನ್ ಎಂ ಡಿ ಸಿ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ಚರ್ಚೆಮಾಡಿದರು,

ಚರ್ಚೆಯಲ್ಲಿ ಎನ್ ಎಂ ಡಿ ಸಿ ಆಡಳಿತ ಮಂಡಳಿಯವರು ಶ್ರೀಯುತ ಬಸವರಾಜ್ ಅಡವಿಬಾವಿ ಅವರ ಸಮ್ಮುಖದಲ್ಲಿ ಕೆಲಸದಿಂದ ತೆಗೆದು ಹಾಕಿರುವ ಎಲ್ಲರನ್ನೂ ಪುನಃ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ, ಆದರೆ ಇಂತಹದೇ ಸ್ಥಳದಲ್ಲಿ ನಮಗೆ ಕೆಲಸ ನೀಡಿ ಎಂದು ಯಾರೂ ಸಹ ಬಲವಂತ ಮಾಡಬಾರದು ಎಂದು ಹೇಳಿದರು ಅದಕ್ಕೆ ಸಂಘಗಳ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಒಮ್ಮತದಿಂದ ಒಪ್ಪಿಗೆಯನ್ನು ಸೂಚಿಸಿದರು. ಎಲ್ಲರನ್ನು ಒಮ್ಮತಕ್ಕೆ ತೆಗೆದುಕೊಂಡು ಸಂದಾನವನ್ನು ಯಶಸ್ವಿಗೊಳಿಸಿ ಕಾರ್ಮಿಕರ ಬದುಕಿಗೆ ಬೆಳಕಾದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೆ ಎಲ್ಲರೂ ಧನ್ಯವಾದಗಳನ್ನು ತಿಳಿಸಿದರು

ಈ ಸಂಧರ್ಭದಲ್ಲಿ ಎನ್ ಎಂ ಡಿ ಸಿ ಜನರಲ್ ಮ್ಯಾನೇಜರ್ ಸಂಜೀವ್ ಸಾವು, ಎಜಿಎಂ ರಾಕೇಶ್ ರಂಜನ್, ಜಿಎಂ ಪ್ರದೀಪ್ ಸಕ್ಸೆನಾ, ಎಜಿಎಂ ಅನಿಲ್, ಭದ್ರತಾ ಸಿಬ್ಬಂದಿಗಳ ಅಧ್ಯಕ್ಷರಾದ ಹೆಚ್.ಬಿ.ಗಂಗಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ರಾಜು ಪಾಳೇಗಾರ್, ರೈತ ಸಂಘದ ಅಧ್ಯಕ್ಷರಾದ ಉಜ್ಜಿನಯ್ಯ, ಗಣಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಸತೀಶ್, ಭುಜಂಗನಗರದ ಲಾರಿ ಸಂಘಗಳ ಮಲ್ಲಿ ಹಾಗೂ ರೈತ ಸಂಘದ ಕಾರ್ಯದರ್ಶಿ ಚಂದ್ರು, ಮತ್ತು ಗಣಿ ಕಾರ್ಮಿಕರ ಸಂಘದ ಆನಂದ್ ಹಾಗೂ ಸಿದ್ದಪ್ಪ ಅವರುಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here