ಯಾವುದೇ ರೂಪಾಂತರ ಕೊರೋನ ತಳಿ ಬರಲಿ ಎದುರಿಸಲು ನಾವು ಸಿದ್ದ; ಗ್ರಾಮ ಪಂಚಾಯತ್ ಅಧ್ಯಕ್ಷ ಅಳ್ಳಾಪುರ ವೀರೇಶಪ್ಪ,

0
185

ಸಂಡೂರು: ಡಿ: 22: ತಾಲೂಕಿನ ತೋರಣಗಲ್ಲು ಗ್ರಾಮ ಪಂಚಾಯತಿ ಕಾರ್ಯಾಲಯದ ಆವರಣದಲ್ಲಿ ರೂಪಾಂತರ ಕೊರೋನಾ ವೈರಸ್ ( ಜೆ.ಎನ್.1) ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮ ಉದ್ದೇಶಿಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಳ್ಳಾಪುರ ವೀರೇಶಪ್ಪ ಅವರು ಮಾತನಾಡಿ ಮೂರು ಅಲೆಗಳನ್ನು ಕಂಡಿದ್ದೇವೆ ಈಗ ಹೊಸ ರೂಪದಲ್ಲಿ ಬಂದರೆ ಬರಲಿ, ಇಲ್ಲಿ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರು,ಇತರರು ಸಾಕಷ್ಟು ಜನ ಬರತಾರೆ,ಹೋಗುತಾರೆ, ಹೆದರಿಕೊಳ್ಳುವ ಅವಶ್ಯಕತೆ ಇಲ್ಲ, ಏನೇ ಆದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಿದ್ದರಿದ್ದೇವೆ, ಆರೋಗ್ಯ ಇಲಾಖೆ ಮಾರ್ಗ ಸೂಚಿ ಬಿಡುಗಡೆ ಮಾಡಿದರೆ ಅದನ್ನು ಪಾಲಿಸುತ್ತೇವೆ,ಜಿಂದಾಲ್ ಸಹಕಾರ ಕೋರುತ್ತೇವೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ರೂಪಾಂತರ ತಳಿ ಜೆ.ಎನ್.1 ಅಪಯಾಕಾರಿ ಅಲ್ಲದಿದ್ದರೂ ಭಯ ಪಡುವ ಅವಶ್ಯಕತೆ ಇಲ್ಲ ಎಚ್ಚರಿಕೆಯಿಂದ ಇರೋಣ, ಎರಡು ಮೂರು ಡೋಸ್ ಲಸಿಕೆ ಪಡೆದಿದ್ದೇವೆ, ಸದ್ಯ 60 ವರ್ಷ ಮೇಲ್ಪಟ್ಟವರು ಹೆಚ್ಚಿನ ಕಾಳಜಿ ವಹಿಸಲು ಸರ್ಕಾರ ಸೂಚಿಸಿದೆ, ಅನಾವಶ್ಯಕ ತಿರುಗುವುದು ಬೇಡ, ಸಾಮಾಜಿಕ ಅಂತರ,ಸ್ವಚ್ಛ ಕೈತೊಳೆಯುವ ಬಗ್ಗೆ ಕಾಳಜಿ ವಹಿಸಿ ಪೌಷ್ಟಿಕ ಆಹಾರ ಸೇವನೆ ಮಾಡಿ ನಿರೋಧಕ ಶಕ್ತಿಯನ್ನು ಹೆಚ್ವಿಕೊಳ್ಳಬೇಕಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ್, ಹೇಮಚಂದ್ರ,ವಿ.ಕೆ ಶಂಕ್ರಪ್ಪ,ಗ್ರಾಮದ ಮುಖಂಡರಾದ ದ್ಯಾವಣ್ಣ,ಯರ್ರಿಸ್ವಾಮಿ,ಕೆ.ಯಶ್ಚಂತ್,ಪ್ರವೀಣಾ,ಸುಲ್ತನಾಪುರ ಹುಚ್ಚಪ್ಪ,ಉಮೇಶ, ತಮ್ಮಾರೆಡ್ಡಿ, ನಾಗಪ್ಪ ಅಂಗನವಾ ಮೇಲ್ವಚಾರಕಿ ಲಕ್ಷ್ಮಿ ಕಂಕನವಾಡಿ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಕರ ವಸೂಲಿಗಾರ ಶಂಕರ್,ಡಾಟಾ ಸಹಾಯಕ ಪಂಪಾಪತಿ, ರಾಂಬಾಹು ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here