ಬಳ್ಳಾರಿಯಲ್ಲಿ ಫಿಟ್ ಇಂಡಿಯಾ ಫ್ರೀಡಂ ರನ್ ಯಶ್ವಂತ್ ಪ್ರಥಮ,ಅಸ್ಲಾಂ ದ್ವಿತೀಯ

0
106

ಬಳ್ಳಾರಿ,ಆ.21: ಕೇಂದ್ರ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಹಾಗೂ ಬಳ್ಳಾರಿ ಲಿಯಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಅಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಅಂಗವಾಗಿ ಜನಭಾಗಿದಾರಿ ಜನರ ಆಂದೋಲನ ಎಂಬ ಧ್ಯೇಯವಾಕ್ಯದೊಂದಿಗೆ “ಭಾರತ-75 ಫಿಟ್ ಇಂಡಿಯಾ ಪ್ರೀಡಂ ರನ್ 2.0” ಕಾರ್ಯಕ್ರಮವು ನಗರದಲ್ಲಿ ಶನಿವಾರ ನಡೆಯಿತು.
ನಗರದ ದುರ್ಗಮ್ಮ ದೇವಸ್ಥಾನದ ಆವರಣದಿಂದ ಆರಂಭವಾದ ಈ ಫ್ರೀಡಂ ರನ್ (ಓಟ ಮತ್ತು ಸೈಕ್ಲಿಂಗ್ ಸ್ಪರ್ಧೆ) ರಾಯಲ್ ವೃತ್ತ, ಬ್ರೂಸ್‍ಪೇಟೆ ಪೊಲೀಸ್ ಠಾಣೆ, ತೇರುಬೀದಿ, ಮೋತಿ ವೃತ್ತದ ಮುಖಾಂತರ ದುರ್ಗಮ್ಮ ದೇವಸ್ಥಾನದ ಹತ್ತಿರ ಮುಕ್ತಾಯವಾಯಿತು.
ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಫಿಟ್ ಮತ್ತು ಆರೋಗ್ಯಕರ ಭಾರತಕ್ಕಾಗಿ ಸಂಕಲ್ಪ ಮಾಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಫ್ರೀಡಂ ರನ್‍ನಲ್ಲಿ ಯಶ್ವಂತ್ ಪ್ರಥಮ ಸ್ಥಾನ ಪಡೆದರೇ, ಅಸ್ಲಾಂ ದ್ವಿತೀಯ ಮತ್ತು ನರಸಿಂಹ ತೃತೀಯ ಸ್ಥಾನ ಪಡೆದರು. ರನ್ನಿಂಗ್ ಹಾಗೂ ಸೈಕ್ಲಿಂಗ್‍ನಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಎನ್‍ಸಿಸಿ ವಿದ್ಯಾರ್ಥಿಗಳು, ಗೃಹರಕ್ಷಕ ದಳದ ಸಿಬ್ಬಂದಿ, ಮಾಜಿ ಯೋಧರು, ದೈಹಿಕ ತರಬೇತಿ ನಿರ್ದೇಶಕರಾದ ವಿರುಪಾಕ್ಷಯ್ಯ, ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಮಾಂಟು ಪತಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೈಯಾದ್ ಚಾಂದ್‍ಪಾಶಾ, ಹಿರಿಯ ಅಥ್ಲೀಟ್ ಚಂದ್ರಶೇಖರ್, ಬಳ್ಳಾರಿಯ ಲಿಯಾ ಸಂಸ್ಥೆಯ ಅಧ್ಯಕ್ಷರಾದ ಎಲ್.ಐ.ಅಬ್ರಾಹಂ, ಸದಸ್ಯರಾದ ಪ್ರಿಯಾ, ಫರೀದಾ, ಮಂಜುಳಾ, ಬಿ.ಕೆ.ಸುಂದರ್ ಅವರ ನೇತೃತ್ವದ ಬಳ್ಳಾರಿ ರನ್ನರ್ಸ್ ತಂಡದ ಅಥ್ಲೀಟ್‍ಗಳು, ಪ್ರಾಜೆಕ್ಟ್ ಕೋ-ಆರ್ಡಿನೇಟರ್ ಹರ್ಷ ಡ್ಯಾನಿಯಲ್ ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ಅಥ್ಲೀಟ್‍ಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here