ಕೊಟ್ಟೂರುನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆರಂಭವಾಗೋದು ಯಾವಾಗ..!?

0
209

ಕೊಟ್ಟೂರು ತಾಲೂಕಿನ ಆರಾಧ್ಯ ದೈವ ಕ್ಷೇತ್ರನಾಥ ಶ್ರೀ ಗುರು ಕೊಟ್ಟೂರೇಶ್ವರರ ಸ್ವಾಮಿಯ ರಾಜ್ಯದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹ ಒಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮುನ್ನುಡಿ ಬರೆಯುತ್ತಿರುವ ಕೊಟ್ಟೂರು ಹೆಸರನ್ನು ರಾಜ್ಯದಲೇ ಉನ್ನತ ಮಟ್ಟದಲ್ಲಿ ವಿದ್ಯಾರ್ಥಿಗಳು ಹೆಸರು ಮಾಡುತ್ತಿದ್ದಾರೆ ಎಂದು ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ಕೆ. ರೇಣುಕಮ್ಮ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಕೊಟ್ಟೂರು ತಾಲೂಕಿನಲ್ಲಿ 8 ರಿಂದ 10 ಪದವಿ ಪೂರ್ವ ಕಾಲೇಜ್‌ಗಳಿದ್ದು, ಪಿಯುಸಿ ಪಾಸಾದ ನಂತರ ಪದವಿ ಸೇರಲು ಅಲೆದಾಡ ಬೇಕಾದ ಸಂಗತಿ ಒದಗಿ ಬಂದಿದೆ ಅಲ್ಲದೆ ಖಾಸಗಿ ಕಾಲೇಜುಗಳ ಶುಲ್ಕವನ್ನು ಕಟ್ಟಲಾಗದೆ. ಬೇರೆ ತಾಲೂಕುಗಳಿಗೆ ವಿದ್ಯಾರ್ಥಿಗಳು ಅಲೆಡಾಡುವಂತಾಗಿದೆ. ಕಾರಣ ನಮ್ಮ ತಾಲೂಕಿನಲ್ಲಿ ಅಂದರೆ ಕೊಟ್ಟೂರಿನಲ್ಲಿ ಸರ್ಕಾರಿ ಪದವಿ ಕಾಲೇಜು ಆದರೆ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.

ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅನೇಕ ವರ್ಷಗಳಿಂದ ನಿರಂತರವಾಗಿ ಸರ್ಕಾರದ ಗಮನ ಸೆಳೆಯಲು ಹೋರಾಟ ಮಾಡಿದರೂ ಫಲಪ್ರದವಾಗಿಲ್ಲ. ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಿಸಬೇಕು ಎನ್ನುವ ಬೇಡಿಕೆ ಹಾಗೆಯೇ ಉಳಿದಿದೆ. ಈಗಾಗಲೇ ಎರಡೂ ಬಾರಿ ಇನ್ನೇನು ಪ್ರಾರಂಭ ವಾಗಬೇಕೆಂಬುವ ಆಶಯ ಹೊತ್ತ ಕೊಟ್ಟೂರು ಹಾಗೂ ಸುತ್ತಮುತ್ತಲಿನ ತಾಲೂಕಿನ ವಿದ್ಯಾರ್ಥಿಗಳಿಗೆ ಸರ್ಕಾರ ನಿರಾಸೆಗೊಳಿಸಿತು ಎಂದರು
ಕೊಟ್ಟೂರು ತಾಲೂಕಿನಲ್ಲಿ ಹಲವು ಸಂಘಟನೆಗಳು ಪದವಿಪೂರ್ವ ಕಾಲೇಜ್ ಗೆ ಮನವಿ ಮಾಡಿದ್ದರೂ ಜನಪ್ರತಿನಿಧಿಗಳು ಕಾಲೇಜು ಆರಂಭಕ್ಕೆ ಮೀನಮೇಷ ಎಣಿಸುತ್ತಿದ್ದಾರೆ. ಶೀಘ್ರವೇ ಕಾಲೇಜು ಆರಂಭಿಸಬೇಕು. ತಾಲ್ಲೂಕು ಕೇಂದ್ರವಾಗಿ ಹಲವು ದಿನಗಳು ಕಳೆದರೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪದವಿ ಕಾಲೇಜಿಗೆ ನೆರೆಯ ಜಿಲ್ಲಾಗಳಿಗೆ ತೆರಳುತ್ತಿದ್ದಾರೆ. ಅನಿವಾರ್ಯವಾಗಿ ಕೆಲ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳ ಮೊರೆ ಹೋಗಿದ್ದಾರೆ. ನಿತ್ಯ ಓಡಾಟವೇ ದಿನಚರಿಯಾಗಿದೆ. ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ
ಅನೇಕ ವಿದ್ಯಾರ್ಥಿ ಸಂಘಟನೆಗಳು ಕಾಲೇಜು ಮಂಜೂರಾತಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನೆಯಾಗಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾಲೇಜು ಆರಂಭ ನೆನೆಗುದಿಗೆ ಬಿದ್ದಿದೆ ಎಂದು ಹೇಳಿ ಕೂಡಲೇ ಸರ್ಕಾರ ಪದವಿ ಕಾಲೇಜು ಆರಂಭಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

■ಹಗರಿಬೊಮ್ಮಹಳ್ಳಿ ಕ್ಷೇತ್ರದ ಶಾಸಕರಾಗಿ ಆಯ್ಕೆ ಮಾಡಿದ ಮೇಲೆ ಎರಡು ಬಾರಿ ಪತ್ರದ ಮೂಲಕ ಒತ್ತಡ ಹೇರಲಾಗಿದೆ. ತಾಲೂಕು ರಚನೆಯಾಗಿದೆ. ಈ ಭಾಗಕ್ಕೆ ಶೈಕ್ಷಣ ಹಿನ್ನಲೆ ಇರುವ ಕಾರಣ ಸರ್ಕಾರಿ ಪದವಿ ಕಾಲೇಜ್ ಅನುಮೋದನೆ ಶೀಘ್ರವಾಗಿ ರಚನೆ ಮಾಡಲಿಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಿ ತರುವಂತ ಪ್ರಯತ್ನ ಮಾಡುತ್ತೇವೆ.
—–ಕೆ.ನೇಮಿರಾಜ ನಾಯ್ಕ ಶಾಸಕರು ಹಗರಿಬೊಮ್ಮನಹಳ್ಳಿ ಕ್ಷೇತ್ರ.

■ಈಗಾಗಲೇ ಕಾಲೇಜು ಶಿಕ್ಷಣ ಇಲಾಖೆ ಬೆಂಗಳೂರು ಇವರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇನೆ, ಶಿಕ್ಷಣ ಇಲಾಖೆಯವರಿಂದ ಬಳ್ಳಾರಿಯ ಪ್ರಥಮ ದರ್ಜೆ ಪ್ರಾಂಶುಪಾಲರ ತಂಡ ಬಂದು ವಿಕ್ಷೀಸಿ ಕೊಟ್ಟೂರಿನಲ್ಲಿ ಪದವಿ ಕಾಲೇಜೆ ಮಾಡಬಹುದು ಎಂದು ಶಿಕ್ಷಣ ಇಲಾಖೆ ಬೆಂಗಳೂರು ಇವರಿಗೆ ಶಿಫಾರಸ್ಸು ಮಾಡಿದ್ದಾರೆ. ಅಲ್ಲದೆ ಹಗರಿಬೊಮ್ಮನಹಳ್ಳಿ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ ಮುಂದಿನ ವರ್ಷದಲ್ಲಿ ಪ್ರಾರಂಭಿಸಲು ಸರ್ಕಾರಕ್ಕೆ ಒತ್ತಾಯಿಸುವೆ
—–ಸೋಮಶೇಖರ ಜಿ
ಪ್ರಾಂಶುಪಾಲರು
ಪದವಿ ಪೂರ್ವ ಕಾಲೇಜ್ ಕೊಟ್ಟೂರು.

LEAVE A REPLY

Please enter your comment!
Please enter your name here