ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮ ಮುಕ್ತಾಯ

0
133

ಧಾರವಾಡ ಜ.28: ಸಮಾಜ ಕಲ್ಯಾಣ ಇಲಾಖೆ ಪ್ರಾಯೋಜಕತ್ವದಲ್ಲಿ ಸಿಡಾಕ್ ಧಾರವಾಡ ಸಂಸ್ಥೆಯು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪದವಿ ಪಡೆದ ಯುವಕ ಯುವತಿಯರಿಗೆ ಆಯೋಜಿಸಿದ್ದ ಆನ್‍ಲೈನ್ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧ ತರಬೇತಿ ಕಾರ್ಯಕ್ರಮ ಮುಕ್ತಾಯವಾಯಿತು.

ಉದ್ಯಮಿ ಶಿವಾನಂದ ಸಂಜೀವಗೋಳ ಮಾತನಾಡಿ, ತಮ್ಮ ಅನುಭವವನ್ನು ಹಂಚಿಕೊಂಡು ತರಬೇತಿಯಲ್ಲಿ ಭಾಗವಹಿಸಿದವರಿಗೆ ಸ್ವಯಂ ಉದ್ಯೋಗಿಗಳಾಗಲು ಪ್ರೇರೆಪಿಸಿದರು. ಸಿಡಾಕ್ ಸಂಸ್ಥೆಯ ನಿರ್ದೇಶಕ ಡಾ. ವೀರಣ್ಣ ಎಸ್.ಎಚ್. ಮಾತನಾಡಿ, ಉದ್ಯಮಶೀಲತೆಯ ವೃತ್ತಿಜೀವನದ ಅಗತ್ಯವನ್ನು ಒತ್ತಿ ಹೇಳಿದರು.

ಸಾಧನಾ, ಪ್ರೇರಣಾ ತರಬೇತಿ, ಉದ್ಯಮ ಆಯ್ಕೆ, ಮಾರುಕಟ್ಟೆ ಸಮೀಕ್ಷೆ, ಸರ್ಕಾರದಿಂದ ದೊರೆಯುವ ನೆರವುಗಳು, ಯೋಜನಾ ವರದಿ ತಯಾರಿಕೆ ಹಾಗೂ ಅನೇಕ ನಿರ್ವಹಣಾ ವಿಷಯಗಳ ಮೇಲೆ ಉಪನ್ಯಾಸ, ಚರ್ಚೆ ಹಾಗೂ ಸಂವಾದಗಳು ನಡೆದವು.

ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಡಾ.ರವಿಕುಮಾರ ಸುರಪುರ ಆನ್‍ಲೈನ್ ಮೂಲಕ ಭಾಗವಹಿಸಿದ ಅಭ್ಯರ್ಥಿಗಳಿಗೆ ಕಾರ್ಯಕ್ರಮದ ಸದುಪಯೋಗವನ್ನು ಪಡೆದು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಸಲಹೆ ನೀಡಿದರು. ಸಿಡಾಕ್ ಜಂಟಿನಿರ್ದೇಶಕ ಅಶೋಕ ಎಸ್. ನ್ಯಾಮಗೌಡರ, ಹಾಗೂ ತರಬೇತುದಾರರಾದ ಅಷ್ಫಾಕ್ ಸೈಯ್ಯದ ಜಂಟಿಯಾಗಿ ತರಬೇತಿಯನ್ನು ಸಂಯೋಜಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 40 ಜನ ಅಭ್ಯರ್ಥಿಗಳು ಆಸಕ್ತಿಯಿಂದ 10 ದಿನಗಳ ಕಾಲ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here