ಮಹಾನಗರ ಪಾಲಿಕೆಯಲ್ಲಿ ಅವ್ಯವಹಾರ ತಡೆಗೆ ಯುವ ಸೇನ ಸೋಶಿಯಲ್ ಆ್ಯಕ್ಷನ್ ಕ್ಲಬ್ ವತಿಯಿಂದ ಜಿಲ್ಲಾಧಿಕಾರಿಗಳಿ ಮನವಿ

0
100

ಬಳ್ಳಾರಿ : ಮಹಾನಗರ ಪಾಲಿಕೆಯಲ್ಲಿ ಟಿ.ಎಸ್. ಮತ್ತು ಬುಡಾ ನಿವಾಸ ಸ್ಥಳಗಳಿಗೆ ನಮೂನೆ-2 ನೀಡುವುದರಲ್ಲಿ ವಿಳಂಬ ಮತ್ತು ಪಾಲಿಕೆಯ ಕಂದಾಯ ವಿಭಾಗದಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಹಿಡಿಯ ಬೇಕು ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರಿಗೆ ನಗರದ ಯುವ ಸೇನ ಸೋಶಿಯಲ್ ಆ್ಯಕ್ಷನ್ ಕ್ಲಬ್ ಮನವಿ ಮಾಡಿದೆ.
ನಮೂನೆ-2 ನೀಡಬೇಕಾದರೆ ಸುಮಾರು ಐದಾರು ತಿಂಗಳು ಅಸಗುತ್ತಿದೆ. ಈ ವಿಳಂಬಕ್ಕೆ ಕಾರಣ ಕೇಳಿದರೆ ಯಾವುದಾದರೂ ಒಂದು ನೆಪವೊಡ್ಡಿ ಕಾಲಹರಣ ಮಾಡುತ್ತಿದ್ದಾರೆ. ಒಂದು ವೇಳೆ ಹಣವನ್ನು ನೀಡಿದ ಪಕ್ಷದಲ್ಲಿ 5-6 ತಿಂಗಳುಗಳಿಗೆ ನೀಡುವ ನಮೂನೆ-2 ನ್ನು ತುರ್ತಾಗಿ ನೀಡುತ್ತಾರೆ. ಇದಕ್ಕೆ 20 ರಿಂದ 30 ಸಾವಿರ ರೂ ಕೇಳುತ್ತಿದ್ದಾರೆ ಎನ್ನುವ ವಿಷಯ ತಿಳಿದು ಬಂದಿರುತ್ತದೆ. ಆದರೆ ಹಣ ಕೊಡುವವರು ಅಥವಾ ಭ್ರಷ್ಟಚಾರಕ್ಕೆ ಪ್ರೋತ್ಸಾಹ ನೀಡುವವರು ಯಾರು ಮುಂದೆ ಬಂದು ಹೇಳುತ್ತಿಲ್ಲ.
ನೀಡಿದಂತಹ ನಮೂನೆ-2 ರಲ್ಲಿ ಏನಾದರೂ ತಪ್ಪು ಮಾಹಿತಿ ಇದ್ದು, ಅರ್ಜಿದಾರರು ಅದನ್ನು ತಿದ್ದುಪಡಿಗಾಗಿ ಪುನಃ ಅರ್ಜಿ ಸಲ್ಲಿಸಿದರೆ ಅದಕ್ಕೂ ಸಹ 3-4 ತಿಂಗಳುಗಳಿಂದ ವಿಳಂಬ ಮಾಡುತ್ತಿದ್ದಾರೆ.
ಈ ರೀತಿಯಲ್ಲಿ ಸರ್ಕಾರದ ನೌಕರಸ್ಥರು ವ್ಯಾಪಾರ ಚಟುವಟಿಕೆ ಮಾಡುವಂತಹ ವ್ಯಕ್ತಿಗಳು ಇನ್ನಿತರರು ನಮೂನೆ-2 ಪಡೆಯಲು ದಿನನಿತ್ಯ ಪ್ರತಿದಿನ ಅಡ್ಡಾಡಿದರೂ ಕಂದಾಯ ಅಧಿಕಾರಿಗಳು ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೆ ಅವರ ಬಳಿ ನಾಳೆ ಬಾ ಎನ್ನುವ ಸಿದ್ದ ಉತ್ತರ ಇರುತ್ತದೆ
ನಮೂನೆ 2 ಕ್ಕೆಬಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಅರ್ಜಿದಾರರಿಗೆ 21 ದಿನಗಳೊಳಗಾಗಿ ನೀಡುವಂತೆ ಕ್ರಮ ಕೈಗೊಳ್ಳಬೇಕು ಹಾಗು
ಪಾಲಿಕೆಯ ಕಂದಾಯ ಶಾಖೆಗಳಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿಯನ್ನು ಇತರೆ ಶಾಖೆಗಾದರೂ ಅಥವಾ ಬೇರೆ ಇಲಾಖೆಗಾದರೂ ವರ್ಗಾವಣೆ ಮಾಡುವುದರಿಂದ ಕಂದಾಯ ವಿಭಾಗದಲ್ಲಿ ಆಗುತ್ತಿರುವ ಭ್ರಷ್ಟಚಾರವನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡಬಹುದು ಎಂದು ಯುವ ಸೇನ ಸೋಶಿಯಲ್ ಆ್ಯಕ್ಷನ್ ಕ್ಲಬ್ ನ‌ ಅಧ್ಯಕ್ಷ ಮೇಕಲ‌ಈಶ್ವರ ರೆಡ್ಡಿ‌ ಮನವಿ ಪತ್ರದಲ್ಲಿ‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here