ಗೃಹರಕ್ಷಕದಳದ ದೈಹಿಕ ಪರೀಕ್ಷೆಗೆ ಚಾಲನೆ

0
181

ಬಳ್ಳಾರಿ,ಫೆ.16 : ಜಿಲ್ಲೆಯ ರೂಪನಗುಡಿ, ಸಿರುಗುಪ್ಪ, ಕುಡುತಿನಿ ಮತ್ತು ತೋರಣಗಲ್ಲಿನ ಪುರುಷ ಅಭ್ಯರ್ಥಿಗಳಿಗೆ ಮತ್ತು ಬಳ್ಳಾರಿ ಘಟಕದ ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಗೃಹರಕ್ಷಕರ ವಾದ್ಯವೃಂದದ ಸದಸ್ಯರ ದೈಹಿಕ ಪರೀಕ್ಷೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ ಅಡಾವತ್ ಅವರು ಮಂಗಳವಾರ ಬೆಳಗ್ಗೆ ಚಾಲನೆ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ದೈಹಿಕ ಪರೀಕ್ಷೆಯ ಆಯ್ಕೆ ಸಂಬಂಧ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಪುರುಷರಿಗೆ 1200 ಮೀಟರ್ ಓಟ ಮತ್ತು ಮಹಿಳೆಯರಿಗೆ 400 ಮೀಟರ್ ಓಟವನ್ನು ಏರ್ಪಡಿಸಲಾಗಿತ್ತು. ದೈಹಿಕ ಪರೀಕ್ಷೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಗೃಹರಕ್ಷಕದಳದ ಸಮಾದೇಷ್ಟರು ಎಂ.ಎ.ಷಕೀಬ್, ಉಪ ಸಮಾದೇಷ್ಟರು ಬಿ.ಎಸ್.ಕಾಂಬಳೆ, ಜಿಲ್ಲಾ ಗೃಹರಕ್ಷಕದಳ ಕಚೇರಿಯ ಬೋಧಕ ಜಿ.ಹೆಚ್.ಲೊಕೇಶ್, ಉಪ ಪೊಲೀಸ್ ಅಧೀಕ್ಷಕರು, ಡಿ.ಎ.ಆರ್, ರಿಸರ್ವ ಪೊಲೀಸ್ ಇನ್ಸ್‍ಪೆಕ್ಟರ್‍ಗಳು, ಗೃಹರಕ್ಷಕ ಅಧಿಕಾರಿಗಳು,ಪೊಲೀಸ್ ಪೇದೆಗಳು,ಹಾಗೂ ಬಳ್ಳಾರಿ ಘಟಕದ ಗೃಹರಕ್ಷಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here