ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಒಂದು ದಿನದ ತರಬೇತಿ ಕಾರ್ಯಾಗಾರ ಯಶಸ್ವಿ.

0
324

ದಿನಾಂಕ: 16/02/2021 ರಂದು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಬೂದನೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಶಾಲೆಯಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಎಸ್.ಡಿ. ಎಮ್.ಸಿ. ಅಧ‍್ಯಕ್ಷರಾದ ಶ್ರೀ ಅರವಳ್ಳಿ ದೇವೇಂದ್ರಪ್ಪನವರು ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ‍್ಯಾಯರಾದ ಎಸ್.ಎಮ್.ಸರ್ವಮಂಗಳ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾದ ಕೆ.ಗುರುಬಸವರಾಜ ಶಿಕ್ಷಕರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಹಿನ್ನಲೆ ತಿಳಿಸಿದರು. ಶಿಕ್ಷಣ ಹಕ್ಕು ಕಾಯ್ದೆ ಹಿನ್ನಲೆಯಲ್ಲಿ ಸಮಿತಿಯ ರಚನೆಯ ಆಶಯಗಳನ್ನು ವಿವರಿಸಿದರು, ಸಮಿತಿಯ ರಚನೆಯ ವಿವಿಧ ಹಂತಗಳನ್ನು ಚರ್ಸಿಸಿದರು ಹಾಗೂ ಅಧ್ಯಕ್ಷರು ಮತ್ತು ಸದಸ್ಯರ ಕರ್ತವ್ಯಗಳನ್ನು ವಿವರಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಎಸ್.ಎಮ್.ಸರ್ವಮಂಗಳ ಶಿಕ್ಷಕರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಿನ್ನಲೆಯಲ್ಲಿ ಸಮಿತಿಯ ಉದ್ದೇಶಗಳನ್ನು ಚರ್ಚಿಸಿದರು, ಸಮಿತಿಯ ಸದಸ್ಯರ ಅಧಿಕಾರಗಳನ್ನು ತಿಳಿಸಿದರು ಹಾಗೂ ಸಮಿತಿಯ ಸಭೆಗಳನ್ನು ನಡೆಸುವ ಕುರಿತಾದ ನಿಯಮಗಳನ್ನು ಚರ್ಚಿಸಿದರು.
ಕೊನೆಯ ಅವಧಿಯಲ್ಲಿ ಸಮಿತಿಯ ಸದಸ್ಯರು ತರಬೇತಿಯ ಕುರಿತು ಅಭಿಪ್ರಾಯ ಸಲಹೆಗಳನ್ನು ಹೇಳಿದರು, ತರಬೇತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾ ತರಬೇತಿಯ ಆಶಯಗಳಂತೆ ನಡೆಯುವ ಭರವಸೆಯನ್ನು ವ್ಯಕ್ತಪಡಿಸಿದರು.

ಶಿವಾನಂದ ಕೆ. ಶಿಕ್ಷಕರು ಸ್ವಾಗತಿಸಿದರು, ಸುಭಾಷಿಣಿ ಟಿ. ಪ್ರಾಸ್ತಾವಿಕ ನುಡಿದರು ಶ್ರೀನಿವಾಸ್ ಹೆಚ್.ಕೆ. ಶಿಕ್ಷಕರು ನಿರ್ವಹಿಸಿದರು. ಎಸ್.ಡಿ. ಮುಡಿಯಮ್ಮನವರ ವಂದಿಸಿದರು.

LEAVE A REPLY

Please enter your comment!
Please enter your name here