6ನೇ ಪಂದ್ಯ ಗೆಲ್ಲುವತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು.

0
85

ಕ್ರೀಡಾ ವರದಿ:-ಆರ್ ಶಿವರಾಮ್

ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಗಾರ್ಡನ್ ಸಿಟಿ ಬೆಂಗಳೂರಿನ ಹುಡುಗ ಕೆ ಎಲ್ ರಾಹುಲ್ ನಾಯಕತ್ವದ ತಂಡಗಳ ನಡುವೆ ತುರುಸಿನ ಪಂದ್ಯ ನಡೆಯಲಿದೆ.

ಆರು ಪಂದ್ಯಗಳಲ್ಲಿ ಎರಡು ಗೆಲುವನ್ನು ಕಂಡುಕೊಂಡು ನಾಲ್ಕು ಪಂದ್ಯಗಳನ್ನು ಸೋತಿರುವ ರಾಜಸ್ತಾನ ರಾಯಲ್ಸ್ ನಾಲ್ಕು ಅಂಕಗಳೊಂದಿಗೆ ತೃಪ್ತಿಪಟ್ಟುಕೊಂಡಿದೆ. ಎದುರಾಳಿ ಯಾಗಿರುವ ಆರ್ಸಿಬಿ ತಂಡ ಆರು ಪಂದ್ಯಗಳಲ್ಲಿ ಐದು ಪಂದ್ಯವನ್ನು ಗೆದ್ದುಕೊಂಡು ಒಂದು ಪಂದ್ಯವನ್ನು 10 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಮೂರನೇ ಸ್ಥಾನದಲ್ಲಿದೆ. ಆರ್ಸಿಬಿ ತಂಡದ ಪರವಾಗಿ ಆರಂಭಿಕ ಜೋಡಿಯಾಗಿರುವ ವಿರಾಟ್ ಕೊಹ್ಲಿ ಮತ್ತು ನೀಳಕಾಯದ ಹುಡುಗ ದೇವದತ್ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.

ಇವರ ಹೊರತಾಗಿ ಡಿವಿಲಿಯರ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ದೊಡ್ಡದಾಗಿ ಗುಡುಗಿದ್ದರು. ಈಗಾಗಲೇ ಟೆಸ್ಟ್ ಮತ್ತು ಒಂದು ದಿನದ ಪಂದ್ಯದಲ್ಲಿ ಭರವಸೆಯ ಆಟಗಾರನಾಗಿರುವ ವಾಷಿಂಗ್ಟನ್ ಸುಂದರ್ ಅವರ ಸೇವೆಯನ್ನು ಕಡೆಗಣಿಸಲಾಗದು. ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಜಯ ಪಂಜಾಬ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿ ಸ್ಥಿಮಿತತೆಯನ್ನು ಉಳಿಸಿಕೊಳ್ಳುತ್ತಿಲ್ಲ, ಕೆ ಎಲ್ ರಾಹುಲ್ ದೇವದತ್ತ ಪಡಿಕಲ್ ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್ ಅವರು ಗಳಿಕೆಯಲ್ಲಿ ಮಾತ್ರ ಯಶಸ್ಸು ಕಾಣುತ್ತಿದ್ದಾರೆ ಎಲ್ಲಾ ಭಾಗಗಳಲ್ಲಿ ಆಪೂರ್ಣವಾಗಿರುವುದು ಟೀ ಮ್ಯಾನೇಜ್ಮೆಂಟ್ಗೆ ತಲೆನೋವಾಗಿದೆ.

ಆರ್ಸಿಬಿ ತಂಡಕ್ಕೆ ಈ ಸೀಸನ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಹರ್ಷಲ್ ಪಟೇಲ್, ಯಜುರ್ವೇದ ಚಹಾಲ್ಹ ಹಾಗೂ ನಿಖರವಾದ ಯಾರ್ಕರ್ ಗಳನ್ನು ಹಾಕುತ್ತಾ ಬಿಗಿಯಾದ ಬೌಲಿಂಗ್ ನಿರ್ವಹಿಸುವ ಮಹಮ್ಮದ್ ಸಿರಾಜ್ ತಂಡದ ಬೋಲಿಂಗ್ ಪ್ರಮುಖ ಅಸ್ತ್ರವಾಗಲಿದ್ದಾರೆ. ಇನ್ನು ಪಂಜಾಬ್ ಕಿಂಗ್ಸ್ ಪರ ಬೋಲಿಂಗ್ ನಲ್ಲಿ ಮೊಹಮ್ಮದ್ ಶಮಿ ಹರ್ಷದೀಪ್ ಸಿಂಗ್ ರವಿ ಬಿಷ್ನೋಯ್ ಇನ್ನು ಹೆಚ್ಚಿನ ಯಶಸ್ಸನ್ನು ಕಾಣಬೇಕಿದೆ.

ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಹೊನಲು ಬೆಳಕಿನ ಪಂದ್ಯದಲ್ಲಿ ಬಹುಮುಖ್ಯ ಪಾತ್ರ ವಹಿಸಲಿದ್ದು ಟಾಸ್ ಗೆದ್ದವ್ರು ಮೊದಲು ಬ್ಯಾಟಿಂಗ್ ಮಾಡಿಕೊಳ್ಳುವುದು ಖಚಿತ. ಮುಖಾಮುಖಿಯಾಗಿರುವ ಎರಡು ತಂಡಗಳಲ್ಲಿ ಅತಿ ಹೆಚ್ಚು ರನ್ ಪಡೆದ ತಂಡ ಎಂದರೆ ಪಂಜಾಬ್ ಅದು 232 ರನ್ ದಾಖಲಿಸಿದೆ ಅದೇ ರೀತಿ ಬೆಂಗಳೂರು ತಂಡ 226ರ ಗರಿಷ್ಠ ಮಟ್ಟದ ದಾಖಲೆ ಹೊಂದಿದೆ. ಎರಡು ತಂಡಗಳು 26 ಪಂದ್ಯಗಳನ್ನು ಅಡಿದ್ದು ಇದರಲ್ಲಿ ಪಂಜಾಬ್ ತಂಡವು 12 ಬಾರಿ ಬೆಂಗಳೂರು ತಂಡ 14 ಬಾರಿ ಜಯ ಗಳಿಸಿದೆ.

LEAVE A REPLY

Please enter your comment!
Please enter your name here