ಶ್ರೀ ನುಂಕೆಮಲೇ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ.

0
125

ಚಿತ್ರದುರ್ಗ:ಪೆ:27:-ಮೊಳಕಾಲ್ಮೂರು ತಾಲೂಕಿನ ಗ್ರಾಮದಲ್ಲಿರುವ ಶ್ರೀ ನುಂಕಿಮಲೆ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ 27.02.2022 ರಂದು 1999 ಮತ್ತು 2000 ಸಾಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು

1999-2000 ನೇ ವರ್ಷದ ವಿದ್ಯಾರ್ಥಿಗಳು ಬಹಳ ವರ್ಷಗಳ ನಂತರ ಪ್ರೌಢಶಾಲೆಯ ಸ್ನೇಹಿತರನ್ನು ಕಂಡು ಕೆಲವರು ಭಾವುಕರಾದರು ಪ್ರೌಢಶಾಲೆಯಲ್ಲಿ ನೆನಪುಗಳನ್ನು ಮೆಲುಕುಹಾಕಿದರು ನಂತರ ಗುರುಗಳನ್ನು ಕಂಡು ಬಹಳ ವಿಶ್ವಾಸ ವಿನಯದಿಂದ ಅವರನ್ನು ಬರಮಾಡಿಕೊಂಡರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನುಂಕಿಮಲೆ ಸಿದ್ದೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ವಿಜಯಕುಮಾರ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ನಂತರ ಮಾತನಾಡಿದ ಹಿರಿಯ ಶಿಕ್ಷಕರಾದ ದಾಸಪ್ಪನವರು ಮಾತನಾಡಿ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು ಹಾಗೆಯೇ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿ ಮಾತನಾಡಿದ ಅವರು ನಾವು 1982- 83 ನೇ ಸಾಲಿನಲ್ಲಿ ಏಕೋಪಾಧ್ಯಾಯನಾಗಿ 8ನೇ ತರಗತಿಯನ್ನು ಪಂಚಾಯಿತಿ ಕಚೇರಿಯಲ್ಲಿ ಪ್ರಾರಂಭ ಮಾಡಿದೇವು ಎಂದು ತಿಳಿಸಿದರು

ನಂತರ ಮಾತನಾಡಿದ ಹಳೆಯ ವಿದ್ಯಾರ್ಥಿಯಾದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಮ್ಮನಾಯಕ ಮಾತನಾಡಿ ಅಂದಿನ ಗುರುಗಳು ಯಾವ ರೀತಿ ಬೋಧನೆ ಮಾಡಿದರು ಎಂಬುದನ್ನು ಸವಿಸ್ತಾರವಾಗಿ ತಿಳಿಸಿದರು, ಅಂದಿನ ಗುರುವಿನ ವಿದ್ಯೆಗೂ ಇಂದಿನ ಗುರುಗಳ ವಿದ್ಯೆಗೂ ಬಹಳ ಅಂತರವಿದೆ, ಅವರ ಬೋಧನೆ ಮತ್ತು ಪರಿಶ್ರಮದಿಂದ ನಾವು ನಮ್ಮ ಜೀವನವನ್ನು ರೂಪಿಸಿಕೊಂಡಿದ್ದೇವೆ ಎಂದು ತಿಳಿಸಿದರು

ಈ ಕಾರ್ಯಕ್ರಮದಲ್ಲಿ ಹಳೆಯ ಶಿಕ್ಷಕರಾದ ವಾಜಿದ್ ಸಾಹೇಬ್ ಅಶೋಕ್ ಕುಮಾರ್ ದಾಸಪ್ಪ ಮಂಜುನಾಥ್ ನಂದಗೋಪಾಲ್ ಜಿಕೆ ಕೃಷ್ಣಮೂರ್ತಿ ಇನ್ನು ಮುಂತಾದ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

-ನಂದೀಶ್ ನಾಯಕ

LEAVE A REPLY

Please enter your comment!
Please enter your name here