ಸರ್ಕಾರ ಎಲ್ಲಾ ಕಲಾವಿದರ ಹಿತ ಕಾಪಾಡಲು ಪರಿಹಾರ ನಿಯಮಗಳನ್ನು ಪರಿಷ್ಕರಿಸಲಿದೆ, ರಮೇಶ ಪರವಿನಾಯ್ಕರ್

0
82

ಧಾರವಾಡ : ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್‍ಡೌನ್ ಕಾರಣದಿಂದ ಕಲಾವಿದರು,ವಿವಿಧ ಶ್ರಮಿಕ ವರ್ಗಗಳು ಸೇರಿದಂತೆ ಎಲ್ಲ ವರ್ಗಗಳೂ ಕೂಡ ತೀವ್ರ ಸಂಕಷ್ಟದಲ್ಲಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಎಲ್ಲರ ಹಿತಕಾಪಾಡಲು ಮುಂದಾಗಿದೆ.ಕಲಾವಿದರಿಗೆ ಘೋಷಿಸಿರುವ ಪರಿಹಾರ ಪ್ಯಾಕೇಜ್ ನೀಡಲು ವಯೋಮಿತಿ ಸಡಿಲಿಸಿ ಎಲ್ಲರಿಗೂ ನೆರವಿನ ಹಸ್ತ ಚಾಚಲಿದೆ. ಯುವ ಕಲಾವಿದರು ಹತಾಶರಾಗಬಾರದು ಎಂದು ಧಾರವಾಡ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಲಾವಿದರಿಗೆ ಪರಿಹಾರ ನೀಡಲು ನಿಗದಿಗೊಳಿಸಿರುವ 35 ವರ್ಷ ಕನಿಷ್ಠ ವಯೋಮಿತಿಯನ್ನು ಸಡಿಲಿಸಿ ಎಲ್ಲ ವಯೋಮಾನದವರಿಗೂ ಅವಕಾಶ ಕಲ್ಪಿಸಲು ಕೋರಿ ಕನ್ನಡ ಮತ್ತು ಸಂಸ್ಕøತಿ ಸಚಿವರಾದ ಅರವಿಂದ ಲಿಂಬಾವಳಿ ಅವರಿಗೆ ಕೋರಲಾಗಿದೆ.ಈ ಕುರಿತು ಸಚಿವರೊಂದಿಗೆ ಚರ್ಚಿಸಲಾಗಿದ್ದು ಶೀಘ್ರದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಯಾವುದೇ ಕಲಾವಿದರು ಹತಾಶರಾಗಬಾರದು. ದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಬಂದಿರುವ ಈ ಗಂಡಾಂತರದ ವಿರುದ್ಧ ಸಮರೋಪಾದಿಯಲ್ಲಿ ಹೋರಾಟ ನಡೆದಿದೆ. ಇಂತಹ ಸಂಕಷ್ಟದ ಕಾಲದಲ್ಲಿ ಎದೆಗುಂದದೆ ಭರವಸೆಯಿಂದ ಇರಬೇಕು ಎಂದು ಪರವಿನಾಯ್ಕರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here