ವಿಶ್ವ ಪರಿಸರ ದಿನ ಆಚರಣೆ ಶುದ್ಧ ಆಮ್ಲಜನಕ ದೊರಕಬೇಕಾದರೇ ಹೆಚ್ಚೆಚ್ಚು ಗಿಡಗಳು ಅಗತ್ಯ:ಡಿಎಚ್‍ಒ ಜನಾರ್ಧನ್

0
73

ಬಳ್ಳಾರಿ,ಜೂ.05 : ಜಾಗತಿಕವಾಗಿ ಹಸಿರು ಅತ್ಯಂತ ಮಹತ್ವದ್ದು, ಗಿಡಗಳು ಎಲ್ಲ ಕಡೆ ಹೆಚ್ಚೆಚ್ಚು ಇರುವ ರೀತಿಯಲ್ಲಿ ಪ್ರತಿಯೊಬ್ಬ ಸಾರ್ವಜನಿಕರು ತಮ್ಮ ಮನಃಪೂರ್ವಕವಾಗಿ ಕೈಜೋಡಿಸಬೇಕು, ಮುಂದಿನ ಪೀಳಿಗೆ ಶುದ್ಧ ಆಮ್ಲಜನಕ ದೊರೆಯಬೇಕಾದರೆ ಗಿಡಗಳು ಅಗತ್ಯತೆ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ಡಿಎಚ್‍ಒ ಡಾ.ಜನಾರ್ಧನ್ ಹೇಳಿದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಳ್ಳಾರಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರಿಕೀಕರಣ ಹಾಗೂ ಇತರೆ ಕಾರಣಗಳಿಂದ ಪರಿಸರಕ್ಕೆ ತುಂಬಲಾರದ ಹಾನಿ ಉಂಟಾಗುತ್ತಿದ್ದು, ಇದರಿಂದ ಪ್ರಾಣಿ-ಪಕ್ಷಿಗಳ ಜೀವನ ನಿರ್ವಹಣೆಯ ತೊಂದರೆ, ಮನುಕುಲಕ್ಕೆ ಶುದ್ದ ನೀರು, ಶುದ್ದ ಗಾಳಿ ದೊರಕದಂತಾಗುತ್ತಿದೆ. ಅಲ್ಲದೆ ನಾವು ಸರಿಯಾದ ರೀತಿಯಲ್ಲಿ ಪರಿಸರವನ್ನು ನಿರ್ವಹಣೆ ಮಾಡದೆ ಇದ್ದಲ್ಲಿ ವಾಯುಮಾಲಿನ್ಯ, ಜಲ ಮಾಲಿನ್ಯ, ಅಧಿಕ ಉμÁ್ಣಂಶ, ಮಣ್ಣಿನ ಮಾಲಿನ್ಯ,ತೀವ್ರ ರೀತಿಯಲ್ಲಿ ಉಂಟಾಗುತ್ತದೆ. ಈಗಾಗಲೇ ಮಹಾನಗರಗಳಲ್ಲಿ ವಾಯುಮಾಲಿನ್ಯದಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಹಲವು ವರ್ಷಗಳ ಹಿಂದೆ ನದಿಗಳ ನೀರನ್ನು, ಕೆರೆಗಳ ನೀರನ್ನು ನೇರವಾಗಿ ಕುಡಿಯುತ್ತಿದ್ದ ನಾವು ಇಂದು ಅದು ಸಾದ್ಯವಾಗದ ಸ್ಥಿತಿಗೆ ತಲುಪಿದ್ದೆವೆ. ನಾವು ನಿರ್ಲಕ್ಷ ವಹಿಸಿದರೆ ಮುಂದಿನ ದಿನಗಳಲ್ಲಿ ಉಸಿರಾಡಲು ಶುದ್ಧವಾದ ಗಾಳಿಯೇ ಇಲ್ಲದಂತಾಗುವ ದಿನಗಳ ಬರಬಹುದು. ಈಗಿನಿಂದಲೇ ಪರಿಸರದ ಸಂರಕ್ಷಣೆ ಕೈಜೋಡಿಸಲು ಪ್ರತಿ ಮನೆಯ ಮುಂದೆ ಗಿಡಗಳನ್ನು ನೆಡುವುದು, ಮಕ್ಕಳಲ್ಲಿ ಗಿಡಗಳ ಬಗ್ಗೆ ಪ್ರೀತಿ ತೋರುವ ವಿಷಯವನ್ನು ಮನಮುಟ್ಟುವಂತೆ ತಿಳಿಸುವುದು, ಎಲ್ಲ ಸರಕಾರಿ ಕಚೇರಿಗಳಲ್ಲಿ ಲಭ್ಯ ಇರುವ ಸ್ಥಳದಲ್ಲಿ ಗಿಡಗಳನ್ನು ನೆಡುವುದು, ವನಗಳನ್ನು ಹೆಚ್ಚಿಸುವುದು, ಅರಣ್ಯಿಕರಣಕ್ಕೆ ಒತ್ತು ನೀಡಲು ಸಮುದಾಯ ಭಾಗಿಯಾದಲ್ಲಿ ಇನ್ನು ಹಲವು ವರ್ಷಗಳ ನಂತರ ಪರಿಸರ ಸಮತೋಲನಕ್ಕೆ ಖಂಡಿತ ಬರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ಅಬ್ದುಲ್ಲಾ, ಡಾ.ರಾಜಶೇಖರ ರೆಡ್ಡಿ , ಡಾ.ಅನಿಲ್‍ಕುಮಾರ್, ಡಾ.ಇಂದ್ರಾಣಿ, ಡಾ.ಮರಿಯಂಬಿ ವಿ ಕೆ, ಡಾ ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಜಿಲ್ಲಾ ಕೀಟ ಶಾಸ್ತ್ರಜ್ಞೆ ನಂದಾಕಡಿ, ಮಲೇರಿಯಾ ಸಲಹೆಗಾರರಾದ ಪ್ರತಾಪ್, ಚೆನ್ನಕೇಶವ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

LEAVE A REPLY

Please enter your comment!
Please enter your name here