ವಿದ್ಯುತ್ ದರ ಏರಿಕೆ ಹಿಂಪಡೆಯಲು ಮತ್ತು 3 ತಿಂಗಳ ವಿದ್ಯುತ್‍ಬಿಲ್ ಮನ್ನಾ ಮಾಡಲು ಆಗ್ರಹಿಸಿ ಮುಂಬತ್ತಿ ಚಳುವಳಿ

0
173

ವರದಿ:-ರಾಜು ಪಾಳೆಗಾರ್

ಹಾಯ್ ಸಂಡೂರ್ ನ್ಯೂಸ್ ಜೂ 22, ಸಂಡೂರು/ತೊರಣಗಲ್ಲು : ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿ.ವೈ.ಎಫ್.ಐ)
ತಾಲೂಕು ಸಮಿತಿ ವತಿಯಿಂದ ಸೋಮವಾರ ಬೆಳಗ್ಗೆ ವಿದ್ಯುತ್ ಕಚೇರಿ ಮುಂದೆ ಮನೆ ಪತ್ರ ಸಂಜೆ ಮುಂಬತ್ತಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಸತತವಾಗಿ ಏರಿಸುತ್ತಿದೆ. ವಿದ್ಯುತ್ ಬಳಕೆ ಯಾವುದೇ ಐಷಾರಾಮಿ ವಸ್ತುಗಳನ್ನು ಹೊಂದಿರದ ಸಾಮಾನ್ಯ ಕುಟುಂಬಗಳೂ ಇಂದು ತಿಂಗಳಿಗೆ ಸಾವಿರ ರೂಪಾಯಿಗೂ ಹೆಚ್ಚು ವಿದ್ಯುತ್ ಬಿಲ್ ಭರಿಸಬೇಕಾದ ಸ್ಥಿತಿ ಉಂಟಾಗಿದೆ. ಅದರಲ್ಲೂ ಕರೋನ ಹಾವಳಿಯಿಂದ ಜನತೆ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿರುವ ಒಂದು ವರ್ಷದ ಅವಧಿಯಲ್ಲಿ ಒಂದಕ್ಕಿಂತಲೂ ಹೆಚ್ಚು ಬಾರಿ ವಿದ್ಯುತ್ ದರ ಏರಿಸಿರುವುದು ಸರಕಾರದ ಜನ ವಿರೋಧಿ ಧೋರಣೆಗೆ ಸ್ಪಷ್ಟ ಉದಾಹರಣೆ ಆಗಿದೆ ಎಂದರು.

ಕರೋನ ಎರಡನೇ ಅಲೆಯ ನಿರ್ವಹಣೆಯ ಭಾಗವಾಗಿ ರಾಜ್ಯ ಸರ್ಕಾರ ಯಾವುದೇ ಪ್ರಾಯೋಗಿಕ ಸಿದ್ದತೆ ಇಲ್ಲದೆ ಸತತ ಎರಡು ತಿಂಗಳಿಗೂ ಹೆಚ್ಚು ಕಾಲ ಲಾಕ್ ಡೌನ್ ವಿಧಿಸಿ ಜನರನ್ನು ಮನೆಯೊಳಗಡೆ ಇರುವಂತೆ ಬಳವಂತವಾಗಿ ನಿರ್ಬಂಧಿಸಿದೆ. ಇದರಿಂದಾಗಿ ಜನತೆಯ ದುಡಿಮೆಯ ಅವಕಾಶಗಳು ಪೂರ್ಣವಾಗಿ ಕಸಿಯಲ್ಪಟ್ಟಿದ್ದು, ಜೀವನ ನಿರ್ವಹಣೆಗಾಗಿ ಪರದಾಡುವಂತಾಗಿದೆ. ಲಾಕ್ ಡೌನ್ ಸರಕಾರವೆ ವಿಧಿಸಿದ ನಿರ್ಬಂಧವಾಗಿರುವ ಕಾರಣ ಜನತೆಯ ಜೀವನ ನಿರ್ವಹಣೆಯ ಕನಿಷ ಬೇಡಿಕೆಗಳ ಪೂರೈಕೆ ಸರ್ಕಾರದ ಕರ್ತವ್ಯ ಆದರೆ ಯಾವುದೆ ಪ್ರಾಯೋಗಿಕ ಪರಿಹಾರ ಪ್ಯಾಕೇಜ್ ಒದಗಿಸದ ಸರಕಾರ ಜನ ಸಾಮಾನ್ಯರ ಬದುಕನ್ನು ಅತಂತ್ರಗೊಳಿಸಿದೆ ಎಂಬುದಾಗಿ ನುಡಿದರು.

ಇದೇ ಸಂದರ್ಭ ಸರ್ಕಾರದ ಅಧೀನದಲ್ಲಿರುವ ವಿದ್ಯುತ್, ಕುಡಿಯುವ ನೀರುಗಳ ಬಿಲ್‍ಗಳನ್ನು ಹಾಗೂ ನಗರಸಭೆಯ ತೆರಿಗೆಯನ್ನು ಸರರ್ಕಾರ ಸ್ವಯಂ ಪ್ರೇರಣೆಯಿಂದ ಮನ್ನಾ ಮಾಡಬೇಕಿತ್ತು ಆದರೆ ಲಾಕ್‍ಡೌನ್ ಅವಧಿಯಲ್ಲಿಯೂ ದುಬಾರಿ ವಿದ್ಯುತ್‍ಬಿಲ್ ಪ್ರತಿ ಮನೆಗೂ ನೀಡಲಾಗುತ್ತಿದೆ. ಲಾಕ್ ಡೌನ್ ಅವಧಿಯಲ್ಲಿ ಬಿಲ್ ಪಾವತಿಗೆ ಬಲವಂತ ಇಲ್ಲ ಎಂದು ಹೇಳುತ್ತಲೇ ಲಾಕ್ ಡೌನ್ ತೆರವಿನ ನಂತರ ಬಿಲ್‍ಗಳನ್ನು ಒಟ್ಟಿಗೆ ಪಾವತಿಸುವ ಅನಿವಾರ್ಯ ಸ್ಥಿತಿಯನ್ನು ಸರ್ಕಾರ ನಿರ್ಮಿಸುತ್ತಿದೆ.

ಇದೇ ಸಂದರ್ಭ ಸರ್ಕಾರದ ಅಧೀನದಲ್ಲಿರುವ ವಿದ್ಯುತ್, ಕುಡಿಯುವ ನೀರುಗಳ ಬಿಲ್‍ಗಳನ್ನು ಹಾಗೂ ನಗರಸಭೆಯ ತೆರಿಗೆಯನ್ನು ಸರರ್ಕಾರ ಸ್ವಯಂ ಪ್ರೇರಣೆಯಿಂದ ಮನ್ನಾ ಮಾಡಬೇಕಿತ್ತು ಆದರೆ ಲಾಕ್‍ಡೌನ್ ಅವಧಿಯಲ್ಲಿಯೂ ದುಬಾರಿ ವಿದ್ಯುತ್‍ಬಿಲ್ ಪ್ರತಿ ಮನೆಗೂ ನೀಡಲಾಗುತ್ತಿದೆ. ಲಾಕ್ ಡೌನ್ ಅವಧಿಯಲ್ಲಿ ಬಿಲ್ ಪಾವತಿಗೆ ಬಲವಂತ ಇಲ್ಲ ಎಂದು ಹೇಳುತ್ತಲೇ ಲಾಕ್ ಡೌನ್ ತೆರವಿನ ನಂತರ ಬಿಲ್‍ಗಳನ್ನು ಒಟ್ಟಿಗೆ ಪಾವತಿಸುವ ಅನಿವಾರ್ಯ ಸ್ಥಿತಿಯನ್ನು ಸರ್ಕಾರ ನಿರ್ಮಿಸುತ್ತಿದೆ. ಇದು ಜನಸಾಮಾನ್ಯರಿಗೆ ಮುಂದಿನ ದಿನಗಳಲ್ಲಿ ಭರಿಸಲಾಗದ ಬಹುದೊಡ್ಡ ಹೊರೆಯಾಗಲಿದೆ ಉಳ್ಳವರ ಕಿವಿಗಳು ಬಡವರ ಕಷ್ಟಗಳನ್ನು ಆಲಿಸುತ್ತಿಲ್ಲ ಎಂದರು.
ಲಾಕ್‍ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್‍ಬಿಲ್‍ಗಳನ್ನು ರಾಜ್ಯ ಸರ್ಕಾರ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

ಎಸ್. ಕಾಲುಬಾ ಅದ್ಯಕ್ಷರು ತಾಲೂಕು ಸಮಿತಿ. ಎಚ್.ಸ್ವಾಮಿ ಕಾರ್ಯದರ್ಶಿ, ಸೈಯದ್ ಷರೀಫ್ ಜಿಲ್ಲಾ ಮುಖಂಡರು, ಅರ್ಜುನ್ ಕಾರ್ಯದರ್ಶಿ, ಶಿವರೆಡ್ಡಿ, ಹುಲಿಯಪ್ಪ, ಮನೋಜ್, ಅಮರ್, ದೊಡ್ಡ ಬಸವ, ಷಣ್ಮುಖ,ಗೌಸ್, ದಾದಾಪೀರ್, ಇದ್ದರು.
ತೋರಣಗಲ್ಲು ಕೆ. ಇ. ಬಿ. ಜೂನಿಯರ್ ಅಸಿಸ್ಟೆಂಟ್ ಸುಲೋಚನಾ ಅವರಿಗೆ ಮನವಿಯನ್ನು ನೀಡಲಾಯಿತು. ಸಂಜೆ ಮುಂಬತ್ತಿ ಚಳವಳಿ ನಡೆಸಲಾಯಿತು

LEAVE A REPLY

Please enter your comment!
Please enter your name here