ಮತ್ತಾಜನಹಳ್ಳಿಯಲ್ಲಿ ಲಸಿಕಾ ಮೇಳದಂದು 54 ಜನರಿಗೆ ಲಸಿಕೆ ಹಾಕಲು ಹರಸಾಹಸ: ಸಮುದಾಯ ಆರೋಗ್ಯ ಅಧಿಕಾರಿ ನಿರ್ಮಲ,

0
527

ಸಂಡೂರು:ಸೆ:19:- ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಶೆಲಿಯಪ್ಪನ ಹಳ್ಳಿಯ ಆರೋಗ್ಯ ಮತ್ತು ಕ್ಷೇಮ ಕೇಂದ್ರ ವ್ಯಾಪ್ತಿಯ ಮತ್ತಾಜನಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ,ಕಂದಾಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕೋವಿಡ್ 19 ‘ಬೃಹತ್ ಲಸಿಕಾ ಮೇಳ’ವನ್ನು ಹಮ್ಮಿಕೊಳ್ಳಲಾಗಿತ್ತು,

ಈ ಮೇಳದಲ್ಲಿ 54 ಜನರಿಗೆ ಲಸಿಕೆ ನೀಡಲು ಹರಸಾಹಸ ಪಡಬೇಕಾಯಿತು, ಕಾರಣ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದು, ಜ್ವರದ ಭಯ ಇನ್ನೂ ಹೋಗಿಲ್ಲ, ಗ್ರಾಮದಲ್ಲಿ ಕಂದಾಯ, ಪಂಚಾಯತ್, ಆರೋಗ್ಯ ಇಲಾಖೆಯವರು ಮನೆ ಬೇಟಿ ಮಾಡಿ ತಿಳುವಳಿಕೆ ಕೊಟ್ಟರೂ ಸಹ ಜನ ಸ್ಪಂದಿಸುತ್ತಿಲ್ಲ ಎಂದು ನುಡಿದರು,

ಈ ಸಂದರ್ಭದಲ್ಲಿ ಆರೋಗ್ಯ ಸುರಕ್ಷಾಧಿಕಾರಿ ಶ್ರುತಿ ಮಾತನಾಡಿ ಶೆಲ್ಲಪ್ಪನಹಳ್ಳಿಯಲ್ಲಿ 714 ಫಲಾನುಭವಿಗಳಿಗೆ 438, ತೋಕೇನಹಳ್ಳಿಯಲ್ಲಿ 731 ಕ್ಕೆ 193, ದೇವರಲ್ಲಹಳ್ಳಿಯಲ್ಲಿ 268 ಕ್ಕೆ 151, ಮತ್ತು ಮತ್ತಾಜನಹಳ್ಳಿಯಲ್ಲಿ ಇಂದಿನ 54 ಸೇರಿ 115 ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದರು, ನಾವು ಎಷ್ಷು ಸಾರಿ ಹೇಳಿದರು ಜನ ಮಾತು ಕೇಳದ ಕಾರಣ ಕಂದಾಯ, ಪಂಚಾಯತ್ ರಾಜ್, ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಜನರ ಮನವೊಲಿಸಿ ಇಂದು 54 ಜನರು ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿಗಳಾದ ರಂಗಪ್ಪ,ಕಂದಾಯ ಪರಿವೀಕ್ಷಕರಾದ ಯಾರಿಸ್ವಾಮಿ, ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಾದ ಬೀರಪ್ಪ, ಸಮುದಾಯ ಆರೋಗ್ಯ ಅಧಿಕಾರಿ ನಿರ್ಮಲಾ ,ಆರೋಗ್ಯ ಸುರಕ್ಷಾಧಿಕಾರಿ ಶ್ರುತಿ, ಆರೋಗ್ಯ ಮೇಲ್ವಿಚಾರಕರಾದ ಸತೀಶ್,
ಗ್ರಾಪಂ ಸದಸ್ಯರಾದ ಮಾರಕ್ಕ, ಲೆಕ್ಕಾಧಿಕಾರಿ ವೀರೇಶ್, ಗ್ರಾಪಂ ಕಾರ್ಯದರ್ಶಿಗಳಾದ ಜಿ.ಪಾಪಣ್ಣ ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಕುಮಾರಸ್ವಾಮಿ, ಸಹಶಿಕ್ಷಕರಾದ ಸಂಜೀವ್, ಅಮರೇಶ್,
ಅಂಗನವಾಡಿ ಕಾರ್ಯಕರ್ತರಾದ ಶೋಭ, ಆಶಾ ಕಾರ್ಯಕರ್ತರಾದ ನೇತ್ರಾವತಿ , ತಳವಾರ ಬಸವರಾಜ್,
ನೀರ್ಘಂಟಿ ವಾಮದೇವ, ಇತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here